ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ದೀನ್ ದಯಾಳ್ ಹಾಸ್ಟೆಲ್ ; ಸಚಿವ ಯು.ಟಿ.ಖಾದರ್ ಅವರಿಂದ ಪರಿಶೀಲನೆ
ಕೊಣಾಜೆ: ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ದೀನ್ ದಯಾಳ್ ವಿದ್ಯಾರ್ಥಿಗಳ ವಸತಿ ಸಮುಚ್ಚಯ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ಈ ಹಾಸ್ಟೆಲ್ ಕಟ್ಟಡವು ಕರಾವಳಿಯಲ್ಲಿಯೇ ಅತ್ಯಂತ ಬೃಹತ್ತಾದ ವಸತಿ ಸಮುಚ್ಚಯವಾಗಿದೆ. ಸುಮಾರು ಆರು ಸುವ್ಯವಸ್ಥಿತ ಕಟ್ಟಡದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳುವ…
