ಪ್ರಧಾನಿ ನರೇಂದ್ರ ಮೋದಿ ದೀರ್ಘಾಯುಷ್ಯಕ್ಕಾಗಿ ಶ್ರೀ ನೀಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ
ಬಂಟ್ವಾಳ, ಜೂ. 10: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಗಳ ಸಾಲಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಹಿನ್ನೆಲೆಯಲ್ಲಿ, ಅವರ ದೀರ್ಘಾಯುಷ್ಯ, ಆಯುರಾರೋಗ್ಯ ಹಾಗೂ ದೇಶದ ಪ್ರಗತಿಗಾಗಿ ಮೋಗರ್ನಾಡು ಸಾವಿರ ಸೀಮೆಯ ಒಡೆಯ ಶ್ರೀ ನೀಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಗುರು ಭಾರತ ಹಾಗೂ ಆತ್ಮನಿರ್ಭರ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ ಹಾಗೂ ದೇಶವು ಜಾಗತಿಕ…
