ಸಂತಡ್ಕ ಮಾಡದಲ್ಲಿ ಜೂನ್ 7ರಂದು ರುದ್ರಯಾಗ ಮತ್ತು ಗಿರಿಜಾ ಕಲ್ಯಾಣೋತ್ಸವ

ಶ್ರೀ ಅರಸು ಸಕಲ ದೈವ ಕ್ಷೇತ್ರ ಸಂತಡ್ಕ ಮಾಡದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಭಕ್ತರ ಅಭೀಷ್ಟಾರ್ಥ ಸಿದ್ಧಿಗಾಗಿ ಹಾಗು ಭೋಜನ ಶಾಲೆಯ ಉದ್ಘಾಟನೆಯ ಅಂಗವಾಗಿ ಜೂನ್ 7ರಂದು ಅತೀ ಮಹತ್ವದ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಡಾ. ಶ್ರೀಧರ ಭಟ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಿವಿಧ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕ್ಷೇತ್ರ ತಂತ್ರಿವರ್ಯರಾದ…

Read More

ತಮಿಳುನಾಡಿನ ಮುಖ್ಯಮಂತ್ರಿ ಆಗಿ ವಿಜಯ್ ಪ್ರಮಾಣವಚನ; ಡಿಎಂಕೆ-ಎಐಎಡಿಎಂಕೆ ರಾಜಕೀಯಕ್ಕೆ ಹೊಸ ಸವಾಲು

ಸಿ. ಜೋಸೆಫ್ ವಿಜಯ್ ಅವರು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್‌ಲೆಕರ್ ಅವರು ಹುದ್ದೆ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು. “ತಳಪತಿ” ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಸಂಭ್ರಮಿಸಿದರು. ಕೆಲ ಅಭಿಮಾನಿಗಳು ಭಾವುಕರಾಗಿ ಕಣ್ಣೀರಿಟ್ಟ ದೃಶ್ಯಗಳೂ ಕಂಡುಬಂದವು. ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಪ್ಪು…

Read More

ಕೇರಳದಲ್ಲೇ ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿಯಾದ ಕಾಸರಗೋಡಿನ ಬಾರಿಕ್ಕಾಡು ಮಹಿಷಮರ್ಧಿನಿ ಕ್ಷೇತ್ರದಲ್ಲಿ ವಾರ್ಷಿಕ ಪಂಚಮೂರ್ತಿ ಭೂತಬಲಿ

ಕಾಸರಗೋಡು: ದೇವರ ಸ್ವಂತ ನಾಡು ಕೇರಳದಲ್ಲಿ ಧಾರ್ಮಿಕ ಮೌಲ್ಯಗಳ ಆಚಾರ ವಿಚಾರಗಳಿಗೆ ಅದರದ್ದೇ ಆದ ಮಹತ್ವವಿದೆ. ತಲತಲಾಂತರದಿಂದ ಬಳುವಳಿಯಾಗಿ ಬಂದ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಹೋಗುತ್ತಾ ಇದ್ದಾರೆ. ಕೇರಳ ಎಂದಾಕ್ಷಣ ನೆನಪಿಗೆ ಬರುವುದು ಹಸಿರ ಐಸಿರಿಯ ನಡುವೆ ದೇವಾಲಯದ ಭವ್ಯತೆ – ಅದರ ಘನತೆಯನ್ನು ಸಾರುವ ಕೆಲವು ಅಪರೂಪದ ಆಚರಣೆ . ಕೇರಳಂ ರಾಜ್ಯದ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಈ ಸನ್ನಿಧಿಯಲ್ಲಿ ಮಾತ್ರವೇ ನೋಡಬಹುದಾಗಿದೆ . ತಾಳ ಮೇಳಗಳ…

Read More

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ. ಸುಧಾಕರ್ ನಿಧನ

ಬೆಂಗಳೂರು : ಕರ್ನಾಟಕ ಸರ್ಕಾರದ ಯೋಜನೆ ಮತ್ತು ಅಂಕಿಅಂಶ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಿ. ಸುಧಾಕರ್ ಇಂದು ಮುಂಜಾನೆ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು ಮತ್ತು ಕಳೆದ ಎರಡು ತಿಂಗಳಿನಿಂದ ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಅವರ ಸಾವು ರಾಜ್ಯದ ರಾಜಕೀಯ ವಲಯದಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿದೆ. ಬೆಂಗಳೂರಿನ ಕೃಷ್ಣ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಸಚಿವ ಸುಧಾಕರ್ ಭಾನುವಾರ ಬೆಳಗಿನ ಜಾವ 3:15 ಕ್ಕೆ…

Read More

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಎಸ್.ಎನ್. ಕಿಶೋರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ವೃಷಭ ಹಾಗೂ ಕಾನ್ಸ್ಟೇಬಲ್ ಚರಣ್ ರಾಜ್ ಅವರು ಮೈಸೂರು ಜಿಲ್ಲೆಯ ಸರಗೂರು ಸಮೀಪದ ಹೆಚ್.ಡಿ.ಕೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಉಪ್ಪಿನಂಗಡಿಯಲ್ಲಿ ಭೀಕರ ದುರಂತ; ರೋಡ್ ರೋಲರ್ ಹರಿದು ಕಾರ್ಮಿಕ ಸಾವು

ಉಪ್ಪಿನಂಗಡಿ ಸಮೀಪದ ಗಾಂಧಿಪಾರ್ಕ್ ಬಳಿ ರಸ್ತೆ ಕಾಮಗಾರಿಯ ವೇಳೆ ರೋಡ್ ರೋಲರ್‌ನಡಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಸರ್ವೀಸ್ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ, ಮೃತ ವ್ಯಕ್ತಿ ರಸ್ತೆ ಬದಿಯಲ್ಲಿ ಮಲಗಿದ್ದ ವೇಳೆ ರೋಡ್ ರೋಲರ್ ಆತನ ಮೇಲಿಂದ ಚಲಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ವ್ಯಕ್ತಿಯ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಉತ್ತರ ಭಾರತದ ಮೂಲದ…

Read More

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು: ಮೇ 10ರಂದು ‘ಸಂಗೀತ ಸುಧೆ 2026’ ಕಾರ್ಯಕ್ರಮ

ಮಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ “ಡಾ. ರಾಜ್ ಸೇವಿನೆನಪು ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಸಂಗೀತ ಸುಧೆ 2026” ಕಾರ್ಯಕ್ರಮವು ಮೇ 10ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಡಾ ರಾಜ್ ಕುಮಾರ್ ಅಭಿಮಾನಿಗಳ ವೇದಿಕೆಯ ಅಧ್ಯಕ್ಷರು ನಾಗೇಂದ್ರ ಎನ್ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. “ಆಮಂತ್ರಣ ಪತ್ರಿಕೆ” ಮೂಲಕ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದ್ದು, ಕನ್ನಡಾಭಿಮಾನಿಗಳಿಗಾಗಿ ವಿಶೇಷ ಸಂಗೀತ ರಸಮಂಜಲಿ ಆಯೋಜಿಸಲಾಗಿದೆ….

Read More

​ವಾತ್ಸಲ್ಯದ ವರನಿಧಿ ಅಮ್ಮ ಚೆನ್ನಮ್ಮ: ಮಾಸದ ನೆನಪಿನ ಅಕ್ಷರ ನಮನ

(ಜಗತ್ತಿನ ಸಮಸ್ತ ಮಾತೆಯರಿಗೂ ತಾಯಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು….) ​ಲೇಖನ: ದಯಾನಂದ ರೈ ಕಳ್ವಾಜೆ ಜೀವಕ್ಕೆ ಜೀವ ನೀಡಿ, ರಕ್ತವನ್ನು ಹಾಲನ್ನಾಗಿಸಿ ಉಣಿಸಿ, ತಾನು ಕರಗುತ್ತಾ ಮಗುವಿನ ಬದುಕಿಗೆ ಬೆಳಕಾಗುವ ದಿವ್ಯ ಚೇತನವೇ ಅಮ್ಮ. ನನ್ನ ಅಮ್ಮ ಚೆನ್ನಮ್ಮ ನಮ್ಮನ್ನು ಭೌತಿಕವಾಗಿ ಅಗಲಿ ಇಂದಿಗೆ ಸರಿಯಾಗಿ ಎರಡು ದಶಕಗಳು ಕಳೆದಿವೆ. ಕಾಲ ಎಷ್ಟು ವೇಗವಾಗಿ ಓಡಿದರೂ ಆಕೆಯ ನೆನಪುಗಳ ಆಳ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಮನೆಯ ಹಜಾರದಲ್ಲಿರುವ ಆಕೆಯ ಭಾವಚಿತ್ರ ಇಂದಿಗೂ ನನ್ನೊಂದಿಗೆ ಮಾತನಾಡುತ್ತದೆ. ಈ ಬರಹ…

Read More

2021ರಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಂಗಳೂರು ಪೊಲೀಸರ ಬಲೆಗೆ

ಮಂಗಳೂರು: 2021 ರಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಜು @ ವಿಜಯ್, ಬಂಧಿತ ಆರೋಪಿ. ಬಂಧಿತ ಆರೋಪಿಯ ವಿರುದ್ಧ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ನ್ಯಾಯಾಲಯದಿಂದ NBW ವಾರಂಟ್ ಜಾರಿಯಾಗಿತ್ತು. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮತೀಯ ಗಲಭೆ ಪ್ರಕರಣಗಳು, ದರೋಡೆಗೆ ಸಂಚು ಪ್ರಕರಣಗಳು ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ NBW (Non-Bailable Warrant) ಗಳನ್ನು ತಪ್ಪಿಸಿಕೊಂಡು 2021…

Read More

ಉಪ್ಪಳ ಸೀ ಪರ್ಲ್ಸ್ ಫ್ಲ್ಯಾಟ್ ಸಮುಚ್ಚಯಕ್ಕೆ ಜಪ್ತಿ ನೋಟಿಸ್; ನಿವಾಸಿಗಳಲ್ಲಿ ಆತಂಕ

ಸೀ ಪ್ಯಾಲಸ್ ಫ್ಲ್ಯಾಟ್ ಸಮುಚ್ಚಯಕ್ಕೆ ಸಂಬಂಧಿಸಿದ ಸಾಲ ವಿವಾದ ತೀವ್ರಗೊಂಡಿದ್ದು, ಕೆಎಫ್‌ಸಿ (KFC) ಜಪ್ತಿ ನೋಟಿಸ್ ಅಂಟಿಸಿರುವುದು ಫ್ಲ್ಯಾಟ್ ಮಾಲೀಕರು ಮತ್ತು ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಮಂಗಲ್ಪಾಡಿ ಪಂಚಾಯತ್ ವತಿಯಿಂದ 104 ಫ್ಲ್ಯಾಟ್‌ಗಳಲ್ಲಿ 99 ಫ್ಲ್ಯಾಟ್‌ಗಳಿಗೆ ಈಗಾಗಲೇ ಸಂಖ್ಯೆ ನೀಡಲಾಗಿದ್ದು, ಅಗ್ನಿಶಾಮಕ ದಳದ ಎನ್‌ಒಸಿ ಸೇರಿದಂತೆ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ನಿರ್ವಹಣಾ ಮಂಡಳಿ ತಿಳಿಸಿದೆ. ಫ್ಲ್ಯಾಟ್ ನಿರ್ಮಾಣಕ್ಕಾಗಿ ಕೆಎಫ್‌ಸಿಯಿಂದ ₹8.35 ಕೋಟಿ ಸಾಲ ಪಡೆಯಲಾಗಿತ್ತು. ಇದುವರೆಗೆ ₹10.41 ಕೋಟಿ ಮರುಪಾವತಿ ಮಾಡಲಾಗಿದೆ. ಆದರೂ ಬ್ಯಾಂಕ್ ಇದೀಗ ₹17…

Read More
error: Content is protected !!