ಬೆಳ್ಳಿಪರದೆಯಲ್ಲಿ ಹಳ್ಳಿ ಪ್ರತಿಭೆಯ ಮಿಂಚು : ಉದಯ ಕುಮಾರ್ ನೆಟ್ಟಣಿಗೆ ಅವರ ಕಲಾ ಪಯಣ

ಮಣ್ಣಿನ ಒಡಲಾಳದಲ್ಲಿ ಅಡಗಿರುವ ಬೀಜವೊಂದು ಸೂಕ್ತ ಕಾಲದ ಮಳೆಗಾಗಿ ಕಾಯುವಂತೆ, ಕಲೆಯೆಂಬುದು ಕೆಲವರ ಆಂತರ್ಯದಲ್ಲಿ ಸುಪ್ತ ಜ್ವಾಲೆಯಾಗಿ ಧಗಧಗಿಸುತ್ತಿರುತ್ತದೆ. ಅದಕ್ಕೆ ಪ್ರೋತ್ಸಾಹದ ತಂಗಾಳಿ ಸೋಕಿದಾಗ ಮಾತ್ರ ಅದು ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಹಳ್ಳಿಯ ಹಸಿರು ಹೊದಿಕೆಯ ಪರಿಸರದಲ್ಲಿ, ಗ್ರಾಮೀಣ ಬದುಕಿನ ನೋವು ನಲಿವುಗಳ ನೈಜ ಪಾಠಶಾಲೆಯಲ್ಲಿ ಬೆಳೆದು ಬಂದ ಯುವಕ ಉದಯ ಕುಮಾರ್ ನೆಟ್ಟಣಿಗೆ. ಬಾಲ್ಯದಿಂದಲೇ ಕಲಾಭಿಮಾನದ ತೀವ್ರ ಹಂಬಲವನ್ನು ಎದೆಯೊಳಗೆ ನುಂಗಿ ಹಿಡಿದಿಟ್ಟುಕೊಂಡು, ದಿನನಿತ್ಯದ ಬದುಕಿನ ಜವಾಬ್ದಾರಿಗಳ ನಡುವೆ ಅದನ್ನು ಜಾಗೃತವಾಗಿರಿಸಿಕೊಂಡಿದ್ದ ಈ ಅಪರೂಪದ ಪ್ರತಿಭೆ…

Read More

ಡಿ.ಎಸ್‌.ಐ.ಎ ಮಹಿಳಾ ವಿಭಾಗದಿಂದ ಸರಳ ಹೇರ್ ಬನ್ ಹಾಗೂ ಹೇರ್ ಸ್ಟೈಲ್ ಕಾರ್ಯಾಗಾರ

ಮಂಗಳೂರು: ಮಂಗಳೂರು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (DSIA) ಮಹಿಳಾ ವಿಭಾಗದ ವತಿಯಿಂದ ಸರಳ ಹೇರ್ ಬನ್ ಮತ್ತು ಹೇರ್ ಸ್ಟೈಲ್ ಕುರಿತ ಕಾರ್ಯಾಗಾರವನ್ನು ಜೂನ್ 3ರಂದು ಬೆಳಿಗ್ಗೆ 10.30 ಗಂಟೆಗೆ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಡಿ.ಎಸ್‌.ಐ.ಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರವನ್ನು ಅನುಭವಸಂಪನ್ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೀತಾ ರಾಜಾರಾಮ ನಡೆಸಿಕೊಡಲಿದ್ದು, ಕೂದಲು ತಯಾರಿ, ಕ್ರಿಂಪಿಂಗ್ ತಂತ್ರಗಳು, ಬ್ಯಾಕ್-ಕಾಂಬಿಂಗ್ ವಿಧಾನಗಳು ಹಾಗೂ ಸರಳ ಮತ್ತು ಆಕರ್ಷಕ ಹೇರ್ ಸ್ಟೈಲ್‌ಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ. ಸೌಂದರ್ಯ ಮತ್ತು…

Read More

ಜೂನ್ 3ರಂದು ಫಾದರ್ ಮುಲ್ಲರ್‌ನಿಂದ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿ

ಮಂಗಳೂರು: ಮಾದಕವಸ್ತು ಸೇವನೆ ಹಾಗೂ ವ್ಯಸನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಜೂನ್ 3ರಂದು ಬೆಳಿಗ್ಗೆ 7 ಗಂಟೆಗೆ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಡಾ. ಮೈಕಲ್ ಸಾಂತೂ ಮಯರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ನರ್ಸಿಂಗ್ ಶಾಲೆ, ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ಶ್ರೀಮತಿ ರಮ್ಯಾ ಯನ್ ಧರ್ಬೆತಡ್ಕ ವಹಿಸಿದರು .ಸಭೆಯನ್ನು ಶ್ರೀ ಪ್ರಜಿತ್ ಅಭಕಾರಿ ಅಧಿಕಾರಿ ಕುಂಬಳೆ ಇವರು ಉದ್ಘಾಟಿಸಿದರು . ಮುಖ್ಯ ಅತಿಥಿಗಾಳಗಿ ವಸುದೈವ ಭಜನಾ ಕುಟುಂಬ…

Read More

ಜಮೀರ್ ಮತ್ತು ನನ್ನ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ಇಲ್ಲ: ಯು.ಟಿ. ಖಾದರ್

ಮಂಗಳೂರು, ಜೂನ್ 2: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ತಮ್ಮ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ನಡುವೆ ಯಾವುದೇ ರೀತಿಯ ಸಚಿವ ಸ್ಥಾನ ಪೈಪೋಟಿ ಇಲ್ಲ ಎಂದು ವಿಧಾನಸಭಾಧ್ಯಕ್ಷ U. T. Khader ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಡಿಸಿಎಂ ಸ್ಥಾನ ಸಿಗುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, “ನಾನು ಅದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು….

Read More

ಶತಮಾನೋತ್ಸವದ ಹೊಸ್ತಿಲಲ್ಲಿಯೂ ಬಾಡಿಗೆ ಕಟ್ಟಡದಲ್ಲಿಯೇ ಪಾಠ: ಉದ್ಯಾವರ ತೋಟ ಜಿ.ಎಂ.ಎಲ್.ಪಿ. ಶಾಲೆಯ ದುಸ್ಥಿತಿ

ಮಂಜೇಶ್ವರ, ಜೂನ್ 2: ಶತಮಾನದ ಇತಿಹಾಸ ಹೊಂದಿರುವ ಉದ್ಯಾವರ ತೊಟ್ಟ ಸರ್ಕಾರಿ ಎಲ್.ಪಿ. ಶಾಲೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಿಥಿಲಗೊಂಡ ಕಟ್ಟಡದ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1927ರ ಜನವರಿ 1ರಂದು ಆರಂಭಗೊಂಡ ಈ ಶಾಲೆಗೆ ಇಂದಿಗೂ ಸ್ವಂತ ಜಾಗ ಅಥವಾ ಕಟ್ಟಡ ಇಲ್ಲ. ವಕ್ಫ್ ಬೋರ್ಡ್‌ಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಶಾಲೆ ನಡೆಯುತ್ತಿದ್ದು, ಕಟ್ಟಡದ ಶೋಚನೀಯ ಸ್ಥಿತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ….

Read More

ಏ ಐ ಕೆಮೆರಾ ನಿರ್ವಹಣೆ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ-ಯು ಟಿ ಖಾದರ್ ನಿಲುವಿಗೆ ಸಿಪಿಐಎಂ ವಿರೋಧ

ವಾಹನ ಸವಾರರ ನಿಯಮ ಉಲ್ಲಂಘನೆ, ಕ್ರಿಮಿನಲ್ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲು ಉಳ್ಳಾಲ‌ ತಾಲೂಕು ವ್ಯಾಪ್ತಿಯಲ್ಲಿ ಏಐ ಕೆಮೆರಾ ಅಳವಡಿಸಲು ರಾಜ್ಯ ಸರಕಾರ 20 ಕೋಟಿ ರೂಪಾಯಿ ಅನುದಾನ ಒದಗಿಸಿರುವುದು ಸ್ವಾಗತಾರ್ಹ. ಆದರೆ, ಕೆಮೆರಾಗಳ ನಿರ್ವಹಣೆಯ ಜವಾಬ್ದಾರಿಯನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ವಹಿಸಲು ಕ್ಷೇತ್ರದ ಶಾಸಕ ಯು ಟಿ ಖಾದರ್ ಮುಂದಾಗಿರುವುದು ಖಂಡನಾರ್ಹ. ಖಾಸಗಿ ಮೆಡಿಕಲ್ ಕಾಲೇಜು ಮಾಲಕರ ಮೇಲೆ ಖಾದರ್ ಅವರ ಅತಿ ಪ್ರೀತಿಯನ್ನು ಇದು ಎತ್ತಿ ತೋರಿಸುತ್ತದೆ. ಇದು ಆಡಳಿತದ…

Read More

ಮಳೆಗಾಲಕ್ಕೂ ಮುನ್ನ ಶಾಲೆ-ಅಂಗನವಾಡಿ ದುರಸ್ತಿಗೆ ಕೋಟ್ಯಂತರ ರೂ. ಅನುದಾನ

ಮಂಗಳೂರು:ಶಾಲೆ ಮತ್ತು ಅಂಗನವಾಡಿ ದುರಸ್ತಿ ಕಾರ್ಯ ಅನುದಾನದ ಕೊರತೆ ಹಾಗೂ ಇತರ ಕಾರಣಗಳಿಂದ ತುರ್ತಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ 91 ಶಾಲೆ ಗಳು, 137 ಅಂಗನವಾಡಿಗಳ ದುರಸ್ತಿಗೆ ಅನುಮೋದನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿರುವ ಅವರು, ಅಂಗನವಾಡಿಗಳಿಗೆ 2.5 ಕೋಟಿ ರೂ. ಹಾಗೂ ಶಾಲೆಗಳನ್ನು 1.5 ಕೋಟಿ ರೂ. ವೆಚ್ಚದಲ್ಲಿ ತುರ್ತಾಗಿ ದುರಸ್ತಿ‌ ಮಾಡಲು ಅನುಮೋದನೆ…

Read More

ಒಂದೂವರೆ ವರ್ಷದ ಕಂದಮ್ಮನ ಸಾವಿಗೆ ಬೆಚ್ಚಿಬೀಳಿಸುವ ತಿರುವು; ತಾಯಿ ಹಾಗೂ ಲಿವ್-ಇನ್ ಸಂಗಾತಿ ಬಂಧನ

ತಿರುವನಂತಪುರಂ: ಕೇರಳದ ನೆಡುಮಂಗಾಡ್‌ನಲ್ಲಿ ಒಂದೂವರೆ ವರ್ಷದ ಕಂದಮ್ಮನ ಸಾವಿನ ಪ್ರಕರಣ ಬೆಚ್ಚಿಬೀಳಿಸುವ ತಿರುವು ಪಡೆದಿದ್ದು, ಮಗುವಿನ ತಾಯಿ ಅಖಿಲಾ ಹಾಗೂ ಆಕೆಯ ಲಿವ್-ಇನ್ ಸಂಗಾತಿ ಅಷ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 29ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದ್ದು, ಮಗುವಿನ ದೇಹದ ಮೇಲೆ 51ಕ್ಕೂ ಹೆಚ್ಚು ಗಾಯಗಳ ಗುರುತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಹಳೆಯ ಮೂಳೆ ಮುರಿತಗಳು, ಸುಟ್ಟ ಗಾಯಗಳು ಹಾಗೂ ಆಂತರಿಕ ರಕ್ತಸ್ರಾವದ ಲಕ್ಷಣಗಳೂ ವರದಿಯಲ್ಲಿ ಉಲ್ಲೇಖವಾಗಿವೆ ಎನ್ನಲಾಗಿದೆ. ಪೊಲೀಸರ ತನಿಖೆಯ ಪ್ರಕಾರ,…

Read More

ತಲೆಯ ನೋವಿನಿಂದ ಬಳಲುತ್ತಿದ್ದ ವೃದ್ಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ 85 ವರ್ಷದ ವೃದ್ಧರೊಬ್ಬರು ಗನ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ತಟ್ಟೆಕೊಡ್ಲು ರಾಮಚಂದ್ರ ರಾವ್ (85) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ರಾಮಚಂದ್ರ ರಾವ್ ಅವರು ತಮ್ಮ ಬಳಿಯಿದ್ದ ಸಿಂಗಲ್ ಬ್ಯಾರಲ್ ಗನ್ ಬಳಸಿ ಕುತ್ತಿಗೆ ಸಮೀಪ ಗುಂಡು ಹಾರಿಸಿಕೊಂಡಿದ್ದು, ಪರಿಣಾಮ ತಲೆಯ ಭಾಗ ತೀವ್ರವಾಗಿ ಛಿದ್ರಗೊಂಡಿದೆ ಎಂದು…

Read More
error: Content is protected !!