ಪಿವಿಎಸ್ ಕಲಾಕುಂಜ್ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ವಿಶೇಷ ದಿವ್ಯ ದರ್ಶನ
ಮಂಗಳೂರು: ನಗರದ ಪಿವಿಎಸ್ ಕಲಾಕುಂಜ್‌ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ದಿವ್ಯ ದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಅಲಂಕೃತಗೊಂಡಿದ್ದ ಶ್ರೀ ಶ್ರೀ ಕೃಷ್ಣ ಬಲರಾಮ, ಶ್ರೀ ಶ್ರೀ ಗೌರ ನಿತಾಯಿ ಹಾಗೂ ಜಗದ್ಗುರು ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ದಿವ್ಯ ದರ್ಶನವನ್ನು ಸಾವಿರಾರು ಭಕ್ತರು ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗಿನಿಂದಲೇ ಭಕ್ತರು ಮಂದಿರಕ್ಕೆ ಆಗಮಿಸಿ ದೇವರ ದರ್ಶನ ಪಡೆದು, ಹರಿನಾಮ ಸಂಕೀರ್ತನೆ, ಮಂಗಳಾರತಿ ಹಾಗೂ ವಿಶೇಷ…
