ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವ್ಯಾಪಕ , ರಾಜಕೀಯ ನಾಯಕರು ಶಾಮೀಲಾಗಿರುವ ಸಾಧ್ಯತೆ .ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ ಶಾಸಕ ವೈ ಭರತ್ ಶೆಟ್ಟಿ :
ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳಿವೆ.ಆದರೆ ಈ ಭಾಗದಲ್ಲಿನ ಡ್ರಗ್ಸ್ ಹಾವಳಿಗೆ ಅನೇಕ ಯುವಕರು ಬಲಿಯಾಗುತ್ತಿದ್ದಾರೆ ಇದನ್ನು ಸರಕಾರ ತಡೆಯುವಲ್ಲಿ ವಿಫಲವಾಗಿದೆ. ಈ ಭಾಗಗಳಿಗೆ ತೆಲಂಗಾಣ,ಮಹಾರಾಷ್ಟ್ರ,ಕೇರಳ ಭಾಗದಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ.ಕರ್ನಾಟಕ ಸರಕಾರದಿಂದ ಡ್ರಗ್ಸ್ ಜಾಲವನ್ನು ಸರಿಯಾಗಿ ಬೇಧಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಜೊತೆಗೆ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಆತಂಕಕಾರಿ ವಿಷವಾಗಿದೆ ಎಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ವಲಯದ ಶಾಸಕರಾದ ವೈ ಭರತ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು . ಸುದ್ದಿಗೋಷ್ಠಿಯಲ್ಲಿ…