Headlines

ಸಜಿಪದಲ್ಲಿ ಭೀಕರ ರಸ್ತೆ ಅಪಘಾತ 22 ವರ್ಷದ ಅಹಮದ್ ಆಸೀರ್ ಸ್ಥಳದಲ್ಲೇ ಸಾವು

ಬಂಟ್ವಾಳ, ಜೂನ್ 20: ಮುಡಿಪು–ಬಿ.ಸಿ.ರೋಡ್ ರಸ್ತೆಯ ಸಜಿಪ ಎಂಬಲ್ಲಿ ಶುಕ್ರವಾರ ಸಂಜೆ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹಮದ್ ಆಸೀರ್ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಹಮದ್ ಆಸೀರ್ ಅವರು ಸಂಜೆ ತಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಜಿಪ ಬೇಂಕೆ ಪ್ರದೇಶಕ್ಕೆ ಆಕ್ಟಿವಾ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ…

Read More

ಕಳೆದ ವರ್ಷ ತುಂಬಿ ಹರಿದ ನದಿ, ಈ ವರ್ಷ ಮರಳುಗಾಡು: ಉಪ್ಪಿನಂಗಡಿಯಲ್ಲಿ ಆತಂಕ

ಸಂಗಮ‌ ತಾಣವೆಂದು ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದ್ದು, ಮರಳು ಕಾಣುತ್ತಿರುವ ಪೋಟೋ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.ಕಳೆದ ವರ್ಷ 2025 ರ ಜೂನ್ ತಿಂಗಳ 15 ರಂದು ನದಿಯ ನೀರನ ಮಟ್ಟ ಹಾಗೂ 2026 ರ ಜೂನ್ ತಿಂಗಳ 15 ರಂದು ನದಿಯ ನೀರಿನ‌ ಮಟ್ಟವನ್ನು ತುಲನೆ ಮಾಡಿದ ಪೋಟೋ ಸಖತ್ ವೈರಲ್ ಆಗಿದೆ. ನೇತ್ರಾವತಿ – ಕುಮಾರದಾರ ಸಂಗಮ ಕ್ಷೇತ್ರ ಎಂದೇ…

Read More

ಮಂಗಳೂರಿನಿಂದ ಬಂಟ್ವಾಳಕ್ಕೆ ಸೆನ್ ಠಾಣೆ ಸ್ಥಳಾಂತರ? ಕಟ್ಟಡ ಕಾಮಗಾರಿ ಬಹುತೇಕ ಪೂರ್ಣ

ಬಂಟ್ವಾಳ: ಡಿಜಿಟಲ್ ಯುಗದ ಜೀವನ ಶೈಲಿಯ ಪ್ರಸ್ತುತದ ದಿನಗಳಲ್ಲಿ ಅತೀ ಹೆಚ್ಚು ಅಪರಾಧಗಳು ನಡೆಯುವ ಸೈಬರ್ ಕ್ರೈಮ್ ಗಳ ಶೀಘ್ರ ಪತ್ತೆಗೆ ಅನುಕೂಲವಾಗುವಂತೆ ಬಂಟ್ವಾಳ ದಲ್ಲಿ ನಿರ್ಮಾಣವಾಗುತ್ತಿರುವ ಸೆನ್ ಪೋಲೀಸ್ ಠಾಣೆಯ ಕೆಲಸ ಕಾರ್ಯಗಳು ಬಹುತೇಕ ಪೂರ್ಣವಾಗಿದ್ದು ಇನ್ನೇನು ಉದ್ಘಾಟನೆ ಭಾಗ್ಯ ಕಾಣಬೇಕಾಗಿದೆ‌. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್(ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸುವ ದೃಷ್ಟಿಯಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಿಂಬದಿ ಇರುವ ಠಾಣೆಯ ಹಳೆಯ ಕಟ್ಟಡವನ್ನು ಮಂಗಳೂರು…

Read More

ಮಂಗಳೂರು ದಕ್ಷಿಣ ಜೆಡಿಎಸ್ ಸಂಘಟನಾ ಸಭೆ ಯಶಸ್ವಿ ಹಲವರ ಪಕ್ಷ ಸೇರ್ಪಡೆ; ಸಂಘಟನೆ ಬಲವರ್ಧನೆಗೆ ಮುಖಂಡರ ಕರೆ

ಮಂಗಳೂರು, ಜನತಾದಳ (ಜಾತ್ಯತೀತ) ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ (203)ದ ಸಂಘಟನಾ ಸಭೆಯು ಕ್ಷೇತ್ರಾಧ್ಯಕ್ಷ ಎನ್.ಪಿ. ಪುಷ್ಪರಾಜನ್ ಅವರ ಅಧ್ಯಕ್ಷತೆಯಲ್ಲಿ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯತ್ವ ಅಭಿಯಾನವನ್ನು ತೀವ್ರಗೊಳಿಸುವುದು, ಮುಂಬರುವ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸುವುದು ಮತ್ತು ಜನಸಾಮಾನ್ಯರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರ ಕಾರ್ಯಾಧ್ಯಕ್ಷ ವಸಂತ ಪೂಜಾರಿ, ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳು, ರೈತಪರ ಹಾಗೂ ಜನಪರ…

Read More

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ,ಹಳೀರ ದಲ್ಲಿ ರಸ್ತೆಯಲ್ಲಿಯೇ ನೀರು ತುಂಬಿದೆ, ಅವೈಜ್ಞಾನಿಕ ಕಾಮಗಾರಿಗೆ ನಿದರ್ಶನ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು,ಈ ಕಾಮಗಾರಿ ಆರಂಭಗೊಂಡು ಇಂದಿನವರೆಗೆ ಅಂದರೆ ನಾಲ್ಕು ಐದು ವರ್ಷಗಳಿಂದ ಜನರು ಮತ್ತು ವಾಹನ ಸವಾರರು ಅನುಭವಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ,ಆಯಾ ಪರಿಸರದ ಜನರು ಮತ್ತು ವಾಹನ ಸವಾರರು ಅದೆಷ್ಟೇ ಸಂಕಷ್ಟಪಟ್ಟರೂ ಕ್ಯಾರೇ ಅನ್ನದ ಗುತ್ತಿಗೆ ವಹಿಸಿಕೊಂಡ ಕೆಎನ್‌ಆರ್ ಕಂಪೆನಿಯು ತಮಗೆ ಮನಸ್ಸು ಬಂದಂತೆ ವಟ್ರಾಸಿ ಕೆಲಸ ಮಾಡುತ್ತಾ ಹೋಗುತ್ತಿದೆ,ಮಂಗಳೂರು ಕಡೆಯಿಂದ ಮಾಣಿ ಪೇಟೆ ಪ್ರವೇಶಿಸಲು ಅಥವಾ ಪುತ್ತೂರು ಮೈಸೂರು ರಸ್ತೆ ಪ್ರವೇಶಿಸಲು ಬರುವ ವಾಹನಗಳು ಮಾಣಿ ಗ್ರಾಮದ ಹಳೀರ…

Read More

ಅಂಗವೈಕಲ್ಯ ಹಕ್ಕುಗಳ ಕುರಿತು ‘ಡಿಎನ್‌ಎ ಕರಾವಳಿ ಧ್ವನಿ’ ಜಾಗೃತಿ ಕಾರ್ಯಕ್ರಮ ಜೂನ್ 23ರಂದು

ಮಂಗಳೂರು,: ಅಂಗವೈಕಲ್ಯ ಹಕ್ಕುಗಳು, ಸಮಗ್ರ ಅಭಿವೃದ್ಧಿ ಹಾಗೂ ಸಮಾಜದ ಭಾಗವಹಿಸುವಿಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “ಡಿಎನ್‌ಎ ಕರಾವಳಿ ಧ್ವನಿ” ಎಂಬ ಒಂದು ದಿನದ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮವು ಜೂನ್ 23ರಂದು ಮಂಗಳೂರಿನ ಕದ್ರಿಯ ಸರ್ಕ್ಯೂಟ್ ಹೌಸ್ ಸಮೀಪದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ ಎಂದು ಅರಿವು ಅರ್ಲಿ ಇಂಟರ್ವೆನ್ಷನ್ ಸೆಂಟರ್‌ನ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಭಟ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೂಲದ ಡಿಸೆಬಿಲಿಟಿ ಎನ್‌ಜಿಒ…

Read More

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಮಂಗಳೂರು, ಜೂನ್ 19: ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ಮುಖ್ಯ ಅತಿಥಿಗಳು, ಸಂಚಾಲಕರು, ಪ್ರಾಂಶುಪಾಲರು ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿ ಪರಿಷತ್ತನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ…

Read More

ಸಚಿವ ಯು.ಟಿ. ಖಾದರ್ ಅವರಿಗೆ ‘ರಾಜಕಾರಣದ ಅನರ್ಘ ರತ್ನ’ ಗೌರವ ಬಿರುದು

ಮಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317D ವತಿಯಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ ಅವರಿಗೆ ‘ರಾಜಕಾರಣದ ಅನರ್ಘ ರತ್ನ’ ಗೌರವ ಬಿರುದು ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಸಮಸ್ತ ಲಯನ್ಸ್ ಸದಸ್ಯರ ಪರವಾಗಿ ನಡೆದ ಈ ಗೌರವ ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ಅಧ್ಯಕ್ಷತೆ ವಹಿಸಿ ಸಚಿವ ಯು.ಟಿ. ಖಾದರ್ ಅವರನ್ನು ಸನ್ಮಾನಿಸಿದರು. ಸಮಾಜಮುಖಿ ಸೇವೆ ಹಾಗೂ ಜನಪರ ಆಡಳಿತದ ಮೂಲಕ…

Read More

ಹರಿತ ಕರ್ಮ ಸೇನಾ ಕಾರ್ಯಕರ್ತರು ಮನೆ ಮನೆಗಳಿಂದ ಹಣ ಪಡೆದು ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದಾರಿ ಮಧ್ಯೆಯೇ ಉಪೇಕ್ಷಿಸುತ್ತಿರುವುದಾಗಿ ಆರೋಪ: ಆತಂಕದಲ್ಲಿ ಸಾರ್ವಜನಿಕರು

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಹರಿತ ಕರ್ಮ ಸೇನೆ’ಯ ಹೆಸರಿನಲ್ಲಿ ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವವರು, ಸಾರ್ವಜನಿಕರ ಹಿತದೃಷ್ಟಿಯನ್ನು ಮರೆತು ದಾರಿ ಮಧ್ಯೆಯೇ ತ್ಯಾಜ್ಯಗಳನ್ನು ಎಸೆದು ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಹರಿತ ಕರ್ಮ ಸೇನೆಯವರು ಪ್ರತಿ ಮನೆಗಳಿಂದ 50 ರೂಪಾಯಿ ಶುಲ್ಕ ಪಡೆದು ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಆದರೆ, ನಿಗದಿತ ಸ್ಥಳಕ್ಕೆ ತ್ಯಾಜ್ಯವನ್ನು ಸಾಗಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ದಾರಿ ಮಧ್ಯೆಯೇ ಅದನ್ನು…

Read More

ವಿಧಾನಪರಿಷತ್‌ ಶಾಸಕ ಐವನ್‌ ಡಿʼಸೋಜಾ ಮಂಗಳೂರಿನ ಬೆಂದೂರ್‌ನಲ್ಲಿರುವ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್‌ ಗೆ ಭೇಟಿ ಪರಿಶೀಲನೆ.

ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಕಲುಷಿತ ನೀರು ಕೊಟ್ಟು ಕೆಲವರಿಗೆ ಆರೋಗ್ಯ ಹದಗೆಟ್ಟಿದೆ ಕೆಲವರಿಗೆ ವಾಂತಿಭೇದಿಯಾಗಿದೆ, ನೀರು ಕುಡಿದು ಜ್ವರ ಬಂದಿದೆ ಎಂಬ ಸುದ್ದಿಯನ್ನು ಸ್ಥಳೀಯ ಶಾಸಕರಾದ ವೇದವಾಸ್ ಕಾಮತ್ ರವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ ಶುದ್ಧ ನೀರು ಕೊಡುವಂತದ್ದು, ಮಂಗಳೂರು ಮಹಾ ನಗರ ಪಾಲಿಕೆ ಜವಾಬ್ದಾರಿ. ಮತ್ತು ಕುಡಿಯುವ ನೀರಿನಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಜವಾಬ್ದಾರಿ ಇದೆ. ಅದಕ್ಕೋಸ್ಕರ ಕೋಟ್ಯಾಂತರ ರೂಪಾಯಿಗಳನ್ನು ನಮ್ಮ ರಾಜ್ಯ ಸರ್ಕಾರದಿಂದ ವಿನಿಯೋಗ ಆಗುತ್ತಿದೆ. ಅದರಲ್ಲಿ…

Read More
error: Content is protected !!