ಹೊಸಂಗಡಿ ಕೊಲೆ ಪ್ರಕರಣ: ಮೃತ ರಮೇಶ್ ದೇಹದ ಮರಣೋತ್ತರ ಮಹಜರ ಪೂರ್ಣ

​ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ಭೀಕರವಾಗಿ ಕೊಲೆಯಾದ ಕರ್ನಾಟಕ ಮೂಲದ ರಮೇಶ್ (42) ಅವರ ಶವದ ಇನ್ಕ್ವೆಸ್ಟ್ ಮರಣೋತ್ತರ ಸ್ಥಳ ಮಹಜರು ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಿದ್ದಾರೆ.ಶುಕ್ರವಾರ ರಾತ್ರಿ 7:45ರ ಸುಮಾರಿಗೆ ಹೊಸಂಗಡಿಯ ನರಸಿಂಹ ಮೂರ್ತಿ ಅವರ ಹಳೆಯ ಮನೆಯಲ್ಲಿ ರಮೇಶ್ ಅವರ ಮೃತದೇಹ ತಲೆ ಸಂಪೂರ್ಣವಾಗಿ ಜಜ್ಜಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ಇನ್ವೆಸ್ಟ್ ನಡೆಯಿತು.
​ಮೃತನ ತಲೆಯ ಭಾಗಕ್ಕೆ ಭಾರಿ ತೂಕದ ವಸ್ತುವಿನಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿರುವುದು ಪ್ರಾಥಮಿಕ ಮಹಜರಿನಲ್ಲಿ ಕಂಡುಬಂದಿದೆ.ಕೊಲೆ ನಡೆದ ಸ್ಥಳದಿಂದ ರಕ್ತದ ಮಾದರಿಗಳು, ಬೆರಳಚ್ಚುಗಳು ಹಾಗೂ ದಾಳಿಗೆ ಬಳಸಿರಬಹುದಾದ ಅನುಮಾನಾಸ್ಪದ ವಸ್ತುಗಳನ್ನು ವಿಧಿವಿಜ್ಞಾನ ತಂಡ ವಶಕ್ಕೆ ಪಡೆದಿದೆ.

ಸ್ಥಳದಲ್ಲೇ ಇನ್ಕ್ವೆಸ್ಟ್ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ, ಶವಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಈ ಭೀಕರ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿರುವ ಇಬ್ಬರು ಶಂಕಿತರಿಗಾಗಿ ಮಂಜೇಶ್ವರ ಪೊಲೀಸರು ವಿಶೇಷ ತಂಡ ರಚಿಸಿ ಜಾಲ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!