1930 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಾಸಿಕ ಸಭೆ ಸಮಾಪ್ತಿ

ಕಾಸರಗೋಡು :1930 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಾಸಿಕ ಸಭೆಯು ಅಣoಗೂರು ಶ್ರೀ ಶಾರದಾಂಬ ಕಲ್ಯಾಣ ಮಂಟಪದಲ್ಲಿ ನಡೆಯಿತ್ತು . ಕಾಸರಗೋಡು ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕುತ್ಯಾಳ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಅಧ್ಯಕ್ಷ ಸ್ಥಾನ ವಹಿಸಿದರು. ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ವಿಭಾಗ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ , ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ , ಶ್ರೀ ಕ್ಷೇತ್ರ…

Read More

ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡವು ತೀರಾ ಶೋಚನೀಯಾವಸ್ಥೆಯಲ್ಲಿ

ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡವು ತೀರಾ ಶೋಚನೀಯಾವಸ್ಥೆಯಲ್ಲಿ ಮುಂದುವರಿಯುತ್ತಿದೆ. ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿರುವ ಕಟ್ಟಡ ಇದೀಗ ಆರಂಭಗೊಳ್ಳಲು ಮೇಲಾಧಿಕಾರಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಬಹಳ ಹಳೆಯದಾಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಇದೀಗ ಕಾರ್ಯಾಚರಿಸುತ್ತಿದೆ. ಮಳೆ ಬಿರುಸುಗೊಳ್ಳುತಿದ್ದಂತೆ ಸೋರಲಿಕ್ಕೂ ಶುರುವಾಗಿದೆ. ನೀರಿನ ಸೋರಿಕೆಯನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಯಾಗಿ ಶೀಟನ್ನು ಹಾಕಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿಯ್ಲಲೂ ಇದೆ ಶೋಚನೀಯಾವಸ್ಥೆ ಇದೆ….

Read More

ಕುಂಜತ್ತೂರು ವಿದ್ಯಾನಿಕೇತನ ಶಾಲೆಯಲ್ಲಿ ಗುರು ಪೂಜೆ

ಮಂಜೇಶ್ವರ : ಕುಂಜತ್ತೂರು ವಿದ್ಯಾನಿಕೇತನ ಶಾಲೆಯಲ್ಲಿ ಗುರು ಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಾಲ ಗೋಕುಲದ ಮಕ್ಕಳಿಂದ ಗುರು ಪೂರ್ಣಿಮೆ ಪ್ರಯುಕ್ತ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ನಿರಂಜನ್ ತುಮಿನಾಡು ಭೌದಿಕ್ ನೀಡಿದರು. ಮುಖ್ಯ ಅತಿಥಿಗಳಾಗಿ ಸರಸ್ವತಿ ಟೀಚರ್, ವಿಶ್ವನಾಥ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಭಾಗವಹಿಸಿದರು. ಸ್ವಾತಿ ನಿತಿನ್ ರೈ ಅಧ್ಯಕ್ಷತೆ ವಹಿಸಿದ್ದರು.

Read More

ಮಂಗಳೂರಿನ ಕದ್ರಿ ಪಾರ್ಕ್ ಬಳಿ ಫ್ರೋಲಿಕ್ ಐಸ್ ಕ್ರೀಮ್ ಪಾರ್ಲರ್ ಶುಭಾರಂಭ

ಮಂಗಳೂರಿನ ಕದ್ರಿ ಪಾರ್ಕ್ ಬಳಿ ಫ್ರೋಲಿಕ್ ಐಸ್ ಕ್ರೀಮ್ ಪಾರ್ಲರ್ ಇಂದು. ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಮಾಲಕರಾದ ಶ್ರೀ ರಾಗ್ ಅವರ ತಂದೆ ರಮೇಶನ್ ಅದೇ ರೀತಿ ತಾಯಿ ಶೈಲಜಾ ಅವರು ನೆರೆವೇರಿಸಿದರು. ಶ್ರೀ ರಾಗ್ ಹಾಗೂ ಜಯಲಕ್ಸ್ಮಿ ದಂಪತಿ ಗಳು ಮುಲಾತಹ ಕೇರಳದ ಕಾಸರಗೋಡಿ ನವರಾಗಿದ್ದು ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೇ ಮುಗಿಸಿದ್ದು ತಮ್ಮ ಆಸೆಯಂತೆ ಉದ್ಯೋಗ ಕೂಡ ಮಂಗಳೂರಿನಲ್ಲಿ ಮಾಡಬೇಕೆನ್ನುವ ಮಹದಾಸೆಯೊಂದಿಗೆ ತಮ್ಮದೇ ಆದ ತಮ್ಮ ಕನಸಿನ ಐಸ್ ಕ್ರೀಮ್ ಪಾರ್ಲರನ್ನು…

Read More

ಪಕ್ಷದ ಕಾರ್ಯಾಲಯ ಕಾರ್ಯಕರ್ತರ ದೇವಾಲಯ-ರವೀಶ ತಂತ್ರಿ ಕುಂಟಾರು

ಸುಂಕದಕಟ್ಟೆ : ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಗುತ್ತೆ, ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು, ಸಂಘಟನೆ ನೆ ಕಾರ್ಯಕರ್ತರು ಗಳಿಗೆ ಪಕ್ಷದ ಕಾರ್ಯಾಲಯ ದೇವಾಲಯದಂತೆ ಪವಿತ್ರ ವಾದದ್ದು ಎಂದು ವರ್ಕಾಡಿ ಪಂಚಾಯತ್ ಬಿಜೆಪಿ ಪಕ್ಷದ ನೂತನ ಕಾರ್ಯಾಲಯ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶ್ರೀ ರವೀಶ್ ತಂತ್ರಿ ಕುಂಟಾರು ಹೇಳಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಧ್ವಜಾರೋಹಣ ಗೈದರು. ಭಾಸ್ಕರ್ ಪೊಯ್ಯೇ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ,…

Read More

ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

ಕುಬಣೂರು ಜುಲೈ 12 : ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮೀನಾರು ಪಕ್ಕೀರ ಶೆಟ್ಟಿ ಸಭಾಂಗಣದಲ್ಲಿ ಜರಗಿತು. ತಾರಾಮಣಿ ಟೀಚರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವಾರ್ಡ್ ಸದಸ್ಯರಾದ ವಿಜಯ ಕುಮಾರ್ ರೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಸುರೇಶ್ ಕುಮಾರ್ ಮಂಗಲ್ಪಾಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು. ಯು ಎಸ್‌ ಎಸ್ ಪ್ರತಿಭಾನ್ವಿತರಾದ ತನ್ವಿತ್ ಪಿ ಶೆಟ್ಟಿ, ವಿವೇಕ್, ಚಿನ್ಮಯಿ ಹಾಗೂ…

Read More

ಕಾಸರಗೋಡು – ಮಂಜೇಶ್ವರ ತಾಲೂಕಿನ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ .ಸ್ವಯಂ ಸೇವಕರ ತರಬೇತಿ ಕಾರ್ಯಗಾರ

ತುರ್ತು ಸಂದರ್ಭದಲ್ಲಿದ್ದ ಕ್ಷಣದಲ್ಲಿ ಸ್ಪಂದಿಸುವ ಸಂತ್ರಸ್ಥರ ಬದುಕಿಗೆ ಭರವಸೆಯಾಗಿರುವ ಸ್ಥಳಿಯ ಯೋಧರಂತೆ ಕಷ್ಟ ಕಾರ್ಪಣ್ಯಗಳನ್ನು ಸ್ಪಂದಿಸಿ ಸಮಾಜಪರ ಕೆಲಸಗಳನ್ನು ನಡೆಸಿ ಜನಪ್ರಿಯಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ” ಶೌರ್ಯ ” ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್(ರಿ) ಕಾಸರಗೋಡು-ಮಂಜೇಶ್ವರ ತಾಲೂಕು , ಶೌರ್ಯ ವಿಕೋಪ ಪರಿಹಾರ ಸಮಿತಿ ಕಾಸರಗೋಡು , ಮಂಜೇಶ್ವರ ತಾಲೂಕು ಇದರ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಶ್ರೀ…

Read More

ಹಾಡಹಗಲೇ ಯುವಕನ ಅಪಹರಣ, 18 ಲಕ್ಷ ರೂ.ಗೂ ಹೆಚ್ಚು ಮೊತ್ತದ ಹಣ ದರೋಡೆಆರೋಪಿ ಬಂಧನ

ಮಂಜೇಶ್ವರಂ: ಕುಂಬಳೆ ನಗರದಲ್ಲಿ ಹಾಡಹಗಲೇ ಯುವಕನನ್ನು ಅಪಹರಿಸಿ 18 ಲಕ್ಷ ರೂ.ಗೂ ಹೆಚ್ಚು ಮೊತ್ತದ ಹಣ ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಧರ್ಮದಡ್ಕ ಬಳಿಯ ಚಲ್ಲಂಗೈ ನಿವಾಸಿ ಯೂಸುಫ್ ಇರ್ಷಾದ್ (24) ಅವರನ್ನು ಬಂಧಿತ ಆರೋಪಿ. ಇಚ್ಲಂಗೋಡಿನಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯೂಸುಫ್ ಇರ್ಷಾದ್ ರಾಜ್ಯದ ವಿವಿಧ ಭಾಗಗಳಿಂದ ಇದೇ ರೀತಿ ಸುಮಾರು 80 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಮೇ 6 ರಂದು ಮಧ್ಯಾಹ್ನ ಕುಂಬಳೆಯಲ್ಲಿ…

Read More

ಕೊಂಡೆವೂರು ಶ್ರೀಗಳ 22ನೇ ಚಾತುರ್ಮಾಸ್ಯವ್ರತ ಸಂಕಲ್ಪ

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳು ತಮ್ಮ 22 ನೇ ಚಾತುರ್ಮಾಸ್ಯವ್ರತ ಸಂಕಲ್ಪವನ್ನು ಗುರುಪೂರ್ಣಿಮೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಬಳಿಕ ಬೆಳಿಗ್ಗೆ 9.00ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ ವಿಶೇಷ ಸೀಯಾಳಭಿಷೇಕ, 10:30 ರಿಂದ ವ್ಯಾಸವಪೂಜೆ 12:30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಯಿತು. ಸಂಜೆ 5 ಗಂಟೆ ಗೆ 108 ದಿನಗಳ ಸಂಧ್ಯಾ ಭಜನೆಗೆ ಪರಮಪೂಜ್ಯ ಶ್ರೀಗಳು ಚಾಲನೆ ನೀಡಿದರು.ಸಂಜೆ 6:30ಕ್ಕೆ ಮಹಾಪೂಜೆಯನಂತರ ಶ್ರೀ ಗುರುಪಾದುಕಾಪೂಜೆ ನಡೆದು ಬಳಿಕ…

Read More

ವರ್ಕಾಡಿ ಕಜೆ ಪದವು ಅಂಗನವಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಪದವು ಎಂಬಲ್ಲಿ ಚಿಣ್ಣರ ಬೆಳವಣಿಗೆಗೆ ಆಧುನಿಕ ಸೌಕರ್ಯಗಳೊಂದಿಗೆ ಕೂಡಿದ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ಮಂಜೇಶ್ವರ ಶಾಸಕರು ಶಂಕು ಸ್ಥಾಪನೆ ನಡೆಸಿದರು.ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು. ಗ್ರಾಮೀಣ ಪ್ರದೇಶವಾಗಿರುವ ಇಲ್ಲಿಯ ಚಿಣ್ಣರಿಗೆ ಶೈಕ್ಷಣಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸುವ ಜೊತೆಯಾಗಿ ಸುರಕ್ಷಿತ ಹಾಗೂ ಆಧುನಿಕ ವಾತಾವರಣದಲ್ಲಿ ಚಿಣ್ಣರ ಬೆಳವಣಿಗೆಗೆ ಸಹಕಾರಿಯಾಗಲು ಹಾಗೂ ಸ್ಮಾರ್ಟ್…

Read More
error: Content is protected !!