ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ; ಕೊಡ್ಲಮೊಗರು ಶ್ರೀ ವಾಣಿ ವಿಜಯ ಶಾಲೆಗೆ ಸತತ ಐದನೇ ಬಾರಿ ಓವರ್ ಆಲ್ ಚಾಂಪಿಯನ್ ಪಟ್ಟ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.ಹೈಸ್ಕೂಲ್ ವಿಭಾಗದ ಸಂಸ್ಕೃತ ಕಲೋತ್ಸವದಲ್ಲಿ ಶಾಲೆಯು ಸತತ ಐದನೇ ಬಾರಿಗೆ ಓವರ್ ಆಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸಂಸ್ಕೃತ ಅಧ್ಯಾಪಕರಾದ ಮಧುಶ್ಯಾಮ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದಲ್ಲದೆ, ಹೈಯರ್ ಸೆಕೆಂಡರಿ ಕನ್ನಡ ವಿಭಾಗದಲ್ಲಿಯೂ ಶಾಲೆಯು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವಿದ್ಯಾರ್ಥಿ ಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯಿನಿ ಕೃಷ್ಣ ವೇಣಿ. ಬಿ , ರಕ್ಷಕ ಶಿಕ್ಷಕ ಸಂಘ, ಪ್ರಾಂಶುಪಾಲರಾದ ವಿಜಯಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!