ಮರ, ವಿದ್ಯುತ್ ಕಂಬ ಬಿದ್ದು ಕಾರು ಜಖಂ: ದಂಪತಿ ಪಾರು

ವಿಟ್ಲ: ಕೇಪು ಪಡಿಬಾಗಿಲು ಸಮೀಪ ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದಿದ್ದು, ಇದೇ ವೇಳೆ ಡಾಮರು ರಸ್ತೆಯಲ್ಲಿ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ಮರ, ಕಂಬ ಬಡಿದಿದ್ದು, ಕಾರಿನೊಳಗಿದ್ದ ದಂಪತಿಗಳು ಅದೃಷ್ಟವಶಾತ್ ಅಪಾಯವಿಲ್ಲದೇ ಪಾರಾಗಿದ್ದಾರೆ.ಸೋಮವಾರ ಬೆಳಿಗ್ಗೆ ದುರ್ಘಟನೆ ನಡೆದಿದ್ದು, ಕಾರು ಕುದ್ದುಪದವು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿತ್ತು . ಸ್ವಿಫ್ಟ್ ಕಾರಿನ ಮೇಲೆ ಬಿದ್ದಿವೆ. ಬಿದ್ದು ರಭಸಕ್ಕೆ ಕಾರು ಜಖಂಗೊಂಡಿದೆ.ಘಟನೆಯ ಪರಿಣಾಮ ಕೆಲಕಾಲ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬಳಿಕ ಪೊಲೀಸರು, ಮೆಸ್ಕಾಂ ಸಿಬ್ಬಂದಿ ಹಾಗೂ…

Read More

ಬಿಸಿರೋಡು–ಮಂಗಳೂರು ಮಾರ್ಗದಲ್ಲಿ ಬಸ್ ಕೊರತೆ: ಮೆಟ್ಟಿಲಲ್ಲಿ ನೇತಾಡುವ ವಿದ್ಯಾರ್ಥಿಗಳು

ಬಂಟ್ವಾಳ: ಬಿಸಿರೋಡು–ಮಂಗಳೂರು ಮಾರ್ಗದಲ್ಲಿ ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿದಿನ ತುಂಬಿ ತುಳುಕುವ ಬಸ್‌ಗಳ ಮೆಟ್ಟಿಲಲ್ಲಿ ನೇತಾಡುತ್ತಾ ಕಾಲೇಜಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವಭಯದ ನಡುವೆ ಪ್ರಯಾಣಿಸುವಂತಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಕಾಲೇಜು ಸಮಯದಲ್ಲಿ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು…

Read More

ಕರಾವಳಿಗೆ ಮುಂಗಾರು ಶಾಕ್..! ದಕ್ಷಿಣ ಕನ್ನಡದಲ್ಲಿ ಜೂನ್‌ನಲ್ಲೇ 50%ಕ್ಕೂ ಅಧಿಕ ಮಳೆ ಕೊರತೆ

ಮಂಗಳೂರು: ರಾಜ್ಯದಲ್ಲೇ ಅತ್ಯಧಿಕ ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಜೂನ್ ತಿಂಗಳಲ್ಲೇ ಶೇ.50ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗದಿರುವುದು, ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದು ಹಾಗೂ ಮೀನುಗಾರಿಕೆ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ. ಜೂನ್ 28ರವರೆಗೆ ಕಳೆದ ವರ್ಷ 1,080.5 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಕೇವಲ 494.8 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಬಂಟ್ವಾಳದಲ್ಲಿ ನದಿಯ ನೀರಿನ ಮಟ್ಟ 4.47 ಮೀಟರ್ ಇದ್ದು, ಇದು…

Read More

ಐವನ್ ಡಿ’ಸೋಜಾ ನಿವಾಸದಲ್ಲಿ ಎಸ್‌ಐಆರ್ ಎಣಿಕೆ ಪ್ರಕ್ರಿಯೆಗೆ ಚಾಲನೆ

ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ಮನೆ-ಮನೆಗೆ ತೆರಳಿ ನಡೆಸಲಾಗುತ್ತಿರುವ ಎಣಿಕೆ ಹಾಗೂ ನಮೂನೆ ಭರ್ತಿ ಪ್ರಕ್ರಿಯೆಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಮಂಗಳೂರಿನ ನಿವಾಸದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರು ಐವನ್ ಡಿ’ಸೋಜಾ ಹಾಗೂ ಅವರ ಕುಟುಂಬ ಸದಸ್ಯರ ಎಣಿಕೆ ನಮೂನೆಗಳನ್ನು ಭರ್ತಿ ಮಾಡುವ ಮೂಲಕ ಎಸ್‌ಐಆರ್ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್…

Read More

ವಿಶೇಷ ಚೇತನರಿಗೆ ಕೃತಕ ಕಾಲು ವಿತರಣೆ: ಆತ್ಮವಿಶ್ವಾಸದ ಬದುಕಿಗೆ ಶಾಸಕ ರಾಜೇಶ್ ನಾಯ್ಕ್ ಅವರ ನೆರವು

ಬಂಟ್ವಾಳ: ವಿಶೇಷ ಚೇತನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಮ್ಮ ಬಿ.ಸಿ.ರೋಡ್ ಕಚೇರಿಯಲ್ಲಿ ಶಂಭೂರು ನಿವಾಸಿ ತನುಷ್ ಕುಲಾಲ್ ಹಾಗೂ ಮಹಮ್ಮದ್ ಶರೀಫ್ (ಗೂಡಿನ ಬಳಿ) ಅವರಿಗೆ ಕೃತಕ ಕಾಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು, ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯಗಳು ಹಾಗೂ ಸಹಾಯೋಪಕರಣಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಕೃತಕ ಕಾಲಿನ ಮೂಲಕ ಅವರು ಹೆಚ್ಚು ಆತ್ಮವಿಶ್ವಾಸದಿಂದ ಸ್ವಾವಲಂಬಿ ಜೀವನ ನಡೆಸಲು…

Read More

ಬಿ.ಸಿ.ರೋಡ್ ರಿಕ್ಷಾ ನಿಲ್ದಾಣ ಸಮಸ್ಯೆ: ರಮಾನಾಥ ರೈಗೆ ಚಾಲಕರ ಮನವಿ

ಬಂಟ್ವಾಳ: ಬಿ.ಸಿ.ರೋಡ್‌ನ ರಿಕ್ಷಾ ನಿಲ್ದಾಣ ಸಮಸ್ಯೆಗೆ ಸಂಬಂಧಿಸಿದಂತೆ ರಿಕ್ಷಾ ಚಾಲಕರ ನಿಯೋಗವು ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿತು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರು ನಿಲ್ದಾಣದ ಕೊರತೆಯಿಂದ ಎದುರಾಗುತ್ತಿರುವ ತೊಂದರೆಗಳು, ಪ್ರಯಾಣಿಕರಿಗೆ ಆಗುತ್ತಿರುವ ಅಸೌಕರ್ಯ ಹಾಗೂ ತಮ್ಮ ಜೀವನೋಪಾಯದ ಮೇಲಿನ ಪರಿಣಾಮದ ಕುರಿತು ವಿವರಿಸಿದರು. ಚಾಲಕರ ಮನವಿಯನ್ನು ಆಲಿಸಿದ ರಮಾನಾಥ ರೈ, ಸಮಸ್ಯೆಯ ಗಂಭೀರತೆಯನ್ನು ಮನಗಂಡು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ…

Read More

ಡಾ. ಸದಾಶಿವ ಶೆಟ್ಟಿ ಜನ್ಮದಿನ: 150 ಬಡ ಕುಟುಂಬಗಳಿಗೆ ವಸ್ತ್ರದಾನ

ಮಂಗಳೂರು: ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದ ಬಾಯಾರು–ಬೆರಿಪದವು ಘಟಕದ ವತಿಯಿಂದ ಸಮಾಜಸೇವಕ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಜನ್ಮದಿನದ ಅಂಗವಾಗಿ ಸುಮಾರು 150 ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸ್ತ್ರದಾನ ಕಾರ್ಯಕ್ರಮ ನಡೆಯಿತು. ಬೆರಿಪದವು ವಿದ್ಯಾರಣ್ಯ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೇವಾ ಬಳಗದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಹಾಗೂ ಡಾ. ಸದಾಶಿವ ಶೆಟ್ಟಿಯವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರು ಹಾಗೂ…

Read More

ಹಿರಿಯ ಯಕ್ಷಗಾನ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ನಿಧನ

ಕಾಸರಗೋಡು: ಗಡಿನಾಡಿನ ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಮಧೂರು ವೆಂಕಟಕೃಷ್ಣ (87) ಸೋಮವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮಧೂರಿನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುಮಿತ್ರಾ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಾಸರಗೋಡು ಮಾರಾಟ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಮೂಲಕ ಅರ್ಥಧಾರಿ, ವೇಷಧಾರಿ ಹಾಗೂ ಪ್ರಸಂಗಕರ್ತರಾಗಿ ವಿಶಿಷ್ಟ ಹೆಸರು ಗಳಿಸಿದ್ದರು. ತೆಂಕಣ ಯಕ್ಷಗಾನದ…

Read More

ಮೂರು ಸರ್ಕಾರಿ ಕಾಲೇಜುಗಳಲ್ಲಿ ಕಲಾ ವಿಭಾಗದ ಕೆಲವು ವಿಷಯ ಸಂಯೋಜನೆ ಸ್ಥಗಿತ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಾ ವಿಭಾಗದ ಕೆಲವು ವಿಷಯ ಸಂಯೋಜನೆಗಳನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಲು ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ. ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಈ ವಿಷಯ ತಿಳಿಸಿದರು. ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ–ಇತಿಹಾಸ–ಸಮಾಜಶಾಸ್ತ್ರ ಹಾಗೂ ಇತಿಹಾಸ–ಪತ್ರಿಕೋದ್ಯಮ–ಕನ್ನಡ, ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ–ಕನ್ನಡ–ಸಮಾಜಶಾಸ್ತ್ರ ಮತ್ತು ಉಡುಪಿಯ…

Read More

ಕೊಟ್ಟಾರದಲ್ಲಿ ಖಾಸಗಿ ಬಸ್‌ಗೆ ಬ್ರೇಕ್ ವೈಫಲ್ಯ: ಭಾರೀ ಅನಾಹುತ ತಪ್ಪಿಸಿದ ಚಾಲಕ

ಮಂಗಳೂರು: ನಗರದ ಜನನಿಬಿಡ ಕೊಟ್ಟಾರ ಪ್ರದೇಶದಲ್ಲಿ ಖಾಸಗಿ ಬಸ್‌ಗೆ ಬ್ರೇಕ್ ವೈಫಲ್ಯ ಉಂಟಾದ ಘಟನೆ ನಡೆದಿದೆ. ಬ್ರೇಕ್ ಕೈಕೊಟ್ಟ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲು ಚಾಲಕ ಸಮಯಪ್ರಜ್ಞೆ ಮೆರೆದು ಬಸ್‌ನ್ನು ಗೋಡೆಗೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ. ಘಟನೆಯಲ್ಲಿ ಚಾಲಕ ಸೇರಿದಂತೆ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

Read More
error: Content is protected !!