ಕಾಸರಗೋಡು: ವೈಯಕ್ತಿಕ ಕಾರಣದಿಂದ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎಡನೀರು ಸಮೀಪದ ಅದ್ರುಗುಳಿ ನಿವಾಸಿ ಆಶಾಲತ (41) ಸಾವನ್ನಪ್ಪಿದ ದುರ್ದೈವಿ.
ಕಳೆದ ಶುಕ್ರವಾರದಂದು ಅಸ್ವಸ್ಥಗೊಂಡಿದ್ದ ಅವರನ್ನು ಮೊದಲು ಚೆಂಗಳ ಆಸ್ಪತ್ರೆಗೆ, ನಂತರ ಕಾಸರಗೋಡು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಸ್ಪಂದಿಸದೆ ಭಾನುವಾರ ಮಧ್ಯಾಹ್ನ ಅವರು ಸಾವನ್ನಪ್ಪಿದ್ದಾರೆ.
ಸಾವು ಸಂಭವಿಸುವುದಕ್ಕೂ ಮುನ್ನ ಪೊಲೀಸರು ಆಶಾಲತ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಅನಿರೀಕ್ಷಿತ ದುರ್ಘಟನೆಯಿಂದ ಕುಟುಂಬದಲ್ಲಿ ಹಾಗೂ ಕಚೇರಿಯಲ್ಲಿ ತೀವ್ರ ಶೋಕ ಆವರಿಸಿದೆ.

