Headlines

ಸಂಬಂಧಿಕರ ಮನೆಗೆ ಆಗಮಿಸಿದ್ದ ಅನ್ಯ ರಾಜ್ಯದ ಇಬ್ಬರು ಬಾಲಕಿಯರಲ್ಲಿ ಜ್ವರದ ತೀವ್ರ ತೊಂದರೆ ಕಾಣಿಸಿಕೊಂಡ ಪರಿಣಾಮ ಒಬ್ಬಳ ಸಾವು , ಮತ್ತೊಬ್ಬಳು ತೀವ್ರ ನಿಗಾ ಘಟಕದಲ್ಲಿ ದಾಖಲು

ಮಂಜೇಶ್ವರ: ಸಂಬಂಧಿಕರ ಮನೆಗೆ ಆಗಮಿಸಿದ್ದ ಅನ್ಯ ರಾಜ್ಯದ ಇಬ್ಬರು ಬಾಲಕಿಯರಲ್ಲಿ ಜ್ವರದ ತೀವ್ರ ತೊಂದರೆ ಕಾಣಿಸಿಕೊಂಡ ಪರಿಣಾಮ ಒಬ್ಬಳು ಸಾವನ್ನಪ್ಪಿ, ಮತ್ತೊಬ್ಬಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿರುವ ದುರ್ಘಟನೆ ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಲ್ಲಿ ನಡೆದಿದೆ. ಹರ್ಯಾನಾ ಮೂಲದ 9 ವರ್ಷದ ಮಾಹಿ ಎಂಬ ಬಾಲಕಿ ಸಾವನ್ನಪ್ಪಿದರೆ, ಅವಳ ಜೊತೆಯಲ್ಲಿದ್ದ 13 ವರ್ಷದ **ಕಾಣಿಕಾ ಎಂಬ ಬಾಲಕಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ಇಬ್ಬರು ಬಾಲಕಿಯರು ಅಸ್ವಸ್ಥಗೊಂಡ ಸಂದರ್ಭ ಸ್ಥಳೀಯರಲ್ಲಿ…

Read More

ಪಾವಳದಲ್ಲಿ ನಾಟಕ ಗರಡಿ ಕಾರ್ಯಾಗಾರ

ವರ್ಕಾಡಿ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮತ್ತು ವರ್ಕಾಡಿ ಪಂಚಾಯತ್ ನೇತೃತ್ವ ಸಮಿತಿ ವತಿಯಿಂದ ನಾಟಕ ಗರಡಿ ಎಂಬ ಅಭಿನಯ ತರಬೇತಿ ಕಾರ್ಯಕ್ರಮವು ಪಾವಳದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಕವಿ ಸಾಹಿತಿ ಚೇತನ್ ವರ್ಕಾಡಿ ನೆರವೇರಿಸಿದರು. ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಿಶೋರ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಸುಧಾಕರ್ ಕಲ್ಲೂರು, ಸಂತೋಷ್ ಪ್ರೆಂಡ್ಸ್ ಕ್ಲಬ್ ಲೈಬ್ರರಿಯ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಪಾವಳ, ಕವಿ-ಸಾಹಿತಿಯಾದ…

Read More

ಅಪೂರ್ಣವಾಗಿಯೇ ಉಳಿದಿರುವ ಬೆಂದೂರ್ವೆಲ್ ನ ಕಾಂಕ್ರೀಟಿ ರಸ್ತೆ … !

ಸಂತ ಥೆರೆಸಾ ಶಾಲೆಯ ಮುಂದಿನ ಬೆಂದೂರ್ವೆಲ್ ರಸ್ತೆಯು ಸಂಪೂರ್ಣ ಕಾಂಕ್ರೀಟಿಕರಣವಾಗದೆ ಹಾಗೆಯೇ ಉಳಿದು ಕೊಂಡಿದೆ . ಇದು ಯಾವಾಗ ಪೂರ್ತಿಯಾಗುತ್ತೋ ಎನ್ನುವ ಯಕ್ಷ ಪ್ರಶ್ನೆಯೊಂದು ಉದ್ಭವಿಸಿದೆ . ಕಳೆದ ಕೆಲವಾರು ದಿನಗಳಿಂದ ರಸ್ತೆಯ ಕಾಂಕ್ರೀಟಿಕರಣ ಸಂಪೂರ್ಣ ಆಗದ ಕಾರಣ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳಿಗೆ ತೊಂದರೆ ಯಾಗಿದೆ. ದಿನ ನಿತ್ಯವೂ ಈ ಮಾರ್ಗವಾಗಿ ಹಲವು ವಾಹನಗಳು ಸಂಚಾರ ನಡೆಸುತ್ತದೆ . ಈ ಮಾರ್ಗದ ಕಾಂಕ್ರೀಟಿಕರಣವನ್ನು ಆದಷ್ಟು ಬೇಗನೇ ಪೂರ್ಣಮಾಡಿ ವಾಹನ ಸವಾರರ ಸಂಚಾರಕ್ಕೆ ಅನುವುವಾಗುವಂತೆ ಸ್ಥಳೀಯ…

Read More

ಕರಾವಳಿ ಮೀನುಗಾರರಿಗೆ ತಟ್ಟಿದ ಮೊಂತಾ ಚಂಡಮಾರುತದ ಎಫೆಕ್ಟ್ …. !

ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್ ನಲ್ಲಿ ಇರುವ ಬೋಟ್ ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ.ಸರ್ವಋತು ಬಂದರು…

Read More

ರೂ.60 ಕೋಟಿಯಲ್ಲಿ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ. ಪ್ರಥಮ ಸಭೆಯಲ್ಲೇ ರೂ.13.75 ಕೋಟಿ ದೇಣಿಗೆ ವಾಗ್ದಾನ. ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಖ್ಯಾತ ಉದ್ಯಮಿಗಳಾದ ‘ಬಂಜಾರ’ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ ಆಯ್ಕೆ.

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಮಾಸ್ಟರ್ ಪ್ಲಾನ್ ಬಗ್ಗೆ ಜೀರ್ಣೋದ್ದಾರ, ಅಭಿವೃದ್ಧಿ ಸಮಿತಿಯ ಮೊದಲ ಸಭೆಯಲ್ಲಿಯೇ ಚರ್ಚೆ ಮಾಡಲಾಯಿತು.ಈಗಾಗಲೇ ಉದ್ಯಮಿಗಳಿಂದ 13.75 ಕೋಟಿ ರೂ.ದೇಣಿಗೆಯ ವಾಗ್ದಾನವಾಗಿದೆ ಎಂದು ಶಾಸಕ ಅಶೋಕ್‌ ಕುಮಾ‌ರ್ ರೈ ಹೇಳಿದರು. ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಯ ಕುರಿತು 25 ಮಂದಿ ಪ್ರಮುಖರನ್ನೊಳಗೊಂಡ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ದೇವಳದ ಕಚೇರಿ ಸಭಾಂಗಣದಲ್ಲಿ ಅ.25ರಂದು ಸಂಜೆ ನಡೆದ ಪ್ರಥಮ ಸಭೆಯ ಕೊನೆಯಲ್ಲಿ ಅವರು ಪತ್ರಿಕಾ ಮಾಧ್ಯಮದವರ ಜೊತೆ…

Read More

ಸೀತಾಂಗೋಳಿ ಕಾರ್ಯ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಭಿಸಿದ ” ಕಲ್ಪ ವೃಕ್ಷ ” ಜ್ಞಾನವಿಕಾಸ ಕೇಂದ್ರ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕಾಸರಗೋಡು , ಸೀತಾಂಗೋಳಿ ಕಾರ್ಯ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಬಿಸಿದ ” ಕಲ್ಪ ವೃಕ್ಷ ” ಜ್ಞಾನವಿಕಾಸ ಕೇಂದ್ರ ಸೀತಾಂಗೋಳಿ ಇದರ ಮೊದಲ ಸಭೆಯು ಜ್ಞಾನಿಕಾಸ ಸಮನ್ವಯಧಿಕಾರಿ ಶ್ರೀಮತಿ ಸೌಮ್ಯ ಅವರ ಮಾರ್ಗದರ್ಶನದಲ್ಲಿ ವೀರ ಹನುಮನ್ ಕ್ಲಬ್ ಮುಕಾರಿಕಂಡದಲ್ಲಿ ನಿನ್ನೆ ನಡೆಯಿತ್ತು. ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ , ಜ್ಞಾನಿಕಾಸ ಕೇಂದ್ರದ ಸಭೆ ಹಾಗೂ ನಿರ್ವಣೆ ಬಗ್ಗೆ ತುಂಬಾ ಪ್ರಯೋಜನಕಾರಿಯಾಗಿದೆ…

Read More

ಮಂಗಳೂರಿನ ಪತ್ರಿಕಾಭವನದಲ್ಲಿ ‘ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ .

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಈ ಭಾರಿ ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಕಾವೇರಿ ಎಂಬ ಕನ್ನಡ ಕೃತಿಯನ್ನು ಮಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಂಡ ಕೃತಿ ಸೋಮಯ್ಯ ನಗರದ ಪತ್ರಿಕಾ…

Read More

ಕುಂಬಳೆ : ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವು

ಕುಂಬಳೆ, ಅ. 27 : ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ಕಾಸರಗೋಡಿನ ಪೆರ್ಮುದೆ ಸಮೀಪದ ಕುಂಬಳೆ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ನಡೆದಿದೆ. ರವಿವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಶರೀಫ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶರೀಫ್ ದುಬೈ ಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ರುಕ್ಸಾನಾ ಹಾಗೂ ಇಬ್ಬರು ಮಕ್ಕಳು ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆ ಮರಳಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ…

Read More

ಮಂಜೇಶ್ವರ, ಹೊಸಬೆಟ್ಟು ಹಿಂದೂ ರುದ್ರಭೂಮಿ ಲೋಕಾರ್ಪಣೆ .

ಮಂಜೇಶ್ವರ: ಇಲ್ಲಿನ ಹೊಸ ಬೆಟ್ಟು ಗುಡ್ಡೆ ರುದ್ರ ಭೂಮಿಯ ನೂತನ ಕಟ್ಟಡಗಳು ಹಾಗೂ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗುಡ್ಡೆ ಹಿಂದೂ ರುದ್ರಭೂಮಿ ಪರಿಪಾಲನ ಸಮಿತಿಯ ಅಧ್ಯಕ್ಷರಾದ ಯಾದವ್ ಬಡಾಜೆ ವಹಿಸಿದ್ದರು. ಸುಸಜ್ಜಿತ ಕಟ್ಟಡಗಳು, ಸಿಲಿಕಾನ್ ಪೆಟ್ಟಿಗೆ ವ್ಯವಸ್ಥೆ, ಕೊಳವೆಬಾವಿ, ಅಶ್ವತ ಕಟ್ಟೆ ಸೇರಿದಂತೆ ಸುಮಾರು 28 ಲಕ್ಷ ರೂಪಾಯಿ ವೆಚ್ಚದ ರುದ್ರಭೂಮಿ ಅಭಿವೃದ್ಧಿ ಯೋಜನೆಗಳನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾ ಎಂ. ಶಿಲಾ ಫಲಕವನ್ನು…

Read More

ಅಮೃತ ಪ್ರಕಾಶ ಪತ್ರಿಕೆ 45ನೇ ಸರಣಿ ಕೃತಿ ಬಿಡುಗಡೆ .

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರ ಕಥಾ ಪುಸ್ತಕ ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು…

Read More
error: Content is protected !!