Headlines

ಭಾರತದ ಸಾಂಸ್ಕೃತಿಕ ಪರಂಪರೆಗೆ ದೊರೆತ ಗೌರವ: ಸಂಸದ ಚೌಟ

ಮಂಗಳೂರು: 2014 ರಲ್ಲಿ ಪ್ರಾರಂಭ ಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ಭಾನುವಾರಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಯುತ ಜೀವನವನ್ನು ಹೇಗೆ ಪಡೆಯಬೇಕು ಎಂಬುದನ್ನು ಭಾರತವು ಜಗತ್ತಿಗೆ ಕಲಿಸಿದೆ. ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯೋಗದ ಮಹತ್ವವು ಎಷ್ಟು ಅಗತ್ಯವಾಗಿದೆ…

Read More

ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಬಲಗೊಂಡರೆ ಮಾತ್ರ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ – ಸಿ.ಅರ್ಪಿತಾ

ಮನುಷ್ಯ ತನ್ನ‌ ಸ್ವಾರ್ಥಕ್ಕಾಗಿ ಪರಿಸರವನ್ನೇ ಹಾಳುಗೆಡಹುತ್ತಿದ್ದು,ಅದರ ಪರಿಣಾಮ ಇಡೀ ಭೂಮಂಡಲದ ಮೇಲೆ ಬೀರುತ್ತಿದೆ.ಉಳ್ಳವರ ಸ್ವಾರ್ಥಲಾಲಸೆಗಾಗಿ ಇಡೀ ಪರಿಸರವನ್ನೇ ಬಲಿಕೊಡಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದಾಗ ಮಾತ್ರವೇ ಭವಿಷ್ಯತ್ತಿನಲ್ಲಿ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ ಎಂದು ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪೂಜ್ಯನೀಯ ಸಿಸ್ಟರ್ ಅರ್ಪಿತಾರವರು ಅಭಿಪ್ರಾಯಪಟ್ಟರು. ಅವರು ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಪ್ಪು ಸಂತ ಜೆರೋಸಾ ಫ್ರೌಢಶಾಲೆಯಲ್ಲಿ ಜರುಗಿದ ಗಿಡ ಬೆಳೆಸೋಣ,ನಾಡು ಉಳಿಸೋಣ…

Read More

ರಾಜ್ಯಕ್ಕೆ ರ್ಯಾಂಕ್ ತಂದ ಚಿನ್ಮಯ್ ಜಿ.ಕೆ. ಸಹಿತ ಇತರ ಸಾಧಕರಿಗೆ ಸಮ್ಮಾನ

ಪರಕಾಯ ಪರಿಶ್ರಮದಿಂದ ಎಲ್ಲವೂ ಸಿದ್ಧಿಸುತ್ತದೆ ಬೆಳ್ತಂಗಡಿ, ಜೂ.20: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ನಿಶ್ಚಲವಾಗಿ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ.ಯೇ ಒಂದು ಪ್ರತಿಷ್ಠಿತ ಉದಾಹರಣೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ಸಿಇಟಿಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಹಾಗೂ ಬೋರ್ಡ್, ಜೆಇಇ ಸೇರಿದಂತೆ ಇತರೆ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು…

Read More

ಕಡಬ: ಪಿಎಂ-ಜನ್‌ಮನ್ ಯೋಜನೆಯಡಿ 2.75 ಕೋಟಿ ವೆಚ್ಚದಲ್ಲಿ ಕೊರಗ ಕಾಲೊನಿಯಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟನೆ

ಕಡಬ: ಕೇಂದ್ರ ಸರ್ಕಾರದ ಪಿಎಂ-ಜನ್‌ಮನ್ ಯೋಜನೆಯಡಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲೊನಿಯಲ್ಲಿ 2.75 ಕೋಟಿ ರೂ. ಅನುದಾನದಡಿ ಅಭಿವೃದ್ದಿಪಡಿಸಿದ ರಸ್ತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ಕೊರಗ ಸಮುದಾಯ ಹಿರಿಯ ಮಹಿಳೆ ಚೋಮು ಅವರೊಂದಿಗೆ ಜತೆಯಾಗಿ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ…

Read More

ಪ್ರಕೃತಿ ಸಂರಕ್ಷಣೆ ಅಲ್ಲ ಪ್ರಕೃತಿ ಆರಾಧನೆ ಭಾರತದ ಮಾದರಿ : ಎಂ.ಎಲ್. ಅಶ್ವಿನಿ

ನೀಲೇಶ್ವರ : ಪ್ರಕೃತಿಯ ವಿದ್ಯಮಾನಗಳ ಮುಂದೆ ಮಾನವನು ಅತ್ಯಲ್ಪನಾಗಿದ್ದಾನೆ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದಲ್ಲ, ಪ್ರಕೃತಿಯನ್ನು ಆರಾಧಿಸುವುದೇ ಭಾರತವು ಜಗತ್ತಿಗೆ ತೋರಿಸಿಕೊಟ್ಟ ಮಾದರಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಕಡಿಞ್ಞಿಮೂಲೆಯಲ್ಲಿ ಮ್ಯಾಂಗ್ರೋವ್ ನರ್ಸರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮ್ಯಾಂಗ್ರೋವ್ ವನಗಳ ಪ್ರಸ್ತುತತೆಯ ಬಗ್ಗೆ ಕಳೆದ ಕೆಲವು ದಶಕಗಳಿಂದ ಕೇರಳವು ಚರ್ಚಿಸುತ್ತಿದೆ. ಜೈವಿಕ ವೈವಿಧ್ಯತೆಯ ಉಗ್ರಾಣವಾಗಿರುವ ಮ್ಯಾಂಗ್ರೋವ್ ವನಗಳು ಕರಾವಳಿ ಸಂರಕ್ಷಣೆಗೂ ಸಹಕಾರಿಯಾಗಲಿವೆ ಎಂಬುದು ಸಾಬೀತಾಗಿದೆ. ಲಕ್ಷಾಂತರ ಮ್ಯಾಂಗ್ರೋವ್ ಸಸಿಗಳನ್ನು ನೆಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಡಿಞ್ಞಿಮೂಲೆಯ ಪಿ.ವಿ….

Read More

ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026ಕ್ಕೆ ನವೀದ್ ಮುಲ್ಲಾ ಆಯ್ಕೆ

ಕಾಸರಗೋಡು: ಧಾರವಾಡ ಜಿಲ್ಲೆಯ ಖ್ಯಾತ ಲೇಖಕ, ಸಾಹಿತಿ ಹಾಗೂ ಸಮಾಜಸೇವಕರಾದ ನವೀದ್ ಮುಲ್ಲಾ ಅವರು ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026”ಗೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ “ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಐಎಎಸ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನವೀದ್…

Read More

ಮಲಪ್ಪುರಂ ನಲ್ಲಿ ಬೈಕ್ ಅಪಘಾತ : ಗಂಭೀರ ಗಾಯಗೊಂಡಿದ್ದ ಮಂಜೇಶ್ವರ ವರ್ಕಾಡಿ ಯುವಕನ ದಾರುಣ ಅಂತ್ಯ

ಮಂಜೇಶ್ವರ/ಮಲಪ್ಪುರಂ : ಮಲಪ್ಪುರಂ ಜಿಲ್ಲೆಯ ವಳಾಚೇರಿ ಕಂಜೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಂಜೇಶ್ವರ ವರ್ಕಾಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಬದರುಲ್ ಅಫೀಸ್ (23) ಸಾವನ್ನಪ್ಪಿದ ದುರ್ದೈವಿ. ​ಕುಟ್ಟಿಪುರಂನಿಂದ ಕೋಯಿಕ್ಕೋಡ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ವಳಾಚೇರಿ ಸಿಐ ಕಚೇರಿಯ ಸಮೀಪದಲ್ಲಿ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದ ಭಿತ್ತಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ​ತಲೆಗೆ ತೀವ್ರ…

Read More

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ಭರ್ಜರಿ ಬೇಟೆ: 595.68 ಗ್ರಾಂ ಚಿನ್ನದೊಂದಿಗೆ ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ

ಮಂಜೇಶ್ವರ: ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 595.68 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳ ಮೂಲದ ಸುರ್ಜಿತ್ ಖೋರಾಯ್ ಎಂಬಾತನನ್ನು ಎಕ್ಸೈಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ​ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KA 19 F 3416) ಈತ ಚಿನ್ನವನ್ನು ಸಾಗಿಸುತ್ತಿದ್ದನು. ಖಚಿತ ಮಾಹಿತಿಯ ಮೇರೆಗೆ ತಪಾಸಣೆ ನಡೆಸಿದ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜೋಸೆಫ್ ಪಿ.ಎ. ಮತ್ತು ಅವರ…

Read More

ಮಳೆಯಿಂದ ಮನೆ ಕುಸಿತ: ಕುಟುಂಬದ ನೆರವಿಗೆ ಧಾವಿಸಿದ ಕಲ್ಕಿ ಯುವಕರ ತಂಡ

ಮಂಜೇಶ್ವರ, ಜೂನ್ 20: ಈ ಬಾರಿಯ ಭಾರೀ ಮಳೆಯಿಂದ ಮಂಜೇಶ್ವರ ಸಮೀಪದ ಮಜಿಬೈಲ್ ಪ್ರದೇಶದಲ್ಲಿ ಮನೆಯೊಂದು ಹಾನಿಗೊಳಗಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ನೆರವಿಗೆ ಸ್ಥಳೀಯ ಕಲ್ಕಿ ಯುವಕ ತಂಡ ಧಾವಿಸಿ ಮಾನವೀಯತೆ ಮೆರೆದಿದೆ. ಕೇಶವ ಮತ್ತು ಲಲಿತ ದಂಪತಿಗಳ ಮನೆ ಮಳೆಯಿಂದ ಹಾನಿಗೊಳಗಾಗಿದ್ದು, ಕುಟುಂಬದ ಸದಸ್ಯರು, ಸೊಸೆಯಂದಿರು ಹಾಗೂ ಪುಟ್ಟ ಮಕ್ಕಳು ಇದೇ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವನೋಪಾಯಕ್ಕಾಗಿ ಮನೆಯ ಒಬ್ಬ ಸದಸ್ಯ ಲಾಟರಿ ವ್ಯವಹಾರ ನಡೆಸುತ್ತಿದ್ದು, ಮನೆ ಹಾನಿಗೊಳಗಾದ ಕಾರಣ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು….

Read More

ಆರಿಕ್ಕಾಡಿ: ತೆರವುಗೊಂಡ ಟೋಲ್‌ಗೇಟ್ : ಆದರೆ ಅಪಾಯಕಾರಿ ಹಂಪ್‌ಗಳ ಕಾಟ ನಿರಂತರ

ಮಂಜೇಶ್ವರ : ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್ ತೆರವುಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಅಲ್ಲಿನ ಅವೈಜ್ಞಾನಿಕ ಹಂಪ್‌ಗಳು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ.ಟೋಲ್ ಇಲ್ಲದ ಕಾರಣ ಅತಿವೇಗದಲ್ಲಿ ಬರುವ ವಾಹನಗಳು, ಇದ್ದಕ್ಕಿದ್ದಂತೆ ಹಂಪ್ ಕಂಡು ಬ್ರೇಕ್ ಹಾಕುತ್ತಿರುವುದು ಸರಣಿ ಅಪಘಾತಗಳಿಗೆ ಕಾರಣವಾಗಿದೆ. ​ ಕಳೆದ ದಿನ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿರುವುದು ಇಲ್ಲಿನ ದುಸ್ಥಿತಿಗೆ ಸಾಕ್ಷಿಯಾಗಿದೆ. ಟೋಲ್‌ಗೇಟ್ ಇಲ್ಲವೆಂದು ತಿಳಿದು ವೇಗವಾಗಿ ಬರುವ ವಾಹನ ಸವಾರರಿಗೆ, ಹತ್ತಿರ ಬಂದಾಗ ಮಾತ್ರ ಹಂಪ್ ಕಾಣಿಸಿಕೊಳ್ಳುತ್ತದೆ. ಇದರಿಂದ ದಿಢೀರ್ ಬ್ರೇಕ್ ಹಾಕುವ…

Read More
error: Content is protected !!