ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಮೊದಲ ದಿನವೇ ಕಣ್ತುಂಬಿಕೊಂಡ 1.36 ಲಕ್ಷ ಭಕ್ತರು…. !

ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ ಯಾತ್ರೆ ಸೋಮವಾರದಿಂದ ವಿಧ್ಯುಕ್ತ ವಾಗಿ ಆರಂಭವಾಯಿತು. ಮೊದಲ ದಿನವೇ 1.36 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಸೋಮವಾರ ಶಬರಿಮಲೆ ಋತುವಿನ ಆರಂಭದ ದಿನವಾದ್ದರಿಂದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಸೋಮವಾರದಿಂದ 41 ದಿನಗಳ ಮಂಡಲ ಯಾತ್ರೆಗೆ ಚಾಲನೆ ನೀಡಲಾಯಿತು.ಈ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಯಾತ್ರೆ ಕೈಗೊಂಡು…

Read More

ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ

ಮಂಗಳೂರು: 27 ವರ್ಷ ಗಳ ಶ್ರೀ ಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ ” ಕದ್ರಿ ವಿಷ್ಣು ಪ್ರಶಸ್ತಿ -2025″ ನೀಡಿ ಗೌರವಿಸಲಾಯಿತು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಳೆದ 9 ವರ್ಷ ಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ…

Read More

ಆಮ್ ಆದಿ ಪಾರ್ಟಿ ಮಂಗಳೂರು- ನಾಗರಿಕ ಅಹವಾಲು ಪೋರ್ಟಲ್ ಪ್ರಾರಂಭ

ಮಂಗಳೂರು: ಇಂದಿನಿಂದ ಮಂಗಳೂರಿನ ನಾಗರಿಕರು ಮಂಗಳೂರು ನಗರಸಭೆಯ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ಕುರಿತು ಅಹವಾಲುಗಳನ್ನು https://aapdakshinakannada.org/Grievance/ ಎನ್ನುವ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ದಾಖಲಿಸಬಹುದು ಎಂದುಪೋರ್ಟಲ್ ಸಂಚಾಲಕರಾದ ನೈಜಲ್ ಅಲ್ಬುಕರ್ಕ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿ , ಸುತ್ತುಮುತ್ತಲಿನ ಸಮಸ್ಯೆಗಳ ಫೋಟೋಗಳು, ವೀಡಿಯೋಗಳು ಮತ್ತು ಸಮಸ್ಯೆಗಳ ಕುರಿತಾದ ವಿವರಣೆಗಳನ್ನು ಕೂಡ ನಾಗರಿಕ ಅಹವಾಲು ಪೋರ್ಟಲ್ ಸೇರಿಸಬಹುದಾಗಿದೆ . ಸ್ವಚ್ಛತೆ , ನೀರು , ರಸ್ತೆ ಮತ್ತು ಚರಂಡಿ ವ್ಯವಸ್ಥೆ , ಘನ…

Read More

ರಾಜ್ಯಮಟ್ಟದ‌ ಆಟೋಟ ಸ್ಪರ್ಧೆಯಲ್ಲಿ ಮಿಂಚಿದ ಪೃಥ್ವಿನ್ ಪ್ರಭು

ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ವಿದ್ಯಾರ್ಥಿ ಪೃಥ್ವಿನ್ ಪ್ರಭು ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ 600ಮೀಟರ್ ಓಟದಲ್ಲಿ ಐದನೇ ಸ್ಥಾನವನ್ನು ಪಡೆದು ಶಾಲೆ ಕೀರ್ತಿ ತಂದಿದ್ದಾನೆ. ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಮಾತ್ರವಲ್ಲ ಕಾಸರಗೋಡು ತಂಡ ರನ್ನರ್ಸ್ ಆಗಿ ಹೊರ ಹೊಮ್ಮಿದೆ.ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ, ಅಭಿನಂದನೆಗಳನ್ನು ಸಲ್ಲಿಸಿದರು.

Read More

ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದ …. !

ಮಂಗಳೂರು: ಕನ್ನಡ ಭಾಷೆಯ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ನಿರ್ದೇಶಕ ವಿನಾಯಕ್ ಇನ್ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದರು. ಅವರು ಹೇಳಿದ ಕಥೆ ಕೇಳಿ ಖುಷಿಯಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದೇನೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟು ನನ್ನನ್ನು ಬೆಳೆಸಿರುವ ಹಿರಿಯ ರಂಗಭೂಮಿ ಕಲಾವಿದ ವಿಜಯ್…

Read More

ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿಗಳು ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯ ಭೇಟಿ …. !

ಉಡುಪಿ: ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿಗಳು ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬಿಲ್ಲವ ಸಮಾಜದ ಹಿರಿಯ ಮುಖಂಡರಾದ ಮಂಜುನಾಥ ಪೂಜಾರಿಯವರನ್ನು ಹೆಬ್ರಿಯಲ್ಲಿ ಭೇಟಿ ಮಾಡಿದರು . ಈ ಸಂದರ್ಭದಲ್ಲಿ ಡಿಸೆಂಬರ್ 7ನೇ ತಾರೀಕು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಐತಿಹಾಸಿಕ ಪಾದಯಾತ್ರೆಯ ಪೂರ್ವಭಾವಿ ಸಭೆಯ ಕುರಿತು ಚರ್ಚೆಯನ್ನು ನಡೆಸಲಾಯಿತು . ಮಂಜುನಾಥ ಪೂಜಾರಿ ಅವರನ್ನು ಭೇಟಿ ಮಾಡಿ ನಿಗಮದ ಹಲವಾರು ವಿಷಯಗಳ ಬಗ್ಗೆ ಸುಮಾರು 2…

Read More

ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಭೇಟಿಯಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿ …. !

ಕಾರ್ಕಳ: ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ರವರನ್ನು ಕಾರ್ಕಳದಲ್ಲಿ ಶ್ರೀಗಳು ಭೇಟಿಯಾಗಿ ಐತಿಹಾಸಿಕ ಪಾದಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಆಹ್ವಾನವನ್ನು ನೀಡಿದರು , ಪಾದಯಾತ್ರೆ ನಡೆಯುವ ಸಂದರ್ಭ ದಲ್ಲಿ ದೊಡ್ಡ ಮಟ್ಟದ ಬಹಿರಂಗ ಸಭೆಯಲ್ಲಿ ಗಂಗಾವತಿ ನಗರದಲ್ಲಿ ಭಾಗವಹಿಸಲು ಶ್ರೀಗಳು ತಿಳಿಸಿದರು. ಈಡಿಗ, ಬಿಲ್ಲವ, ನಾಮಧಾರಿ ಧೀವರ ಸೇರಿದಂತೆ 26 ಪಂಗಡಗಳ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗಾಗಿ 2026ರ ಜನವರಿ 6 ರಂದು ಶಕ್ತಿಪೀಠ ಕರದಾಳದಿಂದ ಬೆಂಗಳೂರು ತನಕ 41 ದಿನಗಳ 700 ಕಿಲೋ ಮೀಟರ್…

Read More

ರಾಜ್ಯಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ದ್ವಿತೀಯ ರನ್ನರಪ್ ಪ್ರಶಸ್ತಿ ಮುಡಿಗೇರಿಸಿದ ಎಸ್ ಎ ಟಿ ವಿದ್ಯಾಸಂಸ್ಥೆ

ಮಂಜೇಶ್ವರ: ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ಪ್ರೌಢ ಶಾಲಾ‌ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ರಾಜ್ಯ ಮಟ್ಟದ ಗಣಿತ ಪಝಲ್ ವಿಭಾಗದಲ್ಲಿ ಧನ್ಯ ಸಿ ಐಲ್ ದ್ವಿತೀಯ ಸ್ಥಾನದೊಂದಿಗೆ ಎ ಗ್ರೇಡ್, ನಂಬರ್ ಚಾರ್ಟ್ ವಿಭಾಗದಲ್ಲಿ ಚೈತ್ರಿಕಾ ಎಮ್ ಎ ಗ್ರೇಡ್, ಗ್ರೂಪ್ ಪ್ರೊಜೆಕ್ಟ್ ನಲ್ಲಿ ಅನುಶ್ರೀ ಮತ್ತು ಶೃಷ್ಠಿ ಶೆಟ್ಟಿ ಎ ಗ್ರೇಡ್, ಅದರ್ ಚಾರ್ಟ್ ವಿಭಾಗದಲ್ಲಿ ವರ್ಷ ಜಿ.ಕೆ ಎ ಗ್ರೇಡ್,…

Read More

ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಎಸ್ ಎ ಟಿ ಶಾಲಾ ವಿದ್ಯಾರ್ಥಿಗಳು

ತಿರುವನಂತಪುರದಲ್ಲಿ ಜರಗಿದ ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್ ಎ ಟಿ ಪ್ರೌಢಶಾಲೆಯ ಅದ್ವೈತ್ ಮತ್ತು ದೈವಿಕ್ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಕರಿಸಿ ಉತ್ತಮ ಪ್ರದರ್ಶನವನ್ನು ನೀಡಿದರು. ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಗಳನ್ನು ಸಲ್ಲಿಸಿದರು.

Read More

ಸೌತ್ ಕೆನರಾ ಬೀಡಿ ವರ್ಕರ್ಸ್ ಪೆಡರೇಶನ್ ವತಿಯಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸುವಂತೆ ನವೆಂಬರ್ 24 ರಿಂದ ಮಂಗಳೂರಿನಲ್ಲಿ ಅಹೋರಾತ್ರಿ ಧರಣಿ…!

ಮಂಗಳೂರು: ಸೌತ್ ಕೆನರಾ ಬೀಡಿ ವರ್ಕರ್ಸ್ ಪೆಡರೇಶನ್ ವತಿಯಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನವೆಂಬರ್ 24 ರಿಂದ 27 ರ ತನಕ ಅಹೋರಾತ್ರಿ ಧರಣಿಯನ್ನು ನಗರದ ಮಿನಿ ವಿಧಾನ ಸೌಧದ ಎದುರು ನಡೆಸಲಾಗುವುದು ಇದಕ್ಕೆ ಪರಿಹಾರ ಸಿಗದೇ ಹೋದಲ್ಲಿ ನವೆಂಬರ್ 28ಕ್ಕೆ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದೆಂದು ಸೌತ್ ಕೆನಾರ ಬೀಡಿ ವರ್ಕರ್ಸ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಜೆ ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ ನೀಡಿದರು. ಅವರು ನಗರದ…

Read More
error: Content is protected !!