ಪಿಎಂಎವಿ ಯೋಜನೆ ನಿಧಿ ದುರ್ಬಳಕೆ: ಮಂಜೇಶ್ವರದಲ್ಲಿ ಕ್ಲರ್ಕ್ ವಿರುದ್ಧ ವಂಚನೆ ಪ್ರಕರಣ ದಾಖಲು

ಮಂಜೇಶ್ವರ : ಇಲ್ಲಿನ ಬ್ಲಾಕ್ ಪಂಚಾಯತಿಯಲ್ಲಿ ಪಿಎಂಎವಿ ಯೋಜನೆಯ ಹಣದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಯೋಜನೆಯ ಒಟ್ಟು ಮೊತ್ತದಿಂದ ಸುಮಾರು 17 ಲಕ್ಷ ರೂಪಾಯಿಗಳನ್ನು ಫಲಾನುಭವಿಗಳಿಗೆ ತಲುಪಿಸುವ ಬದಲು, ಸೀನಿಯರ್ ಕ್ಲರ್ಕ್ ಸಿ.ಎನ್. ರಾಂದಾಸ್ ತನ್ನ ಮತ್ತು ಬೇನಾಮಿ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಕೆ. ಹರೀಶ್ ಅವರು ನೀಡಿದ ದೂರಿನ ಮೇರೆಗೆ, ಮಂಜೇಶ್ವರ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 31ರ ಅವಧಿಯಲ್ಲಿ ಈ ಅಕ್ರಮ ನಡೆದಿದ್ದು, ಒಟ್ಟು 16,80,000 ರೂ. ಹಣ ದುರ್ಬಳಕೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!