ಡಿ.ಕೆ. ಶಿವಕುಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿ: ಸರ್ವಧರ್ಮ ಸೌಹಾರ್ದದ ನಡುವೆ ಭವ್ಯ ಪ್ರಮಾಣವಚನ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ 12 ಮಂದಿ ಶಾಸಕರು ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿ ನೂತನ ಸಚಿವ ಸಂಪುಟವನ್ನು ಸೇರ್ಪಡೆಗೊಂಡರು. ಪ್ರಮಾಣವಚನ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ…

Read More

ಜುಲೈ 4-5ರಂದು ಕಾಸರಗೋಡಿನಲ್ಲಿ ಹಲಸು ಮತ್ತು ಮಾವು ಮೇಳ: ವಿವಿಧ ತಳಿಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ

ಕಾಸರಗೋಡು, ಜೂನ್ 4: ಹಲಸು ಹಾಗೂ ಮಾವು ಪ್ರಿಯರಿಗಾಗಿ ಸಪ್ತಭಾಷಾ ಸಂಗಮ ನೆಲ ಕಾಸರಗೋಡಿನಲ್ಲಿ ಜುಲೈ 4 ಮತ್ತು 5ರಂದು ಎರಡು ದಿನಗಳ ‘ಹಲಸು ಮತ್ತು ಮಾವು ಮೇಳ’ ಆಯೋಜಿಸಲಾಗಿದೆ. ಕೋಟೆಕಣಿಯ ಜೀವಾಸ್ ಮಾನಸ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಮೇಳದಲ್ಲಿ ಹಲಸು ಮತ್ತು ಮಾವಿನ ವಿವಿಧ ತಳಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಇವುಗಳಿಂದ ತಯಾರಿಸಲಾದ ವೈವಿಧ್ಯಮಯ ಆಹಾರ ಉತ್ಪನ್ನಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ. ಮೇಳದಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ರೈತರಿಗೆ ತಮ್ಮ…

Read More

ಉದ್ಯೋಗಾವಕಾಶ : ಜೂ.6 ರಂದು ಸಂದರ್ಶನ

ಮಂಗಳೂರು:ಎಕ್ಸ್‍ಪರ್ಟ್ ಕಾಲೇಜು, ಮಂಗಳೂರು ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗೆ ನೇರ ಸಂದರ್ಶನವನ್ನು ಜೂನ್ 6 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.ಸಂದರ್ಶನದಲ್ಲಿ ಯಾವುದೇ ಪದವಿ ಹೊಂದಿರುವ ಪುರುಷ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು. ಕೆಲಸದ ಸ್ಥಳ ಎಕ್ಸ್‍ಪರ್ಟ್ ಕಾಲೇಜು, ವಳಚ್ಚಿಲ್, ಮಂಗಳೂರು.ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಡಬ ತಾಲೂಕು ಪಂಚಾಯಿತಿ ಕೆಡಿಪಿ ಸಭೆ

ಕಡಬ: ಕಡಬ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಕಡಬ ತಾಲೂಕು ಆಡಳಿತ ಕಚೇರಿ ಉಪತಹಶೀಲ್ದಾರ ಸಯ್ಯುದುಲ್ ಖಾನ್ ಮಾಹಿತಿ ನೀಡಿ, ಕಡಬದಲ್ಲಿ ಕೆ.ಎಸ್ ಆರ್ ಟಿಸಿ ಬಸ್ಸು ನಿಲ್ದಾಣಕ್ಕೆ ಗುರುತಿಸಲಾದ ಕೋಡಿಂಬಾಳ ಗ್ರಾಮದ ೧೪೩/೧ಎ ಸರ್ವೆ ನಂಬರಿನ ೨.೮೩ ಎಕ್ರೆ ಜಾಗಕ್ಕೆ ಉಚ್ಚ ನ್ಯಾಯಲಯದ ತಡೆಯಾಜ್ಞೆಯಿದೆ. ಅಲ್ಲದೆ ಈ ಜಾಗಕ್ಕೆ ಸಂಪರ್ಕ ರಸ್ತೆ ಕಿರಿದಾಗಿದೆ ಎಂದು ಕೆ…

Read More

ಬೆರಳ ತುದಿಯಲ್ಲಿ ಜಗತ್ತು: ಕ್ಷಯಿಸಿ ಹೋಗುತ್ತಿರುವ ಮಾನವೀಯ ಸಂಬಂಧಗಳು

ನಾವು ಇವತ್ತು ಜಾಗತಿಕ ಭೂಪಟದಲ್ಲಿ ಪ್ರಪಂಚದ ಯಾವುದೇ ಮೂಲೆಯ ದಾರಿಯನ್ನಾದರೂ ಸುಲಭವಾಗಿ ಹುಡುಕಬಲ್ಲೆವು, ಆದರೆ ಪಕ್ಕದ ಕೋಣೆಯಲ್ಲಿರುವ ಮನಸ್ಸಿನ ದಾರಿಯನ್ನು ಮಾತ್ರ ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ! ಇವತ್ತು ನಮ್ಮ ಇಡೀ ಜಗತ್ತು ಮುಖಾಮುಖಿ ಭೇಟಿಯ ‘ಆಪ್ತ ಸ್ಪರ್ಶ’ದಿಂದ, ಯಾಂತ್ರಿಕ ‘ಸಂದೇಶ’ದ ಚೌಕಟ್ಟಿಗೆ ಬಂದು ನಿಂತಿದೆ.ಒಂದೇ ಸೂರಿನಡಿ, ಒಂದೇ ಕತ್ತಲ ಕೋಣೆಯಲ್ಲಿ ನಾಲ್ಕು ಜೀವಗಳು ಕುಳಿತಿವೆ. ಅಲ್ಲಿ ಗಾಢವಾದ ಮೌನವಂತೂ ಆವರಿಸಿದೆ, ಆದರೆ ಆ ಮೌನವನ್ನು ಸೀಳಿಕೊಂಡು ಮಂದಬೆಳಕಿನ ಪರದೆಯ ನೀಲಿ ಬೆಳಕು ಆ ನಾಲ್ಕೂ ಮುಖಗಳ ಮೇಲೆ ತಣ್ಣಗೆ…

Read More

ದೆಹಲಿ ಅಗ್ನಿ ದುರಂತ: 21 ಸಾವು ಪ್ರಕರಣದಲ್ಲಿ ಅತಿಥಿಗೃಹ ಮಾಲೀಕ ಬಂಧನ

ಹೊಸದಿಲ್ಲಿ, ಜೂನ್ 4: ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ಫರಿಶ್ ಸ್ಟೇ ಬಿ & ಬಿ ಅತಿಥಿಗೃಹದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಲವಕೇಶ್ ಬಜಾಜ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ. ಹೌಝ್ ರಾಣಿ ಪ್ರದೇಶದಲ್ಲಿರುವ ಐದು ಮಹಡಿಯ ಅತಿಥಿಗೃಹದಲ್ಲಿ ಬುಧವಾರ ನಸುಕಿನ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ 18 ಮಂದಿ…

Read More

ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ಕಾರ್ಯಕ್ರಮ: ಕಲಾವಿದರಿಗೆ ಸನ್ಮಾನ

ಮಂಗಳೂರು: ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಸರಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಧರ್ಮದರ್ಶಿ ಸುರೇಶ್ ಸಾಲಿಯನ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟಕ್ಕೆ ಸಮಸ್ತ ಕಲಾಭಿಮಾನಿಗಳು ಸಹಕಾರ ನೀಡಬೇಕು. ಧರ್ಮ ಪ್ರಜ್ಞೆಯನ್ನು ಬೆಳೆಸುವ ಹಾಗೂ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ…

Read More

ಟೆಕ್ಸಾಸ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ: ಭಾರತೀಯ ಸಮುದಾಯದ ಆಕ್ರೋಶ

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವ ಘಟನೆ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಭಾರತೀಯ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಟೆಕ್ಸಾಸ್‌ನ Frisco ನಗರದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಭಾರತದ ತ್ರಿವರ್ಣ ಧ್ವಜವನ್ನು ಹರಿದು ಹಾಕುತ್ತಾ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ ಎನ್ನಲಾಗಿದೆ. ಸಿಟಿ ಹಾಲ್ ಸಮೀಪ ನಡೆದ ಘಟನೆಯಲ್ಲಿ, ಆರೋಪಿ ಕೈಯಲ್ಲಿ ತ್ರಿವರ್ಣ ಧ್ವಜವನ್ನು…

Read More

ವಿಧಾನ ಪರಿಷತ್ ಚುನಾವಣೆ: ಬಿ.ಕೆ. ಹರಿಪ್ರಸಾದ್, ಪಿ.ವಿ. ಮೋಹನ್‌ಗೆ ಕಾಂಗ್ರೆಸ್ ಟಿಕೆಟ್

ಮಂಗಳೂರು, ಜೂನ್ 4: ಜೂನ್ 18ರಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಬಿ.ಕೆ. ಹರಿಪ್ರಸಾದ್ ಹಾಗೂ ಪಿ.ವಿ. ಮೋಹನ್ ಅವರಿಗೆ ಅವಕಾಶ ನೀಡಿದೆ. ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಧಾನ ಪರಿಷತ್ ಚುನಾವಣೆಗೆ ಬಿ.ಕೆ. ಹರಿಪ್ರಸಾದ್, ತಿಪ್ಪನಪ್ಪ ಕಮಕನೂರ್, ಪಿ.ವಿ. ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಜೂನ್…

Read More

ಇಸ್ರೇಲ್–ಲೆಬನಾನ್ ಹೊಸ ಕದನ ವಿರಾಮ ಒಪ್ಪಂದ: ಲಿಟಾನಿ ನದಿ ದಕ್ಷಿಣದಲ್ಲಿ ಹಿಜ್ಬುಲ್ಲಾ ಮುಕ್ತ ಭದ್ರತಾ ವಲಯ

ಬೈರೂತ್: ಹಲವು ತಿಂಗಳುಗಳಿಂದ ಮುಂದುವರಿದಿದ್ದ ಗಡಿ ಸಂಘರ್ಷ ಮತ್ತು ವೈಮಾನಿಕ ದಾಳಿಗಳ ನಡುವೆಯೇ ಇಸ್ರೇಲ್ ಹಾಗೂ ಲೆಬನಾನ್ ಹೊಸ ಕದನ ವಿರಾಮ ಒಪ್ಪಂದವನ್ನು ನವೀಕರಿಸಲು ಒಪ್ಪಿಕೊಂಡಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಯ ಬಳಿಕ, ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾ ಮುಕ್ತ ವಿಶೇಷ ಭದ್ರತಾ ವಲಯಗಳನ್ನು ರಚಿಸುವ ಮಹತ್ವದ ನಿರ್ಧಾರಕ್ಕೆ ಉಭಯ ದೇಶಗಳು ಬಂದಿವೆ. ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ನಡೆದ ಚರ್ಚೆಗಳ ಬಳಿಕ ಬಿಡುಗಡೆಗೊಂಡ ಜಂಟಿ ಹೇಳಿಕೆಯಲ್ಲಿ, ಕದನ ವಿರಾಮ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಹಿಜ್ಬುಲ್ಲಾದಿಂದ…

Read More
error: Content is protected !!