ಜೂನ್ 14ರಂದು ಬಾಕುಡ ಸಮಾಜ ಸೇವಾ ಸಮಿತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹೊಸಂಗಡಿ: ಬಾಕುಡ ಸಮಾಜ ಸೇವಾ ಸಮಿತಿ (ರಿ) ಕೇರಳ-ಕರ್ನಾಟಕ ಕೇಂದ್ರ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉಚಿತ ಪುಸ್ತಕ ವಿತರಣೆ ಹಾಗೂ ಕಲಿಕಾ ಕಿಟ್‌ಗಳ ವಿತರಣೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಸಾಲಿನ ಉಚಿತ ಪುಸ್ತಕ ವಿತರಣೆ, ಕಲಿಕಾ ಕಿಟ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜೂನ್ 14ರಂದು ಆದಿತ್ಯವಾರ ಹೊಸಂಗಡಿ ಸಮೀಪದ ಪ್ರೇರಣಾ ಹಾಲ್‌ನಲ್ಲಿ ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ. ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ…
