ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣ .ಆರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರ ಬಂಧನ .
ಮಂಗಳೂರು: ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರನ್ನೂ ಬಂಧಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆ. 23 ರಂದು ರಾತ್ರಿ ಸುಮಾರು 10-30 ಗಂಟೆಗೆ ಸುರತ್ಕಲ್ ಕಾನಾ ಬಳಿಯ ದೀಪಕ್ ಬಾರ್ ಬಳಿಯಲ್ಲಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರಿಬ್ಬರಿಗೆ ಈ ಹಿಂದೆ…