ಕಡಂಬಾರ್ : ತೋಟದ ಕೆಲಸಕ್ಕೆ ಹೋದ ತಾಯಿ, ಏಳು ವರ್ಷದ ಪುತ್ರಿ ನಾಪತ್ತೆ!

​ಮಂಜೇಶ್ವರ: ಕಡಂಬಾರ್ ಬಚ್ಚಪದವಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ದಾವಣಗೆರೆ ಮೂಲದ ಪರಶುರಾಮ ಅವರ ಎರಡನೇ ಪತ್ನಿ ಶೀಲಾ (26) ಮತ್ತು ಏಳು ವರ್ಷದ ಪುತ್ರಿ ನಾಪತ್ತೆಯಾಗಿದ್ದಾರೆ.

ನವೆಂಬರ್ 11ರ ಬೆಳಿಗ್ಗೆ ಕನ್ಯಾನದಲ್ಲಿ ತೋಟದ ಕೆಲಸಕ್ಕೆ ಹೋಗುವುದಾಗಿ ಹೇಳಿ ಮಗಳೊಂದಿಗೆ ತೆರಳಿದ ಶೀಲಾ, ಮತ್ತೆ ಮನೆಗೆ ಹಿಂತಿರುಗಿಲ್ಲ.

ಇದರಿಂದ ಆತಂಕಗೊಂಡ ಪರಶುರಾಮ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಾಯಿ ಹಾಗೂ ಮಗುವಿನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!