ಸಾಕಾರಗೊಂಡ ಚಿಣ್ಣರ ಬಹು ಕಾಲದ ನಿರೀಕ್ಷೆ : ಅಂಬಿತ್ತಾಡಿ ಹೈಟೆಕ್ ಅಂಗನವಾಡಿಗೆ ಶಂಕುಸ್ಥಾಪನೆ .
ಮಂಜೇಶ್ವರ : ಚಿಣ್ಣರ ಬಾಳಿನಲ್ಲಿ ಚೆಲ್ಲಾಟವನ್ನು ನಡೆಸುತ್ತಿರುವವರ ವಿರೋಧ ಮಧ್ಯೆಯೂ ಎದೆಗುಂದದೆ ಊರವರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಅಂಬಿತ್ತಾಡಿ ಜನತೆಯ ಬಹುಕಾಲದ ನಿರೀಕ್ಷೆಯೊಂದು ಗುರುವಾರದಂದು ಸಾಕಾರಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸಂಖ್ಯೆ 11 ಅಂಬಿತ್ತಾಡಿ ಹೈಟೆಕ್ ಅಂಗನವಾಡಿಗೆ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕಟ್ಟಡದ ಸಂಕುಸ್ಥಾಪನೆ ಬಹಳ ಅದ್ದೂರಿಯಾಗಿ ನೆರವೇರಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರ…