ಮಲ್ಪೆಯಲ್ಲಿ AKMS ಬಸ್ ಮಾಲಕ ರೌಡಿಶೀಟರ್ ಸೈಫುದ್ದೀನ್ ನ ಗುಂಡಿಕ್ಕಿ ಹತ್ಯೆಗೈದ ಅಪರಿಚಿತ ದುಷ್ಕರ್ಮಿಗಳು!
ಉಡುಪಿ: AKMS ಬಸ್ ಮಾಲಕ ಕೊಲೆ, ಕೊಲೆಯತ್ನದಂತಹ ಹತ್ತಾರು ಪ್ರಕರಣಗಳ ಆರೋಪಿ ರೌಡಿ ಶೀಟರ್ ಸೈಫುದ್ದೀನ್ ನನ್ನು ಮಲ್ಪೆ ಸಮೀಪದ ಕೊಡವೂರಿನ ಆತನ ಮನೆಯಲ್ಲೇ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಣಿಪಾಲ ಅತ್ರಾಡಿ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಆತನ ಮೇಲೆ ಗುಂಡು ಹಾರಿಸಿದ ನಂತರ, ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ…