Headlines

ಸಂಸದ ಕ್ಯಾ। ಬ್ರಿಜೇಶ್ ಚೌಟರಿಗೆ ಕ್ಲಾಸ್ ತೆಗೆದ ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್…… ! ಕಾರಣವೇನು …. ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ। ಬ್ರಿಜೇಶ್ ಚೌಟ ನನ್ನ ಆತ್ಮೀಯ ಮಿತ್ರ ಮಾತ್ರವಲ್ಲದೆ, ವಿದ್ಯಾವಂತ ಸಂಸದ ಕೂಡ ಹೌದು. ಆದರೆ ಅವರು ತಮ್ಮ ವಿದ್ಯಾರ್ಹತೆಗೆ ಅಪಚಾರ ಆಗುವಂತೆ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಮನವಿ ಮಾಡಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಸಿಎಂ ಸಿದ್ದರಾಮಯ್ಯ ಪುತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೀಡಿದ ಹೇಳಿಕೆ ಕುರಿತಂತೆ, ಸಂಸದ ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ. ಜಿಎಸ್‌ಟಿ ಕಡಿಮೆ…

Read More

ನವoಬರ್ 4 ರ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಭರದ ಸಿದ್ಧತಾ ಸಭೆ.

ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ 35 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವು 2025 ನವಂಬರ್ 4 ಮಂಗಳವಾರದಂದು ಬೆಳಗ್ಗೆ 10.00 ಕ್ಕೆ ಧ್ವಜಾರೋಹಣ, ಶಿವರಾಮ ಕಾಸರಗೋಡು 60 ಫೋಟೋ ಗ್ಯಾಲರಿ ಉದ್ಘಾಟನೆ ,ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ…

Read More

ಶಬರಿಮಲೆಯ ಅಯ್ಯಪನ ದರ್ಶನ ಪಡೆದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು

ತಿರುವನಂತಪುರಂ, ಅ. 22  ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇರುಮುಡಿ ಕಟ್ಟು ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೋಮವಾರದಿಂದ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು…

Read More

ಶೌರ್ಯ ವಿಪತ್ತು ನಿರ್ವಾಹಣಾ ಘಟಕದ ಸದಸ್ಯರಿಂದ -ಮುರತ್ತಣೆ ಮಸಣ ಹಾಗೂ ಸುತ್ತು ಮುತ್ತಲಿನ ಸ್ಥಳದ ಸ್ವಚ್ಛತಾ ಕಾರ್ಯ

ಮಂಜೇಶ್ವರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ. ಸಿ. ಟ್ರಸ್ಟ್ (ರಿ )ಮಂಜೇಶ್ವರ ಸುಂಕದಕಟ್ಟೆ ವಲಯದ ಶೌರ್ಯ ವಿಪತ್ತು ನಿರ್ವಾಹಣಾ ಘಟಕದ ಸದಸ್ಯರಿಂದ ಮುರತ್ತಣೆ ಮಸಾಣ ಹಾಗೂ ಸುತ್ತು ಮುತ್ತಲಿನ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದರು.

Read More

ಹಂಪೋ ಇದೋ ಜಂಪೋ ಇದೋ ……. ?

ಮಂಗಳೂರು ನಗರದ ಹೆಚ್ಚಿನ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ . ಒಮ್ಮೆ ರೋಡಿನಲ್ಲಿ ಗುಂಡಿ ಬಿದ್ದರೆ , ಡಾಮರ್ ಕಿತ್ತೆದ್ದರೆ ಅದನ್ನು ಮತ್ತೆ ದುರಸ್ತಿ ಮಾಡುವ ಕಾರ್ಯ ನಡೆಯುವುದೇ ಅಲ್ಲೊಂದು ಅಪಘಾತದಿಂದ ಸಾವಾದ ಬಳಿಕವಷ್ಟೇ. ಹಿಂದೊಂದು ಅಪಘಾತವನ್ನು ಸಂಭವಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರಸ್ತೆಯ ಬಗ್ಗೆ ಸರಕಾರ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿ ರೈಲ್ವೇ ನಿಲ್ದಾಣ, ಅತ್ತಾವರದ ಕಡೆಗೆ ಹೋಗುವ ಮಾರ್ಗವೊಂದಿದೆ. ಈ ಮಾರ್ಗದ ಮಧ್ಯೆ ವೇಗವನ್ನು…

Read More

ಕೃಷ್ಣ ನಗರಿಯ ಶ್ರೀ ಕೃಷ್ಣಮಠದಲ್ಲಿ ವಿಶೇಷ ಗೋಪೂಜೆ ಸಂಭ್ರಮ …. !

ಉಡುಪಿ: ಪೊಡವಿಗೊಡೆಯ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೋಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಯಿತು. ಈ ಪ್ರಯುಕ್ತ ಕನಕ ಗೋಪುರದ ಎದುರು ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ನೀಡಿದರು. ನಂತರ ರಥಬೀದಿಯ ಸುತ್ತಲೂ ಗೋವುಗಳ ವೈಭವದ ಮೆರವಣಿಗೆ ನಡೆಯಿತು. ನಂತರ ಶ್ರೀ ಕೃಷ್ಣ ಮಠದ ಆವರಣದಲ್ಲಿ ಸಂಕಲ್ಪ ಸಹಿತ ಸಾಮೂಹಿಕ ಗೋಪೂಜೆ ಕಾರ್ಯಕ್ರಮವು ನಡೆಯಿತು. ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು

Read More

ಉಡುಪಿಯಲ್ಲಿ ಚರಂಡಿಗೆ ಎಸೆದ ಹೂವುಗಳ ಮರು ಮಾರಾಟ ಜೋರು, ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ….. !

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯಲ್ಲಿ ಭರ್ಜರಿ ಹೂ ಮಾರಾಟ ನಡೆಯುತ್ತಿದೆ. ಹೊರ ಜಿಲ್ಲೆಯ ಹಲವು ಮಾರಾಟಗಾರರು ಕಳೆದ ಮೂರು ದಿನಗಳಿಂದ ಇಲ್ಲಿ ಠಿಕಾಣಿ ಹೂಡಿ ಹೂ ಮಾರಾಟ ಮಾಡುತ್ತಿದ್ದಾರೆ. ಇದೇ ವೇಳೆ ಎಸೆದಿರುವ ಹಾಳಾದ ಹೂವನ್ನು ತಂಡವೊಂದು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ನಗರದ ಮಾರುಥಿ ವೀಥಿಕಾದಲ್ಲಿ ಕಂಡುಬಂದಿತು. ಸಾರ್ವಜನಿಕರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು, ಹೂವು ಮಾರಾಟಗಾರರನ್ನು ತರಾಟೆ ತೆಗೆದುಕೊಂಡು ವ್ಯಾಪಾರವನ್ನು ನಿಲ್ಲಿಸಿದರು. ಮಳೆ ಬಂದ ಕಾರಣ ಹೂವು ವ್ಯಾಪಾರ ಕುಸಿತ ಕಂಡ…

Read More

ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಗ್ ವೇಳೆ ಹೆಲಿಪ್ಯಾಡ್‌ನಲ್ಲಿ ಸಿಲುಕಿದ ಚಕ್ರ …. !

ಶಬರಿಮಲೆ:ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನ ಚಕ್ರ ಕೇರಳದ ಪಟ್ಟಣಂತಿಟ್ಟ ಬಳಿಯ ಪ್ರಮದಂನಲ್ಲಿ ಇಳಿಯುವಾಗ ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.ಹೊಸದಾಗಿ ಸಿದ್ಧಪಡಿಸಲಾದ ಹೆಲಿಪ್ಯಾಡ್‌ನಲ್ಲಿ ಬೆಳಿಗ್ಗೆ 9.05 ರ ಸುಮಾರಿಗೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯಿತು, ಆದರೆ ರಾಷ್ಟ್ರಪತಿಗಳು ಇಳಿದ ಕೂಡಲೇ ಅದರ ಟೈರ್‌ಗಳು ಹೊಸದಾಗಿ ಹಾಕಲಾದ ಕಾಂಕ್ರೀಟ್‌ ನಲ್ಲಿ ಸಿಲುಕಿ ಹಾಕಿಕೊಂಡಿವೆ. ರಾಷ್ಟ್ರಪತಿಗಳು ಯಾವುದೇ ವಿಳಂಬವಿಲ್ಲದೆ ರಸ್ತೆ ಮೂಲಕ ಪಂಪಾಗೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅಧಿಕೃತ ಮೂಲಗಳ ಪ್ರಕಾರ, ಪ್ರಮದಂ ಒಳಾಂಗಣ…

Read More

ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರ ಜೀಪಿಗೆ ಡಿಕ್ಕಿಪಡಿಸಿ ಕೊಲೆಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡು .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರ ಜೀಪಿಗೆ ಡಿಕ್ಕಿಪಡಿಸಿ ಕೊಲೆಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ನಡೆದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ ಇಂದು ಮುಂಜಾನೆ ಆರೋಪಿ ಅಬ್ದುಲ್ಲಾ ಐಚರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸುತ್ತಿದ್ದ. ಆತನೇ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿಯೂ ವಾಹನದಲ್ಲಿದ್ದ. ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಆತನು ನಿಲ್ಲಿಸದೆ ಇದ್ದು ಪೊಲೀಸರು…

Read More

20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ,ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ.

ಮಂಗಳೂರು ನಗರದ ಲಾಲ್ ಬಾಗ್ ಹ್ಯಾಟ್ ಹಿಲ್ ನ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ,ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಅಭಿಜಿತ್ ದಾಸ್ & ದೇಬಾ ದಾಸ್, ಬಂಧಿತರು. ದಿನಾಂಕ 19/20-10-2025 ರಂದು ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ ಲಾಲ್ ಬಾಗ್ ಹ್ಯಾಟ್ ಹಿಲ್ ನಲ್ಲಿರುವ ಅಪಾರ್ಟ್ ಮೆಂಟ್…

Read More
error: Content is protected !!