ಫೆ.7 ಮತ್ತು 8ರಂದು ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳ : ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ

ಮಂಗಳೂರು: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು ಇದರ ಪೂರ್ವಬಾವಿ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ. ಐಕಳ ಕಂಬಳದಲ್ಲಿ ಜೂಜು ನಿಯಂತ್ರಣ ಹಾಗೂ ಸಮಯಪಾಲನೆಗೆ ವಿಶೇಷ ಒತ್ತನ್ನು ನೀಡಲಾಗುವುದು ಎಂದು ಕಂಬಳ ಅಸೋಸಿಯೇಶನ್ ಮತ್ತು ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು. ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಂಬಳದಲ್ಲಿ ಜೂಜು ಸಕ್ರಿಯವಾಗಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಐಕಳ ಕಂಬಳದಲ್ಲಿ…

Read More

ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ಸ್ವಾಗತ ಸಮಿತಿ ರೂಪೀಕರಣಕನ್ನಡ ತಾಯಿಯ ನಿಸ್ವಾರ್ಥ ಸೇವೆಗೆ ಸಂಪೂರ್ಣವಾಗಿ ಸಹಕರಿಸಿ -ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ

ನುಳ್ಳಿಪ್ಪಾಡಿ: ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಿಂದ ಸ್ಥಾಪಿತವಾಗಿ ಕಾಸರಗೋಡು ಜಿಲ್ಲೆಯಲ್ಲದೆ ಕರ್ನಾಟಕದ ದ.ಕ ಜಿಲ್ಲೆ, ಕೊಡಗು, ಮೈಸೂರು, ಕೋಲಾರ, ಗದಗ, ಚಿತ್ರದುರ್ಗ, ಕೊಪ್ಪಳ, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಮಿತಿ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಇದೇ ಬರುವ 22.02.2026 ಭಾನುವಾರದಂದು ಕನ್ನಡ ಭವನದ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ ನಡೆಯುವ “ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ರ ಸ್ವಾಗತ…

Read More

ವೆನ್ಲಾಕ್ ಆಸ್ಪತ್ರೆ ಮುಖ್ಯ ವೈದ್ಯರ ಹುದ್ದೆ ‘ಮೆಡಕಲ್ ಸೂಪರಿಂಟೆಂಡೆಂಟ್’ ಆಗಿ ಮೆಲ್ದರ್ಜೆಗೆ

ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸಲು ₹70 ಕೋಟಿಯಷ್ಟು ಅನುದಾನವನ್ನು ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮೊದಲ ಹಂತವಾಗಿ ಈಗಾಗಲೇ ₹35 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದೆ. ಹಾಗೆಯೇ ಕೆಎಂಸಿ ಯೊಂದಿಗೆ ಸುಮಾರು ₹100 ಕೋಟಿ ಮೊತ್ತದ ಅನುದಾನ ಪಡೆಯಲು ಚರ್ಚೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಆ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ. ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸದೃಢ ಆಡಳಿತ ವ್ಯವಸ್ಥೆಗಾಗಿ ಪ್ರಸ್ತುತ ಇರುವ ಡಿಸ್ಟ್ರಿಕ್ಟ್ ಸರ್ಜನ್ (ಮುಖ್ಯ ವೈದ್ಯರ) ಹುದ್ದೆಯನ್ನುಮೆಡಿಕಲ್ ಸೂಪರಿಂಟೆಂಡೆಂಟ್…

Read More

ಮಂಜೇಶ್ವರ ಕುಂಜತ್ತೂರಿನಲ್ಲಿ ತಂದೆಯಿಂದಲೇ ಮಗಳ ಬರ್ಬರ ಕೊಲೆ

ಕುಂಜತ್ತೂರಿನ ಹಿಲ್ ಟೊಪ್ ಎಂಬಲ್ಲಿ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ನಡೆದಿದೆಉಮ್ಮೆರ್ ಫಾರೂಕ್ ಎನ್ನುವವ ತನ್ನ ಮಗಳು +2 ವಿದ್ಯಾರ್ಥಿ ಮರಿಯಾಮ್ ಜೂಮೈಲಾ ಳನ್ನು ಚಾಕುವಿನಿಂದ ಹಿರಿದು ಕೊಲೆಮಾಡಿದ್ದಾನೆ ಮಾದಕ ವ್ಯಾಸನಿಯಾದ ತಂದೆಯ ಮತ್ತು ಮಗಳ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ ಎನ್ನಲಾಗಿದೆಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂದಿಸಿದ್ದು ಮನೆಯನ್ನು ಪೊಲೀಸರು ಅದುಬಸ್ತಿಗೆ ತೆಗೆದಿದ್ದಾರೆಮತ್ತು ತನಿಖೆ ಮುಂದುವರೆಸಿದ್ದಾರೆ

Read More

ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿ–ಬಸ್‌ನಿಂದ ಬ್ಯಾಟರಿ, ಡೀಸೆಲ್ ಕಳವು

ಮಂಜೇಶ್ವರ: ರಿಪೇರಿ ಉದ್ದೇಶಕ್ಕಾಗಿ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳು ಹಾಗೂ ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕುಂಬಳೆ ಪೆರ್ವಾಡ್‌ನಲ್ಲಿರುವ ಎಸ್‌ಜಿ ಆಟೋ ವರ್ಕ್‌ಶಾಪ್‌ನ ಹಿಂಭಾಗದಲ್ಲಿ ಲಾರಿಗಳು ಮತ್ತು ಬಸ್ ಅನ್ನು ನಿಲ್ಲಿಸಲಾಗಿತ್ತು. ಮೊನ್ನೆ ರಾತ್ರಿ ಕಳ್ಳರು ಈ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಿಗ್ಗೆ ವಾಹನಗಳನ್ನು ಪರಿಶೀಲಿಸಿದ ವೇಳೆ ಬ್ಯಾಟರಿಗಳು ಹಾಗೂ ಡೀಸೆಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಟರಿ ಕಳವಿನಿಂದ ಸುಮಾರು ಒಂದು…

Read More

ಎಂಡಿಎಂಎ–ಗಾಂಜಾ ವಶ, ಮೂವರು ಬಂಧನ

ಮಂಜೇಶ್ವರ : ಜಿಲ್ಲೆಯಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಂಗಲ್ಪಾಡಿ ಸೋಂಕಾಲ್‌ನಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಣಿ ಯಾನೆ ಇರ್ಷಾದ್ (34) ಎಂಬಾತನನ್ನು ಬಂಧಿಸಲಾಗಿದೆ. ಇದೇ ರೀತಿ ಬೇಕಲ ಪೊಲೀಸರು ಕೋಟಿಕುಳಂ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1.894 ಕಿಲೋಗ್ರಾಂ ಗಾಂಜಾ ವಶಪಡಿಸಿಕೊಂಡು,…

Read More

ಉದ್ಯಾವರ ಅಲ್ ಸಖಾಫ್ ಶಾಲೆಯ 27ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ಸಂಪನ್ನ

ಮಂಜೇಶ್ವರ : 1998 ರಲ್ಲಿ ಉದ್ಯಾವರ ಸಾವಿರ ಜಮಾಹತಿನ ಅಧೀನದಲ್ಲಿ ಆರಂಭಗೊಂಡು ಗಡಿ ಪ್ರದೇಶದ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಎಲ್ಲರ ಗಮನ ಸೆಳೆದಿರುವ ಉದ್ಯಾವರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಎಲ್ಲಾ ವರ್ಷಕ್ಕಿಂತಲೂ ಭಿನ್ನವಾಗಿ ಈ ವರ್ಷ ಕೂಡಾ ಕೂಡಾ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸ್ಮರಣೀಯ…

Read More

ಐತಿಹಾಸಿಕ ಗುಜ್ಜರಕೆರೆ ನೀರು ಕುಡಿಯಲು ಅಯೋಗ್ಯ: ಪ್ರಯೋಗಾಲಯ ವರದಿಯಿಂದ ದೃಢ

ಮಂಗಳೂರಿನ ಗುಜ್ಜರಕೆರೆಗೆ ಐತಿಹಾಸಿಕ‌ಮತ್ತು ಧಾರ್ಮಿಕ ಮಹತ್ವವಿದೆ. ಆದರೆ ಅದರ ನೀರು ಈಗ ಬ್ಯಾಕ್ಟಿರಿಯಾಗಳಿಂದಾಗಿ ಕುಡಿಯಲು ಅಯೋಗ್ಯವಾಗಿದೆ.ನೀರು ಕಲುಷಿತವಾಗಿರುವುದು ಪ್ರಯೋಗಾಲಯ ವರದಿಯಿಂದ ಮತ್ತೊಮ್ಮೆ ಸಾಬೀತಾಗಿದೆ. ಒಂದು ಕಾಲದಲ್ಲಿ ರೋಗರುಜಿನ ಗಳಿದ್ದರೆ ಅದನ್ನು ಗುಣಪಡಿಸುವ ಪವಿತ್ರ ತೀರ್ಥಕೆರೆಯಾಗಿತ್ತು ಗುಜ್ಜರಕೆರೆ. ಅದು ಜನವಸತಿಯ ಒತ್ತಡದಿಂದಾಗಿ ಸದ್ಯ ರೋಗರುಜಿನ ಉಂಟುಮಾಡುವ ಬ್ಯಾಕ್ಟಿರಿಯಾಗಳಿಂದ ಕೂಡಿದೆ.ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದೆ. ಪ್ರಯೋಗಾಲಯದ ವರದಿ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆಯನ್ನು ಅಭಿವೃದ್ದಿ ಮಾಡಲಾಗಿತ್ತು. ಸುತ್ತಮುತ್ತ ನೋಡಲು…

Read More

ಸುರತ್ಕಲ್‌ನಲ್ಲಿ ವಿದ್ಯಾರ್ಥಿಗಳು–ಸಾರ್ವಜನಿಕರ ಶ್ರಮದಾನ: ರಾಷ್ಟ್ರೀಯ ಹೆದ್ದಾರಿ ಹಾಗೂ ಬಸ್ ನಿಲ್ದಾಣಗಳ ಸ್ವಚ್ಚತಾ ಅಭಿಯಾನ

ಮಂಗಳೂರು:ಸುರತ್ಕಲ್ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೂಡಿ ಬಸ್ ನಿಲ್ದಾಣ ಮತ್ತು ಪರಿಸರ ಸ್ವಚ್ಚಗೊಳಿಸುವ ಕಾರ್ಯ ನಡೆಸಿದರು.ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ ದೇಶದ ಆರ್ಥಿಕತೆಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಹೇಳಿದರು. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀನಿವಾಸ್ ಕಾಲೇಜು ಸಮೂಹ ವಿದ್ಯಾ ಸಂಸ್ಥೆ ಮುಕ್ಕ ಹಾಗೂ ಸುರತ್ಕಲ್ ಪೋಲಿಸ್…

Read More

ಕಮ್ಯುನಿಸ್ಟ್ ಹೋರಾಟಗಾರ ಕೃಷ್ಣ ಶೆಟ್ಟಿಯವರ ಜೀವನ ಚರಿತ್ರೆ ಬಿಡುಗಡೆ

ಮಂಗಳೂರು: ಕರಾವಳಿ ಕರ್ನಾಟಕದ ಖ್ಯಾತ ಕಮ್ಯುನಿಸ್ಟ್ ಹೋರಾಟಗಾರ ದಿ. ಕೃಷ್ಣ ಶೆಟ್ಟಿಯವರ ಜೀವನ ಹಾಗೂ ತ್ಯಾಗದ ಕಥೆಯನ್ನು ಒಳಗೊಂಡ ಪ್ರಮೋದ್ ಕುಮಾರ್ ರೈ ಸಂಪಾದಿತ ‘ಸ್ಟ್ರಗಲ್ ಫಾರ್ ಇಕ್ವಾಲಿಟಿ’ ಕೃತಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಕ್ಲಿಫ್ ಹೌಸ್ (ಮುಖ್ಯಮಂತ್ರಿಗಳ ಅಧಿಕೃತ ನಿವಾಸ)ನಲ್ಲಿ ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಎಂ.ಎ. ಬೇಬಿ ಅವರ ಪತ್ನಿ ಬೆಟ್ಟಿ ಲೂಯಿಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೇರಳ ಸರ್ಕಾರದ ಸಚಿವ ವಿ. ಶಿವಂಕುಟ್ಟಿ ಹಾಗೂ ಡಾ. ಆರ್. ಬಿಂದು…

Read More
error: Content is protected !!