ಉಪ್ಪಳದಲ್ಲಿ ವೃದ್ಧ ಮೀನು ಮಾರಾಟಗಾರ್ತಿಗೆ ಕತ್ತಿ ತೋರಿಸಿ ಚಿನ್ನದ ಸರ ದರೋಡೆ
ಉಪ್ಪಳ: ಮೀನು ಮಾರಾಟಗಾರ್ತಿಯಾದ ವೃದ್ಧ ಮಹಿಳೆ ನಡೆದು ಹೋಗುತ್ತಿರುವಾಗ ದಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕತ್ತಿ ತೋರಿಸಿ ಬೆದರಿಸಿ ಕುತ್ತಿಗೆಯಿಂದ ಚಿನ್ನದ ಸರ ಮತ್ತು ಕಿವಿಯಿಂದ ಬೆಂಡೋಲೆ ತೆಗೆದು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಮಣಿಮುಂಡದಲ್ಲಿ ಸುಮಾರು 10 ಗಂಟೆಯ ವೇಳೆಗೆ ಈ ಘಟನೆ ನಡೆಯಿತು.ಮಣಿಮುಂಡದ ರೖಲ್ವೇ ಅಡಿಸೇತುವೆ ಬಳಿ ಘಟನೆ ನಡೆದಿದೆ. ಉಪ್ಪಳ ಶಾರದಾ ನಗರ ನಿವಾಸಿ 60 ರ ಹರೆಯದ ಮೀನು ಮಾರಾಟ ಮಾಡುವ ಮಹಿಳೆ ಉಪ್ಪಳ ಮೀನು ಮಾರುಕಟ್ಟೆಯತ್ತ ನಡೆದು ಬರುವಾಗ ಹೊಂಚು…
