Headlines

ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ: ಪ್ರಯಾಣಿಕರ ಸಂಕಷ್ಟಕ್ಕೆ ಪರಿಹಾರ ಸಿಗಲಿ

ಮಂಜೇಶ್ವರ: ಪ್ರಯಾಣಿಕರ ಸಂಕಷ್ಟ ಹಾಗೂ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಪರಿಹಾರ ಕಾಣದ ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ. ಲಿಫ್ಟ್ ಸೌಲಭ್ಯವಿಲ್ಲದಿರುವುದು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಮೇಲ್ಚಾವಣಿ ಇಲ್ಲದಿರುವುದರಿಂದ ವೃದ್ಧರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ಪ್ರಯಾಣಿಕರು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ​ ಬಹುತೇಕ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್‌ಗಳನ್ನು ಕಲ್ಪಿಸಲಾಗಿದ್ದರೂ, ಮಂಜೇಶ್ವರದಲ್ಲಿ ಈವರೆಗೆ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಲಗೇಜ್‌ಗಳೊಂದಿಗೆ ಬರುವವರು, ಅಶಕ್ತರು, ವೃದ್ಧರು ಮತ್ತು ಕೈಯಲ್ಲಿ ಹಸುಗೂಸುಗಳೊಂದಿಗೆ ಪ್ರಯಾಣಿಸುವ ತಾಯಂದಿರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ….

Read More

ಬ್ಯಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಈಜಿಪ್ಟ್‌ನ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನ ಬೆಂಬಲ

​ಮಂಗಳೂರು: ಬ್ಯಾರಿ ಸಮುದಾಯದ ಯುವ ವಿದ್ವಾಂಸರನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವೇದಿಕೆಗೆ ಪರಿಚಯಿಸುವ ಮತ್ತು ಅವರಿಗೆ ಅತ್ಯುತ್ತಮ ಇಸ್ಲಾಮಿಕ್ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ, ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಐತಿಹಾಸಿಕ ಹೆಜ್ಜೆಯೊಂದನ್ನು ಇರಿಸಿದೆ. ಈಜಿಪ್ಟ್‌ನ ಕೈರೋದಲ್ಲಿರುವ ವಿಶ್ವವಿಖ್ಯಾತ ‘ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಪದವಿ ಪಡೆಯಲು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳಿಗೆ ಟ್ರಸ್ಟ್ ಸಂಪೂರ್ಣ ಪ್ರಾಯೋಜಕತ್ವವನ್ನು ಘೋಷಿಸಿದೆ. ಅಲ್-ಅಝ್ಹರ್ ವಿಶ್ವವಿದ್ಯಾಲಯವು ಇಸ್ಲಾಮಿಕ್ ಜ್ಞಾನ ಮತ್ತು ಶೈಕ್ಷಣಿಕ ಸಂಶೋಧನೆಯಲ್ಲಿ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕೇಂದ್ರವಾಗಿದೆ. ಇಲ್ಲಿನ ವಿದ್ಯಾಭ್ಯಾಸವು ವಿದ್ಯಾರ್ಥಿಗಳಿಗೆ ಕೇವಲ…

Read More

ಬಡಗುಬೆಟ್ಟು ಕಂಬಳಕ್ಕೆ ತಡೆ: ಆದೇಶ ಹಿಂಪಡೆಯಲು ಶಾಸಕ ಗುರ್ಮೆ ಆಗ್ರಹ

ಉಡುಪಿ: ಉಡುಪಿ ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ವಿಧಿಸಲಾಗಿರುವ ತಡೆಯನ್ನು ತಕ್ಷಣ ಹಿಂಪಡೆಯುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಹಾಗೂ ಜನರ ಭಾವನೆಗಳಿಗೆ ನಂಟಿರುವ ಕಂಬಳಕ್ಕೆ ತಡೆ ವಿಧಿಸಿರುವ ಕ್ರಮವನ್ನು ವಿರೋಧಿಸಿದ ಅವರು, ಸಾಂಪ್ರದಾಯಿಕ ಕ್ರೀಡೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ಕರಾವಳಿಯ ಕಂಬಳಗಳ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಕೋರ್ಟ್ ಆದೇಶವನ್ನು…

Read More

ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ

ಕಾಸರಗೋಡು : ಕನ್ನಡ ಸಾಹಿತ್ಯ ಸಂಘಟಕ, ಹಿರಿಯ ಪತ್ರಕರ್ತ ಹಾಗೂ ಶಿಕ್ಷಕರಾದ ಜಯಾನಂದ ಪೆರಾಜೆ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ’ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಚುಟುಕು ಸಾಹಿತ್ಯ ಪರಿಷತ್, ಬರಹಗಾರರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಗಳ ಮೂಲಕ ಕನ್ನಡ ಸೇವೆ ಸಲ್ಲಿಸಿರುವ ಪೆರಾಜೆಯವರ ಬಹುಮುಖ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಸಂಸತ್‌ನಲ್ಲಿ ಭಾರಿ ಗದ್ದಲ, ಕಲಾಪ ಇಂದು ಮುಂದೂಡಿಕೆ

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿಚಾರ ಮುಂಗಾರು ಅಧಿವೇಶನದ ಮೊದಲ ದಿನವೇ ಸಂಸತ್‌ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಈ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿದ ಪರಿಣಾಮ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಪದೇ ಪದೇ ಅಡಚಣೆಗೆ ಒಳಗಾಗಿ, ಅಂತಿಮವಾಗಿ ಮಂಗಳವಾರದವರೆಗೆ ಮುಂದೂಡಲಾಯಿತು. ಪ್ರತಿಪಕ್ಷ ಸದಸ್ಯರು ಪರೀಕ್ಷಾ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯ ಲೋಪಗಳು ಹಾಗೂ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದನದ ಮಧ್ಯಭಾಗದಲ್ಲಿ ಪ್ರತಿಭಟನೆ ನಡೆಸಿದರು….

Read More

ಅಮೆರಿಕದೊಂದಿಗೆ ಪೂರ್ಣಪ್ರಮಾಣದ ಯುದ್ಧ; ಪರಿಣಾಮಗಳನ್ನು ಎದುರಿಸಲು ಸಿದ್ಧ: ಇರಾನ್ ಅಧ್ಯಕ್ಷ

ಟೆಹರಾನ್ : ಅಮೆರಿಕದೊಂದಿಗೆ ಇರಾನ್ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿಕೊಂಡಿದ್ದು, ಅದರ ಪರಿಣಾಮಗಳನ್ನು ದೇಶ ಎದುರಿಸಲು ಸಿದ್ಧವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝಶ್ಚಿಯಾನ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, “ನಾವು ವಾಸ್ತವಿಕವಾಗಿರಬೇಕು. ಈ ಪ್ರತಿರೋಧದ ಸಹಜ ಪರಿಣಾಮಗಳನ್ನು ಸ್ವೀಕರಿಸಲೇಬೇಕು. ಪ್ರಸ್ತುತ ಸಂಘರ್ಷವು ಕೇವಲ ಕ್ಷಿಪಣಿ ದಾಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ತನ್ನ ರಾಷ್ಟ್ರೀಯ ಹಕ್ಕುಗಳು ಹಾಗೂ ಹಿತಾಸಕ್ತಿಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು. “ಕೇವಲ ಮಿಲಿಟರಿ ಕ್ರಮಗಳ ಮೂಲಕ ಇರಾನ್ ಜನರನ್ನು ಶರಣಾಗುವಂತೆ…

Read More

ಮಂಗಳೂರು ವಿವಿ ಪದವಿ ಫಲಿತಾಂಶ ಪ್ರಕಟ; 17,347 ವಿದ್ಯಾರ್ಥಿಗಳ ಪೈಕಿ 13,206 ಮಂದಿಯ ಫಲಿತಾಂಶ ಪ್ರಕಟ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್–ಜುಲೈ 2026ರಲ್ಲಿ ನಡೆಸಿದ ವಿವಿಧ ಪದವಿ ಕಾರ್ಯಕ್ರಮಗಳ ಆರನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. ಎಂಟನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪೂರ್ಣಗೊಂಡ ಹಿನ್ನೆಲೆ, ಸೋಮವಾರ ಫಲಿತಾಂಶವನ್ನು ಪ್ರಕಟಿಸಿದೆ.ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಕುಲಸಚಿವ ಸಂತೋಷ್ ಜಗಲಸಾರ ಅವರ ಉಪಸ್ಥಿತಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಬಿ.ಎಸ್ಸಿ, ಬಿ.ಕಾಂ., ಬಿ.ಎಸ್.ಡಬ್ಲ್ಯು., ಬಿ.ಸಿ.ಎ., ಬಿ.ಎಸ್‌.ಪಿ. (ಎಫ್‌ಎನ್‌ಡಿ), ಎಫ್‌ಎನ್‌ಡಿ (ಆನಿಮೇಶನ್ ಮತ್ತು ವಿಜುವಲ್ ಎಫೆಕ್ಟ್ಸ್), ಬಿ.ಎಸ್ಸಿ (ಫುಡ್ ಟೆಕ್ನಾಲಜಿ), ಬಿ.ಎಸ್ಸಿ (ಹೋಂ ಸೈನ್ಸ್), ಬಿ.ಎ. (ಎಚ್‌.ಆರ್‌.ಡಿ.), ಬಿ.ಎಸ್ಸಿ…

Read More

ಕಣ್ಣೂರು ದ್ಯಂಬು ಪ್ರದೇಶದಲ್ಲಿ ತಡೆಗೋಡೆ ಕುಸಿತ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಬಶೀರ್

ಮಂಗಳೂರು: ನಗರದ ಕಣ್ಣೂರು 52ನೇ ವಾರ್ಡಿನ ದ್ಯಂಬು ಪ್ರದೇಶದಲ್ಲಿ ತಡೆಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿರುವ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಬಶೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಮಾಹಿತಿ ಪಡೆದು ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಸಂಬಂಧಿತ ಇಂಜಿನಿಯರ್ ಹಾಗೂ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿಯಾಗಿರುವ ಕಲ್ಲುಗಳು ಹಾಗೂ ಮಣ್ಣನ್ನು ತೆರವುಗೊಳಿಸಿ…

Read More

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಠಾಣೆಗಳ ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗುರುತಿಸಿ, ದಿನಾಂಕ 20-07-2026 ರಂದು ಮಾನ್ಯ ಪೊಲೀಸ್ ಆಯುಕ್ತರು 29 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ 118 ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಕಳೆದ ಆರು ತಿಂಗಳ ಅವಧಿಯಲ್ಲಿ 24 ಎಲ್.ಪಿ.ಸಿ….

Read More

ಎಸ್‌ಐಆರ್ ಮಹಾ ಅಭಿಯಾನ: ಕಂಕನಾಡಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಪರಿಶೀಲನೆ

ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ಕುರಿತು ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲ ವ್ಯಾಪ್ತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ವಿವಿಧೆಡೆ ಭೇಟಿ ನೀಡಿದರು. ದಕ್ಷಿಣ ಮಹಾಶಕ್ತಿ ಕೇಂದ್ರದ ವಾರ್ಡ್ ಸಂಖ್ಯೆ 48ರ ಕಂಕನಾಡಿ ವೆಲೆನ್ಸಿಯಾದ ಬೂತ್ ಸಂಖ್ಯೆ 187ರಲ್ಲಿ ಕಾರ್ಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಸ್‌ಐಆರ್ ಅಭಿಯಾನದ ಮಹತ್ವ ಹಾಗೂ ಉದ್ದೇಶದ ಕುರಿತು ಮಾಹಿತಿ ನೀಡಿದರು. ಎಲ್ಲಾ ಮತದಾರರು ಭರ್ತಿ ಮಾಡಿದ ಎನ್ಯುಮರೇಷನ್ ಫಾರಂಗಳನ್ನು ಅಂತಿಮ ದಿನಾಂಕದ ವರೆಗೆ ಕಾಯದೇ…

Read More
error: Content is protected !!