ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕ್ 22ನೇ ಶಾಖೆ ಉದ್ಘಾಟನೆ
ಮಂಗಳೂರು, ಜೂ. 28: ಗ್ರಾಹಕರ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮುದಾಯದ ಪ್ರಗತಿಯೇ ಎಂಸಿಸಿ ಬ್ಯಾಂಕ್‌ನ ಮುಖ್ಯ ಧ್ಯೇಯವಾಗಿದ್ದು, ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು. ದೇರಳಕಟ್ಟೆಯ ಫಾದರ್ ಮುಲ್ಲರ್ ಕಟ್ಟಡ ಸಂಕೀರ್ಣದಲ್ಲಿ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆ ಹಾಗೂ 16ನೇ ಎಟಿಎಂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 114 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್, 2025-26ನೇ ಹಣಕಾಸು ವರ್ಷದಲ್ಲಿ 22.89 ಶೇಕಡಾ…
