ಅ.11 ಮತ್ತು 12ರಂದು ಬ್ರಹ್ಮಾವರದಲ್ಲಿ ಕೃಷಿ ಮೇಳ-2025″

ಉಡುಪಿ: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಗಳಾದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇದೇ ಅ.11 ಮತ್ತು 12ರಂದು ಎರಡು ದಿನಗಳ “ಕೃಷಿ ಮೇಳ-2025″ ಕಾರ್ಯಕ್ರಮವನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ವಿ….

Read More

ಅ.11-12ರಂದು ಉಡುಪಿಯಲ್ಲಿ “ಕೆನರಾ ರಿಟೈಲ್ ಮೇಳ-2025”

ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ಕೆನರಾ ರಿಟೈಲ್ ಮೇಳ-2025” ಅನ್ನು ಇದೇ ಅ.11ಮತ್ತು 12ರಂದು ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಕಚೇರಿಯ ಜನರಲ್ ಮ್ಯಾನೇಜರ್ ಎಚ್.ಕೆ. ಗಂಗಾಧರ್ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನಗಳ ಮೇಳವು ಬೆಳಿಗ್ಗೆ 9.30ರಿಂದ ಸಂಜೆ 6.30ರ ವರೆಗೆ ನಡೆಯಲಿದೆ. ಈ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪ್ರವೇಶ ಶುಲ್ಕ…

Read More

ಬಿಜೆಪಿಯಿಯಿಂದ ಜಿಲ್ಲಾಧಿಕಾರಿ ಕಚೇರಿಯತ್ತ ಪ್ರತಿಭಟನಾ ಮಾರ್ಚ್. ಶಬರಿಮಲೆಯಲ್ಲಿ ನಡೆದ ಲೂಟಿ : ಸಿ ಎಂ ಪಿಣರಾಯಿ ರಾಜೀನಾಮೆ ನೀಡಬೇಕು : ಎ.ಪಿ. ಅಬ್ದುಲ್ಲ ಕುಟ್ಟಿ

ಕಾಸರಗೋಡು: ಶಬರಿಮಲೆ ದೇವಸ್ಥಾನದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟಿಯ ಬಗ್ಗೆ ಸಿಬಿಐ ಸಹಿತ ಕೇಂದ್ರೀಯ ಏಜೆನ್ಸಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಬರಿಮಲೆಯಲ್ಲಿನ ಚಿನ್ನದ ಆಭರಣಗಳನ್ನು ರಾಜ್ಯ ಸರಕಾರದ ತಿಳುವಳಿಕೆಯಲ್ಲೇ ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದೂ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲ ಕುಟ್ಟಿ ಒತ್ತಾಯಿಸಿದರು . ಶಬರಿಮಲೆ ಕ್ಷೇತ್ರದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟ ವಿರೋಧಿಸಿ ಬಿಜೆಪಿ…

Read More

ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲು.

ಮಂಗಳೂರು: ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು, ಮೀನುಗಾರಿಕೆಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ‌ ಘಟನೆ ನಡೆದಿದೆ.ಮನೋಹರ್ ಪುತ್ರನ್ (53) ಮೃತ ವ್ಯಕ್ತಿ. ಬುಧವಾರ ಸಂಜೆ 6:30ಕ್ಕೆ‌ ಈ ಘಟನೆ ನಡೆದಿದೆ. ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ. ಬಳಿಕ ಸ್ಥಳೀಯರು ಹಾಗೂ ಪಣಂಬೂರು ಠಾಣಾ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಹುಡುಕಾಟ ನಡೆಸಲಾಯಿತು. ಸುಮಾರು ರಾತ್ರಿ 9:30 ಸಮಯ ಮೃತದೇಹ ಪತ್ತೆಯಾಗಿದೆ. ಪಣಂಬೂರು ಠಾಣೆಯಲ್ಲಿ…

Read More

ಮೀನು ವ್ಯಾಪಾರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಬಂಧನ.

ಮಂಜೇಶ್ವರ : ಬಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಬದಿಯಡ್ಕ ಸೀತಾಂಗೋಳಿ ಸಮೀಪ ಸ್ಥಳೀಯ ನಿವಾಸಿ ಹಾಗೂ ಮೀನು ವ್ಯಾಪಾರಿ ಅನಿಲ್‌ ಕುಮಾರ್ (40) ರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಕುಂಬಳೆ ಪೊಲೀಸ್ ಠಾಣೆಯಲ್ಲಿ ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಹಾಗೂ ಹರಿಕೃಷ್ಣ ಬಂಧಿತ ಆರೋಪಿಗಳು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು…

Read More

ನವೀನ ‘ತುಝರ್’ ಪರ್ಪ್ಯೂಮ್ ಸಂಸ್ಥೆಯ ಶುಭಾರಂಭ.

ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಪ್ಯೂಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್ ಹಮೀದ್ ಅವರ ಮಾಲಕತ್ವದಲ್ಲಿ ಹೊಚ್ಚ ಹೊಸ ಫರ್ಪ್ಯೂಮ್ ಬ್ರಾಂಡ್ ‘ತುಝರ್ (TUZHAR)’ ಉತ್ಪನ್ನವನ್ನು ಯೆನೆಪೊಯ ಡೀಮ್ಸ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಣಿ ಅಕ್ಟೋಬರ್ 9ರಂದು ಮಂಗಳೂರು ಬೆಂದೂರ್‌ವೆಲ್‌ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್‌ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಣಚೂರು ಹೆಲ್ತ್ ಸೈನ್ಸನ್ ಅಡ್ಡೆಸರಿ ಸಂಸ್ಥೆಯ ಚೇರ್ಮ್ಯಾನ್, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ,…

Read More

ಕುಂಪಲದಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸರಕಾರಿ ಬಸ್,ನಿತ್ಯವು ಸಂಚಾರಕ್ಕೆ ಹರಸಾಹಸ..!

ಮಂಗಳೂರು:ಮಂಗಳೂರಿನಿಂದ ಕುಂಪಲಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ನಗರದ ಹೊರವಲಯ ಕುಂಪಲದಲ್ಲಿ ನಡೆದಿದೆ. ಬೈಪಾಸ್ ನಿಂದ ಕುಂಪಲ ತನಕ ಸುಮಾರು 2 ಕಿಮೀ ರಸ್ತೆ ದುರಸ್ತಿ ಮಾಡಿ ಕೆಲವು ದಶಕಗಳಾಗಿವೆ. ನಂತರದ ದಿನದಲ್ಲಿ ಚುನಾವಣೆ ಹತ್ತಿರವಾದಾಗ ಆಶ್ವಾಸನೆ ದೊರೆಯುತ್ತಿದೆ ಅಷ್ಟೆ. ಹೊರತುಪಡಿಸಿ ಈವರೆಗೆ ರಸ್ತೆ ದುರಸ್ತಿಯಾಗಿಲ್ಲ,ಇದು ಕಿರಿದಾದ ರಸ್ತೆಯಾಗಿದ್ದು ಜಲ್ಲಿಮೇಲೆದ್ದಿರುವುದರಿಂದ ನಿತ್ಯವು ಸಂಚಾರಕ್ಕೆ ಹರಸಾಹಸ ಪಡಬೇಕಿದೆ..

Read More

ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ.

ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಗುರುವಾರ ಬಾಂಬ್ ಬೆದರಿಕೆ ಬಂದಿದೆ.ವಿಮಾನ ನಿಲ್ದಾಣದ ಪ್ರಾಧಿಕಾರವು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ನೀಡಿತು, ನಂತರ ಆವರಣದಾದ್ಯಂತ ಕಟ್ಟುನಿಟ್ಟಿನ ತಪಾಸಣೆ ಮತ್ತು ತನಿಖೆ ನಡೆಸಲಾಯಿತು. ವಿಮಾನ ನಿಲ್ದಾಣದ ಒಳಗೆ ಬಾಂಬ್ ಇಡಲಾಗಿದೆ ಎಂದು ಮಧುರೈ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಬಂದಿತ್ತು. ಇದರ ನಂತರ, ವಿಮಾನ ನಿಲ್ದಾಣದ ನಿರ್ದೇಶಕ ಮುತ್ತುಕುಮಾರ್ ಅವರು ಮಧುರೈ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಬೆದರಿಕೆ ಬಗ್ಗೆ ಮಾಹಿತಿ ನೀಡಿದರು ಎಂದು ಮಧುರೈ ವಿಮಾನ ನಿಲ್ದಾಣದ…

Read More

ರಾಜ್ಯ ಮಟ್ಟದ ‘ ಸ್ವಿಮ್ ಗಾಲ 2025 ‘ ಈಜು ಸ್ಪರ್ಧೆ ಅ. 12 ರಂದು ಮಂಗಳೂರಿನಲ್ಲಿ

ಮಂಗಳೂರು: ರಾಜ್ಯದ ಪ್ರತಿಷ್ಠಿತ ಈಜು ಕ್ಲಬ್‌ಗಳಲ್ಲಿ ಒಂದಾದ ಮಂಗಳ ಸ್ವಿಮ್ಮಿಂಗ್ ಕ್ಲಬ್ ತನ್ನ 35 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ‘ ಸ್ವಿಮ್ ಗಾಲ 2025 ‘ ಈಜು ಸ್ಪರ್ಧೆಯನ್ನು ಮಂಗಳೂರಿನ ಕಾರ್ಪೋರೇಷನ್ ಈಜುಕೊಳದಲ್ಲಿ ಅಕ್ಟೋಬರ್ 12 ರಂದು , ಬೆಳಿಗ್ಗೆ 8.00ರಿಂದ – ರಾತ್ರಿ 8.00ರ ತನಕ ನಡೆಯಲಿದೆ ಎಂದು ಮಂಗಳೂರಿನ ಮಂಗಳಾ ಈಜು ಸಂಸ್ಥೆಯ ಅಧ್ಯಕ್ಷರಾದ ಪ್ರಮುಖ್ ರೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ…

Read More

ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶುದ್ಧ ಎಳ್ಳೆಣ್ಣೆಯ ಅಭಿಷೇಕಕ್ಕೆ ಸಿದ್ಧತೆ.

ದಕ್ಷಿಣಕನ್ನಡ: ಇತಿಹಾಸ ಪ್ರಸಿದ್ಧ ಮಹತೋಭಾರ ಮಹಲಿಂಗೇಶ್ವರ ದೇವಸ್ಥಾನದಲ್ಲಿ ಇತಿಹಾಸದಲ್ಲೇ ಮೊದಲಬಾರಿಗೆ ದೇವರ ವಿಗ್ರಹಕ್ಕೆ ಎಳ್ಳೆಣ್ಣೆ ಅಭಿಷೇಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಮೋದಕ ಹೋಮ, ತುಪ್ಪದೀಪ, ಶುದ್ದ ಎಣ್ಣೆ, ಗಾಯತ್ರಿ ಪೂಜೆ ಸಹಿತ ದೇವರಿಗೆ ಪ್ರೀತ್ಯರ್ಥವಾಗಿ ಭಕ್ತರ ಬೇಡಿಕೆಯಂತೆ ಹಲವು ಸೇವೆಗಳನ್ನು ನೆರವೇರಿಸಲು ಕಾರಣಕರ್ತರಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ…

Read More
error: Content is protected !!