ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತ್ ಹಾಗೂ ಕುಟುಂಬಶ್ರೀ ಮೀಂಜ ಸಿಡಿಎಸ್ ನೇತೃತ್ವದಲ್ಲಿ ಸ್ಥಳೀಯ ಪಟ್ಟತೂರು ಗದ್ದೆಯಲ್ಲಿ ‘ಮಳೆಪೊಲಿಮ 2026’ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಮಳೆಗಾಲದ ಕೃಷಿ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಲ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜಾ ಹಾಗೂ ಸ್ಥಾಯಿ ಸಮಿತಿ ಸದಸ್ಯರು, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಜಿಲ್ಲಾ ಮಿಷನ್ ಅಧಿಕಾರಿಗಳು, ಮಾಜಿ ಪಂಚಾಯತ್ ಸದಸ್ಯರು ಮತ್ತು ಕುಟುಂಬಶ್ರೀ ಮೆಂಬರ್ ಸೆಕ್ರೆಟರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ರೀತಿಯ ರೋಮಾಂಚನಕಾರಿ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಗದ್ದೆಯಲ್ಲಿ ಆಡಿದ ಹಳ್ಳಿಯ ಆಟಗಳು ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಿದವು. ಸಿಡಿಎಸ್ ಸಿಬ್ಬಂದಿ, ಕುಟುಂಬಶ್ರೀ ಸದಸ್ಯರು, ಬಾಲಸಭಾ ಮಕ್ಕಳು ಹಾಗೂ ಊರ ಹತ್ತಿರದ ನೂರಾರು ಜನರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಮೀಂಜ ಕುಟುಂಬಶ್ರೀ ಸಿಡಿಎಸ್ ಚೈರ್ಪೆರ್ಸನ್ ಪದ್ಮಜಾ ಕುಳೂರು ಸ್ವಾಗತಿಸಿ, ವೈಸ್ ಚೈರ್ಪೆರ್ಸನ್ ರುಕ್ಯ ಸಿದ್ದಿಕ್ ವಂದಿಸಿದರು.
ಮಳೆಗಾಲದ ಸಂಭ್ರಮ ಹಾಗೂ ಗ್ರಾಮೀಣ ಸೊಗಡನ್ನು ಮೆರೆದ ‘ಮಳೆಪೊಲಿಮ 2026’ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

