ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಪ್ಯೂಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್ ಹಮೀದ್ ಅವರ ಮಾಲಕತ್ವದಲ್ಲಿ ಹೊಚ್ಚ ಹೊಸ ಫರ್ಪ್ಯೂಮ್ ಬ್ರಾಂಡ್ ‘ತುಝರ್ (TUZHAR)’ ಉತ್ಪನ್ನವನ್ನು ಯೆನೆಪೊಯ ಡೀಮ್ಸ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಣಿ ಅಕ್ಟೋಬರ್ 9ರಂದು ಮಂಗಳೂರು ಬೆಂದೂರ್‌ವೆಲ್‌ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕಣಚೂರು ಹೆಲ್ತ್ ಸೈನ್ಸನ್ ಅಡ್ಡೆಸರಿ ಸಂಸ್ಥೆಯ ಚೇರ್ಮ್ಯಾನ್, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ , ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ , ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಜ್ , ಎಸ್‌ಎಂಆರ್ ಗ್ರೂಪ್ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, -ಪ್ಲಾಸ್ಟಿಕ್ ಲ್ಯಾಂಡ್ ಗ್ರೂಪ್ ಅಧ್ಯಕ್ಷ ಅಸ್ಕರ್ ಅಲಿ, ಉದ್ಯಮಿ ಹಸನಬ್ಬ ಚಾರ್ಮಾಡಿ , ಅಲ್ ನಜೀಂ ಉಸ್ ಸಕೀಬ್ ಪರ್ಪ್ಯೂಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್ ಹಮೀದ್ ಸಹಿತ ವಿವಿಧ ಗಣ್ಯರು ಉಪಸ್ಥಿತತರಿದ್ದರು .