ಸಂತ ಮದರ್ ತೆರೇಸಾರವರ 28ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಸೆ.11ರಂದು ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ – ರೋಯ್ ಕ್ಯಾಸ್ಟಲಿನೋ .

ಮಂಗಳೂರು:: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು: ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಸೆ.11ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು, ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು….

Read More

ಕೂಳೂರು ರಸ್ತೆ ಗುಂಡಿಯಿಂದಾಗಿ ಲಾರಿ ಚಕ್ರದಡಿ ಸಿಲುಕಿ ಯುವತಿ ದಾರುಣ ಸಾವು!!

ಮಂಗಳೂರು:: ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ರಾಯಲ್ ಓಕ್ ಮುಂಭಾಗದಲ್ಲಿ ರಸ್ತೆ ಗುಂಡಿಗೆ ಸಿಲುಕಿ ಸ್ಕೂಟರ್ ನಿಂದ ಉರುಳಿ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ, 8:30 ಗಂಟೆ ಸುಮಾರಿಗೆ ನಡೆದಿದೆ . ಘಟನೆಯ ಪರಿಣಾಮ ಮೂಲತ: ಮಣಿಪಾಲ ವರ್ಕಳ ನಿವಾಸಿ ಸದ್ಯ ಚಿತ್ರಾಪುರದಲ್ಲಿ ನೆಲೆಸಿದ್ದ ಮಾಧವಿ (37) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಎಜೆ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಆಗಿದ್ದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವಾಗ ಘಟನೆ…

Read More

ರಾಷ್ಟ್ರೀಯ ವಿಚಾರಗೋಷ್ಠಿಯು ಸೆ. 11,12 ರಂದು ಕೊಂಕಣಿ ಭಾಷೆಯಲ್ಲಿ ನಡೆಯಲಿದೆ-ಡಾ ಆಲ್ಮಿನ್ ಡೇಸಾ

ಮಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಇವರ ಸಹಯೋಗದೊಂದಿಗೆ ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು. ಇಲ್ಲಿ ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ಸುಧಾರಿಸುವುದು ಎಂಬ ಶೀರ್ಷಿಕೆಯಡಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯು ಸೆಪ್ಟೆಂಬರ್ 11 ಮತ್ತು 12, 2025 ರಂದು ಕೊಂಕಣಿ ಭಾಷೆಯಲ್ಲಿ ನಡೆಯಲಿದೆ ಎಂದು ಸಂತ ಅಲೋಸಿಯಸ್ ಸ್ನಾಯತ್ತ ಕಾಲೇಜಿನ ಕುಲ ಸಚಿವರಾದ ಡಾ ಆಲ್ಮಿನ್ ಡೇಸಾ ತಿಳಿಸಿದರು . ಅವರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…

Read More

ದಕ್ಷಿಣ ಏಷ್ಯಾದಲ್ಲೇ ಪ್ರಥಮ ಅರ್ಥೊಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಆರಂಭಗೊಂಡಿದೆ-ಡಾ. ಮುಹಮ್ಮದ್ ತಾಹಿರ್

ಮಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಥಮ ಅರ್ಥೊಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆಯು ಮಂಗಳೂರಿನ ಯೆನೆಪೋಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ ಎಂದು ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುಹಮ್ಮದ್ ತಾಹಿರ್ ಹೇಳಿದರು . ಅವರು ಕೊಡಿಯಾಲ್ ಬೈಲ್ ನಲ್ಲಿರುವ ಯೆನೆಪೋಯ ಆಸ್ಪತ್ರೆ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ , ಇದು ಮಂಡಿ ಬದಲಾವಣೆ ಆಪರೇಷನ್ ನಲ್ಲಿ ಕ್ರಾಂತಿ ಉಂಟುಮಾಡಲಿದೆ . ಏವೊಲ್ಯೂಷನ್ ಮೀಡಿಯಲ್ ಪೈವೊಟ್ ಬೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ…

Read More

ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಮಠ ಮೊಗ್ರಾಲ್ ಪುತ್ತೂರು.ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಮಠ ಮೊಗ್ರಾಲ್ ಪುತ್ತೂರು ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಂದಿರದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಇವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು, ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಸಮಿತಿ ಕಾರ್ಯದರ್ಶಿ ಗಳು, ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು

Read More

ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವೀರ ನಗರ ಅಡ್ಕ ಇದರ 29 ನೇ ವಾರ್ಷಿಕ ಗಣೇಶ ಚತುರ್ಥಿ

ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವೀರ ನಗರ ಅಡ್ಕ ಇದರ 29 ನೇ ವಾರ್ಷಿಕ ಗಣೇಶ ಚತುರ್ಥಿಯ ಪ್ರಯುಕ್ತ ನಡೆದಂತ ವಿವಿಧ ಆಟೋಟ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಶ್ರೀ ನಾಗ ರಕ್ತೇಶ್ವರಿ ಗುಳಿಗಜ್ಜ ಕೊರಗಜ್ಜ ಸಾನಿಧ್ಯ ವೀರನಗರ ಅಡ್ಕ ಇಲ್ಲಿ ವಿವಿಧ ಸಾಂಸ್ಕೃತಿಕ ಧಾರ್ಮಿಕ ಹಾಗೂ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.ಬೆಳಗ್ಗೆ 7 ಗಂಟೆಗೆ ಗಣಹೋಮ ನಡೆಯಿತು. ಯುವಕರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ವಿನಾಯಕ ಹೇರೂರು ,ಧ್ವಿತೀಯ ಸ್ಥಾನ PFC ಪರೆಂಕಿಲ .ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ…

Read More

ಉಪ್ಪಳ ಸೊಂಕಾಲಿನ ಮನೆಯಿಂದ ಗಾಂಜಾ ವಶಪಡಿಸಿಕೊಂಡ ಪ್ರಕರಣ-ಇನ್ನೋರ್ವ ಆರೋಪಿ ಬಂಧನ.

ಮಂಜೇಶ್ವರ: ಉಪ್ಪಳ ಸೊಂಕಾಲಿನ ಮನೆಯಿಂದ 33.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿ ಕೂಡಾ ಬಂಧನಕ್ಕೊಳಗಾಗಿದ್ದಾನೆ. ಉಪ್ಪಳ ಕುಕ್ಕಾರಿನ ಟಿಪ್ಪರ್ ಹಮೀದ್ (32) ಬಂಧಿತ ಆರೋಪಿ. ಈತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸುತ್ತಿದ್ದಾರೆ. ಜೂನ್ 1ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಉಪ್ಪಳ ಸೊಂಕಾಲಿನ ಎ. ಅಶೋಕ್ (45) ಅವರ ಮನೆಯಲ್ಲಿ, ಹಾಸಿಗೆಯ ಕೆಳಭಾಗದಲ್ಲಿದ್ದ ಚೀಲಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ಅಶೋಕರನ್ನು ವಿಚಾರಿಸಿದಾಗ ಹಮೀದ್ ಸಹಪ್ರತಿಯಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಾನಸಿಕ ಸ್ಥೈರ್ಯ ಹಾಗೂ ಉನ್ನತ ವಿದ್ಯಾಭ್ಯಾಸದಿಂದ ಸಮಾಜ ಉನ್ನತಿಗೆ ಸಾಧ್ಯ : ಅಶೋಕ್ ಕೊಡ್ಲಮೊಗರು

ಪೈವಳಿಕೆ:”ಮಾನಸಿಕ ಸ್ಥೆರ್ಯ ಅಚಲವಾದಗ ದಲಿತರು ಬಲಿತರಾಗುತ್ತಾರೆ. ಮುಂದಿನ ಜನಾಂಗವನ್ನು ಉನ್ನತ ವಿದ್ಯಾಭ್ಯಾಸವೆಂಬ ಅಸ್ತ್ರದಿಂದ ಬಲಿಷ್ಠವಾಗಿ ಕಟ್ಟಲು ಸಂಘಟನೆ ಅಡಿಪಾಯವನ್ನು ಹಾಕಬೇಕಿದೆ. ಪ್ರಸ್ತುತ ಸಮಾಜದೊಂದಿಗೆ ಸ್ಪರ್ಧಾತ್ಮಕವಾಗಿ ಸೆಟೆದು ನಿಲ್ಲಬೇಕು. ಡಾ. ಬಿ.ಆರ್ ಅಂಬೇಡ್ಕರರ ಆಶಯಗಳನ್ನು ಮುಖ್ಯ ಭೂಮಿಕೆಯಾಗಿ ಸ್ವೀಕರಿಸಿ ಮೂಲ ನಿವಾಸಿಗಳ ಧ್ವನಿ ಮಾರ್ಧನಿಸಲಿ” ಎಂದು ರಂಗಕರ್ಮಿ,ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ಇದರ ನಿರ್ದೇಶಕರಾದ ಶಿಕ್ಷಕ ಅಶೋಕ್ ಕೊಡ್ಲಮೊಗರು ತಿಳಿಸಿದರು. ಅವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಮತ್ತು ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ…

Read More

ಗೋಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ. ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದುತ್ವ ಸಂಘಟನೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು.

ಗೋಹತ್ಯೆಯನ್ನು ಖಂಡಿಸಿ ಗೋ ಮಾತಾ ಸಂರಕ್ಷಣಾ ಚಳವಳಿ ಪೆರ್ನೆ ಇದರ ವತಿಯಿಂದ ಗೋ ಹತ್ಯೆಯನ್ನು ಖಂಡಿಸಿ ಸೆ.6ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದ ಕಡಂಬುವಿನ ಕಾರ್ಲ ರಾಮದ್ವಾರದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದುತ್ವ ಸಂಘಟನೆಯ ಮುಖಂಡ ಗಣರಾಜ್ ಭಟ್ ಕೆದಿಲ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಮಾತನಾಡಿದ ಗಣರಾಜ್ ಭಟ್ ಕೆದಿಲ ಸ್ಥಳೀಯವಾಗಿ ಧಾರ್ಮಿಕ, ಸಮುದಾಯಿಕವಾಗಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಗುಂಪು ಗುಂಪುಗಳ,…

Read More

ಓಲೈಕೆ ರಾಜಕಾರಣವೇ ಕಾಂಗ್ರೆಸ್ಸಿನ ಬ್ರದರ್ಸ್’ಗಳ ಅಟ್ಟಹಾಸಕ್ಕೆ ಕಾರಣ:- ಶಾಸಕ ಕಾಮತ್

ಮಂಡ್ಯದ ಮದ್ದೂರಿನ ಗಣೇಶ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ನಡೆದಿದ್ದು ಇದು ರಾಜ್ಯ ಸರ್ಕಾರದ ಒಂದು ಕೋಮಿನ ತುಷ್ಟೀಕರಣದ ಪರಮಾವಧಿ ಹಾಗೂ ಹಿಂದೂ ವಿರೋಧಿ ನೀತಿಯ ಫಲವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ಸಹ ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಈ ಕೃತ್ಯವನ್ನು ಪ್ರತಿಭಟಿಸಿದ ಹಿಂದೂಗಳ ಮೇಲೆಯೇ ಲಾಠಿಚಾರ್ಜ್ ನಡೆಸಿ ಹಿಂದೂಗಳನ್ನು ಸದೆಬಡಿಯುವ ಹುನ್ನಾರ ನಡೆಸಿರುವ ಕಾಂಗ್ರೆಸ್…

Read More
error: Content is protected !!