ಮಂಜೇಶ್ವರ ಎಸ್‌ಎನ್‌ಡಿಪಿ ಶಾಖೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

ಹೊಸಂಗಡಿ: ಎಸ್‌ಎನ್‌ಡಿಪಿ ಮಂಜೇಶ್ವರ ಶಾಖಾ ಯೋಗದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಹೊಸಂಗಡಿಯ ಶ್ರೀ ಆದಿಕಲಾ ಮಂಟಪ ಅಧಿಕ್ಷೇತ್ರ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಇಂದು ಭಕ್ತಿಭಾವದಿಂದ ಆಚರಿಸಲಾಯಿತು.

ಕನಿಲ ಶ್ರೀ ಭಗವತಿ ಕ್ಷೇತ್ರದ ಹಿರಿಯ ಕಾರ್ನವರ್ ಮಂಜಪ್ಪ ಕಾರ್ನವರ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧಿವತ್ತಾಗಿ ಚಾಲನೆ ನೀಡಿದರು.

ಬಳಿಕ ಭಕ್ತವೃಂದದವರಿಂದ ಭಜನಾ ಸಂಕೀರ್ತನೆ ನಡೆಯಿತು.

ಮಧ್ಯಾಹ್ನ ಗುರು ಮಹಾಪೂಜೆ ನೆರವೇರಿದ ನಂತರ ಅನ್ನಪ್ರಸಾದ ವಿತರಿಸಲಾಯಿತು. ಬಳಿಕ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎನ್‌ಡಿಪಿ ಜಿಲ್ಲಾ ಅಧ್ಯಕ್ಷರಾದ ನಾರಾಯಣ ಕೆ., ಎಸ್‌ಎನ್‌ಡಿಪಿ ಮಂಜೇಶ್ವರ ವಲಯ ಅಧ್ಯಕ್ಷರಾದ ಗಂಗಾಧರ ದುರ್ಗಿಪಳ್ಳ, ಅಡ್ವ. ನವೀನ್ ರಾಜ್ ಹೊಸಂಗಡಿ, ದೇವರಾಜ್, ಶಿವಪ್ರಸಾದ್, ಪದ್ಮನಾಭ ಕಡಪ್ಪುರ, ನಾರಾಯಣ ಕನಿಲ, ಸದಾ ಅಂಗಡಿಪದವು, ರಮೇಶ್ ಹೊಸಂಗಡಿ, ಭಾಸ್ಕರ ಸೇರಿದಂತೆ ಮಹಿಳಾ ಸಮಿತಿ ಸದಸ್ಯರು, ಭಕ್ತವೃಂದದವರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!