ಉದಯೋನ್ಮುಖ ಕ್ರೀಡಾ ಪ್ರತಿಭೆಗಳಿಗೆ ಮಂಜೇಶ್ವರ ಬಿ ಆರ್ ಸಿ ಯಲ್ಲಿ ಅಭಿನಂದನೆ

ಇತ್ತೀಚೆಗೆ ಕೊಝಿಕೋಡಿನಲ್ಲಿ ನಡೆದ ಕೇರಳ ರಾಜ್ಯ ಇನ್ಕ್ಲೂಸಿವ್ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಕಾಸರಗೋಡು ಜಿಲ್ಲೆ ಯನ್ನು ಪ್ರತಿನಿಧಿಕರಿಸಿದ ಉಪ್ಪಳ ಮಂಜೇಶ್ವರ ಬಿ ಆರ್ ಸಿ ಯ ವ್ಯಾಪ್ತಿಯ ಕ್ರೀಡಾ ಪ್ರತಿಭೆಗಳನ್ನು ಅಭಿನಂದಿಸುವ ಕಾರ್ಯಕ್ರಮವು ಉಪ್ಪಳ ಮಂಜೇಶ್ವರ ಬಿಆರ್‌ಸಿಯಲ್ಲಿ ವೈವಿಧ್ಯಮಯ ರೀತಿಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಶ್ರೀ ಎ ಕೆ ಎಂ ಅಶ್ರಫ್ ಅವರು ಉದ್ಘಾಟಿಸಿ ವಿಶಿಷ್ಟ ಚೇತನ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪ್ರಸ್ತುತ ಸರಕಾರವು ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಈ ಭಾಗದ ಮಕ್ಕಳ ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಉಪ್ಪಳ ಮಂಜೇಶ್ವರ ಬಿ ಆರ್ ಸಿ ಯ ಸಿಬ್ಬಂದಿಗಳ ಸೇವೆಯು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೇ ಶ್ರೀಮತಿ ಇರ್ಫಾನ ಇಕ್ಬಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಾರಾಯಣ ದೆಲಂಪಾಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಹರ್ಷದ್ ವರ್ಕಾಡಿ.,
ಬಿ ಆರ್ ಸಿ ಕೋ ಆರ್ಡಿನೇಟರ್ ಶ್ರೀಮತಿ ಸುಮಯ್ಯ ಟೀಚರ್, ನಿಕ್ಕಟಪೂರ್ವ ಕೋಆರ್ಡಿನೇಟರ್ ಶ್ರೀ ರಾಜಗೋಪಾಲನ್ ಪಿ, ಸೌತ್ ಇಂಡಿಯಾ ಬ್ಯಾಂಕಿನ ಉಪ್ಪಳ ಶಾಖೆಯ ಸಹಾಯಕ ಪ್ರಬಂಧ ಶ್ರೀ ಅಶ್ವಥ್ ಕೆ ಎ. ಮೊದಲಾದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭವನ್ನ ಹಾರೈಸಿದರು.


ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಫಲಕ ಗಳನ್ನು ನೀಡಿ ಅಭಿನಂದಿಸಲಾಯಿತು ಶ್ರೀಮತಿ ಸುಮಾಯ್ಯ ಟೀಚರ್ ಸ್ವಾಗತಿಸಿದರು ಬಿ ಆರ್ ಪಿ ಯ ಸ್ಪೆಷಲ್ ಎಜುಕೇಟರ್ ಶ್ರೀಮತಿ ಬಿಂದ್ಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೀಮಾ ಜೇಸಿಂತೋ ಟೀಚರ್ ಧನ್ಯವಾದವಿತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!