ಬಂಗ್ರಮಂಜೇಶ್ವರದಲ್ಲಿ ‘ವಿಶ್ವ ರೂಪಂ’ ಯುವಜನೋತ್ಸವದ ಮಹಾಸಮಾರೋಪ ಸಂಪನ್ನ
ಬಂಗ್ರಮಂಜೇಶ್ವರ: ಇಲ್ಲಿನ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ, ಓಜ ಸಾಹಿತ್ಯ ಕೂಟದ ನೇತೃತ್ವದಲ್ಲಿ ಕಳೆದ 12 ವಾರಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ “ವಿಶ್ವ ರೂಪಂ’ ಯುವಜನ ಓಜಸ್ವರೂಪಂ – ಸೀಸನ್ 2.0 (2025–26) ರ ಭವ್ಯ ಸಮಾರೋಪ ಸಮಾರಂಭವು ಫೆಬ್ರವರಿ 1, 2026ರಂದು ವಿಜೃಂಭಣೆಯಿಂದ ಜರುಗಿತು. ಈ ಭವ್ಯ ಸಮಾರೋಪ ಸಮಾರಂಭವು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದೊಂದಿಗೆ ಸಂಪನ್ನಗೊಂಡಿತು. ಪೂಜ್ಯ…