ನರ್ಸಿಂಗ್ ವೃತ್ತಿಪರರಿಗೆ ಕೆಎಸ್ಎನ್ಸಿ ಆನ್ಲೈನ್ ಸೇವೆಗಳ ಕುರಿತು ಜಾಗೃತಿ ಕಾರ್ಯಕ್ರಮ
ಮಂಗಳೂರು: ನ. 23: ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು (ಕೆಎಸ್ಎನ್ಸಿ), ಬೆಂಗಳೂರು ವತಿಯಿಂದ ಮಂಗಳೂರು ವಿಭಾಗದ ಶುಶ್ರೂಷಾ ವೃತ್ತಿಪರರಿಗಾಗಿ ಆನ್ಲೈನ್ ಸೇವೆಗಳು ಹಾಗೂ ಇತರ ವೃತ್ತಿಪರ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವು ನಗರದ ಕೊಂಚಾಡಿಯ ಪಾಲೆಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,500 ಮಂದಿ ಶುಶ್ರೂಷಾ ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ಸಂಬಂಧಿತ ಕ್ಷೇತ್ರದವರು ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಶುಶ್ರೂಷಾ ವೃತ್ತಿಯು ಅತ್ಯಂತ ಪವಿತ್ರ ಹಾಗೂ…
