ಬದಿಯಡ್ಕದಲ್ಲಿ ಗೃಹಿಣಿ ಹತ್ಯೆ: ಕೃತ್ಯದ ಸಂಪೂರ್ಣ ವಿವರ ನೀಡಿದ ಆರೋಪಿ
ಬದಿಯಡ್ಕ:ಕುಂಡಾಜೆ ಅಜಿಲದಲ್ಲಿ ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ (70) ಅವರನ್ನು ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಡು ಕಡಿತ ಕಾರ್ಮಿಕ ಪರಮೇಶ್ವರ ಕೆ. (ರಮೇಶ್ ನಾಯ್ಕ್–48) ಅವರನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕಾಸರಗೋಡು ನ್ಯಾಯಾಲಯವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಹತ್ಯೆ ನಡೆದ ಪುಷ್ಪಲತಾ ಶೆಟ್ಟಿ ಅವರ ಮನೆಗೆ ಕರೆತಂದು ಪೊಲೀಸರು ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹ ನಡೆಸಿದರು.ಹತ್ಯೆಯನ್ನು ಹೇಗೆ ನಡೆಸಿದ್ದಾನೆ ಎಂಬುದನ್ನು ಆರೋಪಿಯು…