ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಮಹಾಸಭೆ ಅಕ್ಟೋಬರ್ 10 ರಂದು

ಕಡoಬಾರ್: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯು ಅಕ್ಟೋಬರ್ 10 ರಂದು ಸರಕಾರಿ ಪ್ರೌಢ ಶಾಲೆ ಕಡoಬಾರ್ ನ ಶತಮಾನೋತ್ಸವ ಸಭಾಂಗಣದಲ್ಲಿ ಜರಗಲಿದೆ.

ಬೆಳಿಗ್ಗೆ 9 ಗಂಟೆಗೆ ಉಪಜಿಲ್ಲಾ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು.ಬೆಳಿಗ್ಗೆ 10 ಗಂಟೆಗೆ ಪ್ರತಿನಿಧಿ ಸಮ್ಮೇಳನ ಜರಗಲಿದೆ.

ಬೆಳಿಗ್ಗೆ 11.30 ರಿಂದ ಉಪಜಿಲ್ಲಾ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಶಾಸಕರಾದ ಎ ಕೆ ಯಂ ಅಶ್ರಫ್ ನೆರವೇರಿಸಲಿರುವರು. ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಶೋಧನಾ ಪ್ರಾಧ್ಯಪಕರಾದ ರಾಜೇಶ್ ಬೆಜ್ಜoಗಳ ಬಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲಂಪಾಡಿ, ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕಾಸರಗೋಡು ಇದರ ಸದಸ್ಯರಾದ ಪದ್ಮಾವತಿ ಐಲ, ಕೇಂದ್ರ ಸಮಿತಿ ಅಧ್ಯಕ್ಷರಾದ ಸುಕೇಶ್,ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರದೀಪ್ ಕೆ ವಿ,ಶಾಲಾ ಮುಖ್ಯ ಶಿಕ್ಷಕರಾದ ಹರೀಶ್ ಕುಮಾರ್, ಪಿ ಟಿ ಎ ಅಧ್ಯಕ್ಷರಾದ ಬಶೀರ್ ಕನಿಲ ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಜರಗಲಿದೆ. ಮಧ್ಯಾಹ್ನ ಊಟದ ವಿರಾಮದ ದಸರಾ ನಾಡಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಹುಲಿವೇಷ ಕುಣಿತ ಸ್ಪರ್ಧೆ ಹಾಗೂ ಅಧ್ಯಾಪಕರ ಸಮೂಹ ಗಾನ ಸ್ಪರ್ಧೆ ಜರಗಲಿದೆ. ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಜರಗಲಿದೆ

SHARE
Loading spinner

One thought on “ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಮಹಾಸಭೆ ಅಕ್ಟೋಬರ್ 10 ರಂದು”

Leave a Reply

Your email address will not be published. Required fields are marked *

error: Content is protected !!