ಮಂಜೇಶ್ವರ ಬ್ಲಾಕ್ ಪಂಚಾಯತ್ 17ಲಕ್ಷ ನುಂಗಿದ ಆರೋಪಿಗಳ ಬಂಧನ ಯಾಕೆ ಇನ್ನು ಆಗಿಲ್ಲ,-ಬಿಜೆಪಿ ಪ್ರಶ್ನೆ

ಹೊಸಂಗಡಿ : ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಬಡವರಿಗೆ ನೀಡಬೇಕಾದ ಪಿ ಎಂ ಅವಾಸ್ ಯೋಜನೆಯ 17ಲಕ್ಷ ರೂ ತನ್ನ ಸ್ವಂತ ಖಾತೆಗೆ ವರ್ಗಯಿಸಿ 17ಲಕ್ಷ ವಂಚನೆ ಮಾಡಿದ ಆರೋಪಿಯನ್ನು 20ದಿನ ಕಳೆದರು ಬಂದಿಸದೆ ಇರುವುದು ಯಾರನ್ನು ಸಂರಕ್ಷಣೆ ಮಾಡಲು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಪೊಲೀಸ್ ಇಲಾಖೆ, ವಿಜಿಲೆನ್ಸ್ ಕ್ರಮವನ್ನು ಖಂಡಿಸಿದ್ದಾರೆ.

ಹಾಗೂ ಬ್ಲಾಕ್ ಆಡಳಿತ ಸಮಿತಿ ಅಧ್ಯಕ್ಷ ರ ಕೈವಾಡ ಇಲ್ಲದಿದ್ದರೆ ಲೂಟಿ ಆಗಿರುವ 17ಲಕ್ಷ ಬ್ಲಾಕ್ ಪಂಚಾಯತ್ ವಶ ಪಡಿಸಲು ಯಾಕೆ ಪೊಲೀಸ್ ಇಲಾಖೆ ಗೆ ಹಾಗೂ ಜಿಲ್ಲಾಧಿಕಾರಿ, dDO ಗಳನ್ನು ಬ್ಲಾಕ್ ಆಡಳಿತ ಸಮಿತಿ ಒತ್ತಡ ಹೇರುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ ಆರೋಪಿಗೆ ನಿರೀಕ್ಷಾನ ಜಮೀನು ಸಿಗುವಂತೆ ಮಾಡಲು ಬಂಧನ ಮಾಡುತ್ತಿಲ್ಲ ಎಂದು ಬಿಜೆಪಿ ದೂರಿದೆ.

17ಲಕ್ಷ ಲೂಟಿ ಭ್ರಷ್ಟಾಚಾರ ಕೇವಲ ಅಧಿಕಾರಿಯ ಮೇಲೆ ಹಾಕಿ ತಪ್ಪಿಸಿಕೊಳ್ಳಲು ಬ್ಲಾಕ್ ಅಧ್ಯಕ್ಷರು ಶ್ರಮಿಸುತ್ತಿದ್ದಾರೆ.
ಚೆಕ್ ಸಹಿ ಮಾಡಿದ ನೀಡಿದ ಬ್ಲಾಕ್ ಕಾರ್ಯದರ್ಶಿ, ಅನುಮತಿ ನೀಡಿದ ಬ್ಲಾಕ್ ಅಧ್ಯಕ್ಷರು, ಆಡಳಿತ ಸಮಿತಿ, 17ಲಕ್ಷ ಒಂದೇ ಖಾತೆಗೆ ವರ್ಗಯಿಸಿದ ಟ್ರೀಸರಿ
ಅಧಿಕಾರಿಗಳನ್ನು ತನಿಖೆ ಮಾಡಬೇಕೆಂದು ಬಿಜೆಪಿ ವಿಜಿಲೆನ್ಸ್ ಗೆ ದೂರು ನೀಡಿದೆ.. ಆದರೆ ವಿಜಿಲೆನ್ಸ್ ಕೇರಳ ಆಡಳಿತ ಪಕ್ಷವಾದ udf ಆದೇಶದಂತೆ ಮುಸ್ಲಿಂ ಲೀಗ್ ಆಡಳಿತ ಮಾಡುವ ಮಂಜೇಶ್ವರ ಬ್ಲಾಕ್ ಪಂಚಾಯತ್ ಗೆ ಇನ್ನು ದಾಳಿ ಮಾಡದೇ ಇರುವುದು, ತನಿಖೆ ಆರಂಭಿಸದೆ ಇರುವುದು ಈ ವಂಚನೆ ಯಲ್ಲಿ ಉನ್ನತ ಕೈ ವಾಡ ಶಂಕೆ ಮೂಡುತಿದೆ,.
ಮಂಜೇಶ್ವರ ಶಾಸಕರು ಕೂಡ ಮುಸ್ಲಿಂ ಲೀಗ್ ಮಾಡಿರುವ 17ಲಕ್ಷ ವಂಚನೆ ಬಗ್ಗೆ ಭ್ರಷ್ಟಾಚಾರ ಬಗ್ಗೆ ಇನ್ನು ಧ್ವನಿ ಎತ್ತದೆ ಇರುವುದು ಭ್ರಷ್ಟ ಚಾರಕ್ಕೆ ಬಾಹ್ಯ ಬೆಂಬಲವೇ ಎಂದು ಬಿಜೆಪಿ ಲೇವಡಿ ಮಾಡಿದೆ.

ಆರೋಪಿಗಳನ್ನು ಬಂದಿಸದೆ ಇದ್ದರೆ, ವಿಜಿಲೆನ್ಸ್ ತನಿಖೆ ಆರಂಭ ಮಾಡದಿದ್ದರೆ ಬಿಜೆಪಿ ಮತ್ತೆ ಬ್ಲಾಕ್ ಕಚೇರಿ ಮುಂದೆ ನಿರಂತರ ಪ್ರತಿಭಟನೆಗೆ ಮುಂದಾಗಲಿದೆ..
ಕೂಡಲೇ ಬಡವರಿಗೆ ನೀಡಬೇಕಾದ 17ಲಕ್ಷ ಬ್ಲಾಕ್ ಅಧ್ಯಕ್ಷರುಹಾಗೂ ಕಾರ್ಯದರ್ಶಿ ಕೈಯಿಂದ ತುಂಬಿಸಬೇಕೆಂದು ಬಿಜೆಪಿ ಅಗ್ರಹಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!