ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ 21ನೇ ಪದವಿ ಪ್ರಧಾನ ಸಮಾರಂಭ.
“ಸಂಸ್ಥೆಯ ಹೆಮ್ಮೆಯ ಸಾಧನೆಗಳಲ್ಲಿ ನೀವು ಪಾಲುದಾರರು ” – ವಾಸುದೇವ ಕಾಮತ್ಮಂಗಳೂರು, ಆ. 16: “ನಮ್ಮ ಕಾಲೇಜಿನಲ್ಲಿ ನಿರ್ಮಿಸಿದ ಆಧುನಿಕ ಸೌಲಭ್ಯಗಳು, ಈ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ದೊರಕಿದ ಸ್ವಾಯತ್ತ ಸ್ಥಾನಮಾನ, NAAC ಮಾನ್ಯತೆ, ಅನೇಕ ಶ್ರೇಣಿಗಳು ಹಾಗೂ ಚಿನ್ನದ ಪದಕ ಇವು ಸಂಸ್ಥೆಯ ಹೆಮ್ಮೆಯ ಸಾಧನೆಗಳು. ಈ ಸಾಧನೆಗಳ ಸಹಯಾತ್ರಿಗಳೆಂದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು. ಬರುವ ಡಿಸೆಂಬರ್ 24, 2025ರಂದು ಜರುಗುವ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಯೊಬ್ಬ ಪದವೀಧರರೂ ಪಾಲ್ಗೊಳ್ಳಿ, ಸಂಸ್ಥೆಯ ಶಕ್ತಿಯನ್ನು ವಿಶ್ವಮಟ್ಟದಲ್ಲಿ…