ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡನೀಯ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆಚೆಲ್ಲಾಟ: ಹಿಂದಿನ CET ವ್ಯವಸ್ಥೆ ಜಾರಿಗೆ ಒತ್ತಾಯ

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗಂಭೀರ ಆತಂಕ ಸೃಷ್ಟಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ.ಕುಳಾಲು ಸುಬಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ CET ವ್ಯವಸ್ಥೆಯನ್ನು ರದ್ದುಪಡಿಸಿ NEET ಜಾರಿಗೊಳಿಸಿದ ಪರಿಣಾಮ ರಾಜ್ಯದ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವಕಾಶ ವಂಚಿತರಾಗಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡನೆ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ:ಕೇಂದ್ರದ ವಿರುದ್ಧ ಅಸ್ಮ ಹಸೈನಾರ್ ಆಕ್ರೋಶ

ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದ್ದು, ಕೇಂದ್ರ ಸರಕಾರದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖಂಡೆ K. A. ಅಸ್ಮ ಹಸೈನಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, “ಈ ಹಿಂದೆ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ CET ವ್ಯವಸ್ಥೆಯನ್ನು ಕಡೆಗಣಿಸಿ ಕೇಂದ್ರ ಸರಕಾರ NEET ಪರೀಕ್ಷೆ ಜಾರಿಗೊಳಿಸಿದ ಸಂದರ್ಭದಲ್ಲೇ ಹಲವು…

Read More

ಉಪ್ಪಳದ ಕೊಂಡೆವೂರು ಆಶ್ರಮದಲ್ಲಿ 132 ಅಪರೂಪದ ಕಾಸರಗೋಡು ಕುಳ್ಳನ್ ಹಸುಗಳ ಸಂರಕ್ಷಣೆ

ಉಪ್ಪಳ: ಕಾಸರಗೋಡು ಜಿಲ್ಲೆಯ ಕೊಂಡೆವೂರು ನಿತ್ಯಾನಂದಮಠ ಆಶ್ರಮ ಕೇವಲ ಆಧ್ಯಾತ್ಮಿಕ ಕೇಂದ್ರವಷ್ಟೇ ಅಲ್ಲ, ಅಪರೂಪದ ನಾಡುಜಾತಿ ಪಶು ಸಂರಕ್ಷಣೆ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಗೆ ಮಾದರಿಯಾಗಿಯೂ ಗಮನ ಸೆಳೆಯುತ್ತಿದೆ. ವಂಶನಾಶದ ಅಂಚಿನಲ್ಲಿದ್ದ ಅಪರೂಪದ ಕಾಸರಗೋಡು ಕುಳ್ಳನ್ ಹಸು ಜಾತಿಯ 132 ಹಸುಗಳನ್ನು ಆಶ್ರಮದಲ್ಲಿ ಸಂರಕ್ಷಿಸಿ ಪೋಷಿಸಲಾಗುತ್ತಿದೆ. ಒಮ್ಮೆ ಕಾಸರಗೋಡು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ನಾಡುಜಾತಿ ಹಸುಗಳು, ಜೀವನಶೈಲಿಯ ಬದಲಾವಣೆ, ಅರಣ್ಯ ನಾಶ ಹಾಗೂ ಸಂಕರ ಜಾತಿಯ ಹಸುಗಳ ಪ್ರಭಾವದಿಂದ ನಿಧಾನವಾಗಿ ನಾಶದ ಅಂಚಿಗೆ ತಲುಪಿದ್ದವು….

Read More

ಆ.21ರಿಂದ ‘ಸಮಾಧಾನ ಸಮಾರೋಹ್-2026’ ವಿಶೇಷ ಲೋಕ ಅದಾಲತ್

ಮಂಗಳೂರು:ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ರಾಜಿ ಸಂಧಾನ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೇ ಇತ್ಯರ್ಥಪಡಿಸುವ ಉದ್ದೇಶದಿಂದ ಆ.21ರಿಂದ 23ರವರೆಗೆ ‘ಸಮಾಧಾನ ಸಮಾರೋಹ್-2026’ ಹೆಸರಿನಲ್ಲಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ 43 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಗತ್ಯವಿದ್ದರೆ…

Read More

ಕಾನ-ಜೋಕಟ್ಟೆ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ

ಸುರತ್ಕಲ್ :ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಕಾಮಗಾರಿ ನಡೆಸಿ ದುರಸ್ಥಿ ಮಾಡುವಂತೆ ಒತ್ತಾಯಿಸಿ ಇಂದು ಕಾನ ಜಂಕ್ಷನ್ ಬಳಿ ಡಿವೈಎಫ್ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ಎಂ.ಎಸ್.ಇ.ಝಡ್‌ ಮತ್ತು ಎಂ.ಆರ್.ಪಿ.ಎಲ್. ಕಂಪೆನಿಗಳು ನಿರ್ವಹಿಸಬೇಕಾದ ಮುಖ್ಯ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜನಪ್ರತಿನಿದಿನಗಳು ಕಂಪೆನಿಯವರ ಕಿವಿ…

Read More

ಕೋಳಿಮಾಂಸ ದರ ಏರಿಕೆಯಿಂದ ಗ್ರಾಹಕರಿಗೆ ಶಾಕ್: ಹೋಟೆಲ್ ದರವೂ ಗಗನಕ್ಕೇರಿ ಜನರ ಆಕ್ರೋಶ

ಕೇರಳ : ಕೋಳಿಮಾಂಸದ ಬೆಲೆ ಏರಿಕೆಯಿಂದ ಕೇರಳದಲ್ಲಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ತಿಂಗಳುಗಳ ಹಿಂದೆ ₹90ರಷ್ಟಿದ್ದ ಚಿಕನ್ ದರ ಇದೀಗ ₹180ರಿಂದ ₹185ಕ್ಕೆ ಏರಿಕೆಯಾಗಿ ಸಾಮಾನ್ಯ ಜನರಿಗೆ ಹೊರೆ ತಂದಿದೆ. ಮಾರುಕಟ್ಟೆಯಲ್ಲಿ ದರ ಏರಿಕೆಯಿಂದ ಹೋಟೆಲ್‌ಗಳಲ್ಲಿ ಚಿಕನ್ ಖಾದ್ಯಗಳ ಬೆಲೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೋಟೆಲ್‌ಗಳಿಗೆ ತೆರಳುವುದೇ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಡುಗೆ ಅನಿಲದ ದರ ಏರಿಕೆ, ಕೋಳಿಮಾಂಸದ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ಆಹಾರ ಪದಾರ್ಥಗಳ ದರ ಗಗನಕ್ಕೇರಿದೆ ಎಂದು ಹೋಟೆಲ್ ಮಾಲೀಕರು…

Read More

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತಷ್ಟು ತೀವ್ರ.ಯುಎಇಯಿಂದ ಇರಾನ್ ಮೇಲೆ ರಹಸ್ಯ ಸೈನಿಕ ದಾಳಿ

ದುಬೈ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಳ್ಳುತ್ತಿರುವ ನಡುವೆಯೇ, ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಇರಾನ್‌ ವಿರುದ್ಧ ರಹಸ್ಯ ಸೈನಿಕ ದಾಳಿ ನಡೆಸಿದೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಇದುವರೆಗೆ ನೇರ ಮಿಲಿಟರಿ ಭಾಗವಹಿಸುವಿಕೆಯನ್ನು ನಿರಾಕರಿಸಿದ್ದ ಯುಎಇ, ಈಗ ಸಂಘರ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ ಎಂದು ಅಮೆರಿಕದ ಪ್ರತಿಷ್ಠಿತ ಮಾಧ್ಯಮ The Wall Street Journal ವರದಿ ಮಾಡಿದೆ.ವರದಿ ಪ್ರಕಾರ, ಏಪ್ರಿಲ್‌ ಆರಂಭದಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಲಾವನ್ ದ್ವೀಪದ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಯುಎಇ…

Read More

NEET ಪರೀಕ್ಷೆ ರದ್ದು: 22.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರದ ಆಟ – ಸುಹಾನ್ ಆಳ್ವ ಆಕ್ರೋಶ

ಮೇ 3 ರಂದು ದೇಶಾದ್ಯಂತ ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-UG 2026) ಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ NSUI ಅಧ್ಯಕ್ಷ ಸುಹಾನ್ ಆಳ್ವ ತೀವ್ರವಾಗಿ ಖಂಡಿಸಿದ್ದಾರೆ. ಈ ವರ್ಷ ಸುಮಾರು 22.5 ಲಕ್ಷ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸು ಹೊತ್ತು ಈ ಪರೀಕ್ಷೆಯನ್ನು ಬರೆದಿದ್ದರು. ಆದರೆ, ಪತ್ರಿಕೆ ಸೋರಿಕೆಯಂತಹ ಗಂಭೀರ ಲೋಪದೋಷಗಳಿಂದಾಗಿ ಇಡೀ ಪರೀಕ್ಷಾ ವ್ಯವಸ್ಥೆಯೇ ಕುಸಿದುಬಿದ್ದಿದೆ. ಕೇಂದ್ರ ಸರ್ಕಾರದ ಈ ವೈಫಲ್ಯವು ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು…

Read More

ಕೇರಳ ಸಿಎಂ ಆಯ್ಕೆ ಕುತೂಹಲಕ್ಕೆ ಅಂತಿಮ ತೆರೆ? ಕೆ.ಸಿ. ವೇಣುಗೋಪಾಲ್ ಹೆಸರು ಮುಂಚೂಣಿಯಲ್ಲಿ

ತಿರುವನಂತಪುರಂ: 2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಮರಳಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತ ಕುತೂಹಲಕ್ಕೆ ಇದೀಗ ಅಂತಿಮ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಕಳೆದಿದ್ದರೂ ಮುಖ್ಯಮಂತ್ರಿ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದರಿಂದ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆ ಇಂದು ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್‌ನ…

Read More

ಮಣ್ಣಿನ ಮಗನ ಬೆವರು ಮತ್ತು ನಗರದ ‘ಬೈ-ಬೈ’ ಸಂಸ್ಕೃತಿ: ಒಂದು ಕಟು ವಾಸ್ತವ

​ದೂರದ ಕಾಂಕ್ರೀಟ್ ಕಾಡಿನಿಂದ, ಎಸಿ ಕಾರುಗಳ ಸದ್ದಿನ ನಡುವೆ ಬರುವ ಪಟ್ಟಣದ ಮಂದಿಗೆ ಹಳ್ಳಿ ಎಂಬುದು ಕೇವಲ ಒಂದು ವಾರಾಂತ್ಯದ ಆಕರ್ಷಕ ತಾಣ. ನಗರದ ಉಸಿರುಗಟ್ಟಿಸುವ ವಾತಾವರಣ, ಯಾಂತ್ರಿಕ ಬದುಕಿನ ಜಂಜಾಟದಿಂದ ಬೇಸತ್ತವರಿಗೆ ಹಳ್ಳಿಯ ಹಸಿರು ಹೊದಿಕೆ ಮತ್ತು ಶುದ್ಧ ಗಾಳಿ ಒಂದು ‘ಲಕ್ಸುರಿ’. ಬೇಸಿಗೆಯ ರಜೆ ಆರಂಭವಾಯಿತೆಂದರೆ ಸಾಕು, ಮೆಟ್ರೋಪಾಲಿಟನ್ ಮಂದಿ ತಮ್ಮ ಮಕ್ಕಳನ್ನು ಕರೆದುಕೊಂಡು ತಮ್ಮ ಮೂಲವನ್ನರಸಿ ಹಳ್ಳಿಯತ್ತ ಹೆಜ್ಜೆ ಹಾಕುತ್ತಾರೆ. ಅಲ್ಲಿನ ಹೊಸ ತಲೆಮಾರಿನ ಮಕ್ಕಳಿಗೆ ಮಣ್ಣಿನ ಸೊಗಡು ಆಪ್ತವಾಗುತ್ತದೆ. ಆದರೆ, ಈ…

Read More
error: Content is protected !!