ಯಕ್ಷಕಿರೀಟಿ ಶ್ರಿಯುತ ಸುಬ್ರಾಯ ಹೊಳ್ಳರಿಗೆ ದುಬಾಯಿ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2025

ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ (YAKU) ವರ್ಷಂಪ್ರತಿ, ದುಬಾಯಿ ಅಥವ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್…

Read More

ಬಿಲ್ಡಿಂಗ್ ಕಂಟ್ರಾಕ್ಟರ್ ಕಟ್ಟೆಬಜಾರ್ ನಿವಾಸಿ ವೆಂಕಟೇಶ್ ಹೃದಯಾಘಾತಕ್ಕೆ ಬಲಿ

ಮಂಜೇಶ್ವರ; ಹೊಸಂಗಡಿ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಖ್ಯಾತಿ ಪಡೆದಿರುವ ವೆಂಕಟೇಶ್ (58) ಇಂದು ಬೆಳಗ್ಗಿನ ಜಾವಾ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು ಇಂದು ಬೆಳಗ್ಗೆ ಮಂಚದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಕಟ್ಟೆಬಜಾರ್ ನಿವಾಸಿ ದಿ. ಸೀತಾರಾಮ ಮತ್ತು ದಿ. ಲೀಲಾವತಿ ಪುತ್ರನಾದ ಇವರು ಪತ್ನಿ…

Read More

ತುಳುನಾಡಿನ ಸ್ಪೆಷಲ್ ಹಲಸಿನ ಹಣ್ಣಿನ ಅಪ್ಪ

ಬೇಕಾಗುವ ಸಾಮಗ್ರಿಗಳು ಹಲಸಿನ ಹಣ್ಣಿನ ಅಪ್ಪ ತಯಾರಿಸಲು ಸೂಚನೆಗಳು : ಮೊದಲಿಗೆ ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. ನೀವು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಬಳಸಿ ನೇರವಾಗಿ ಸೇರಿಸಬಹುದು. ಆದರೆ ನೆನೆಸಿದ ಅಕ್ಕಿ ಉತ್ತಮ ವಿನ್ಯಾಸ ಮತ್ತು ರುಚಿಯನ್ನು ನೀಡುತ್ತದೆ . ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು ಬೇಡದ ಭಾಗಗಳನ್ನು ತ್ಯಜಿಸಿ. ಸುಲಭವಾಗಿ ರುಬ್ಬಲು ನೀವು ಹಲಸಿನ ಹಣ್ಣನ್ನು ಕತ್ತರಿಸಬಹುದು.ಅಕ್ಕಿಯನ್ನು ನೆನೆಸಿದ ನಂತರ ನೀರನ್ನು ಸಂಪೂರ್ಣವಾಗಿ ಬಸಿದುಕೊಳ್ಳಿ. ನಂತರ ನೆನೆಸಿದ ಅಕ್ಕಿ, ಹಲಸು,…

Read More

ಶ್ರೀ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಬಡಮಕ್ಕಳಿಗೆ ಕಲಿಕೋಪಕರಣ ವಿತರಣೆ

ಮಂಜೇಶ್ವರ : ಶ್ರೀ ರಾಜ ಬೆಳ್ಳಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ ಇದರ ವತಿಯಿಂದ ಸಂಸ್ಥೆಯ 7 ನೇ ವರ್ಷದ ವಾರ್ಷಿಕೋತ್ಸವ ದ ಅಂಗವಾಗಿ ಬಡ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಸಾಮಾಗ್ರಿಗಳ ಕಿಟ್ ಳನ್ನು ಉದ್ಯಾವರ ಮಾಡದ ಸತ್ಯ ದೈವಗಳ ಭಂಡಾರ ಮನೆಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಅನ್ಯ ರಾಜ್ಯದ ವಲಸೆ ಕಾರ್ಮಿಕರ ಬಡ ಮಕ್ಕಳೇ ತುಂಬಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿಯ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ರಾಜ…

Read More

ಬಾಯಾರು ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಬೃಹತ್ ಪ್ರತಿಭಟನೆ

ಮಂಜೇಶ್ವರ : ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಸಿತು.ನೂತನ ಕಟ್ಟಡ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಸ್ಪತ್ರೆ ಕೂಡಲೇ ಕಾರ್ಯಾಚರಿಸಬೇಕು,ಅಗತ್ಯ ವೈದ್ಯರ ಸೇವೆ ಲಭ್ಯವಾಗಬೇಕು,ಅಗತ್ಯದ ಔಷಧಗಳ ಲಭ್ಯತೆ ಖಾತರಿಪಡಿಸಬೇಕು ಮತ್ತು ಸಂಧ್ಯಾ ಸಮಯದಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯಾಚರಿಸಬೇಕು.ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಾಧಿಕಾರಿ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ ಕುಟುಂಬ ಆರೋಗ್ಯ ಕೇಂದ್ರ ಪರಿಸರದಲ್ಲಿ ಸಮಾಪ್ತಿಗೊಂಡಿತು. ನಂತರ ನಡೆದ ಪ್ರತಿಭಟನಾ…

Read More

ಪ್ರಾಣಿಪ್ರಿಯೆ ಶಶಿಕಲಾ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಮಂಗಳೂರು : ಮಂಗಳೂರಿನ ಹೊರವಲಯದ ಕುಂಜತ್ತಬೈಲ್ ನಲ್ಲಿ ಒಂಟಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಸರವಾಸಿಗಳಿಗೆ ಅತೀವ ವೇದನೆ ತಂದಿದೆ ಮತ್ತು ನಮಗೆ ಇದು ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. 60 ರ ಹರೆಯದ ಶಶಿಕಲಾ ಶೆಟ್ಟಿ ಒಂಟಿ ಮಹಿಳೆ , ಪರಿಸರ ಪ್ರೇಮಿ ಮತ್ತು ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಅದರಲ್ಲೂ ಅಸಂಖ್ಯ ಸಂಖ್ಯೆಯ ಶ್ವಾನಗಳನ್ನು ಇವರು ಸಾಕುತ್ತಿದ್ದರು.ಎಷ್ಟೊಂದು ಸಂಖ್ಯೆಯ ಶ್ವಾನಗಳು ಇವರ ಮನೆಯ ಆವರಣದಲ್ಲಿ ಇರುವುದರಿಂದ ಯಾರೊಬ್ಬರೂ ಸುಲಭವಾಗಿ ಮನೆಯೊಳಗೆ…

Read More

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ BKMU ವತಿಯಿಂದ ಬ್ರಹತ್ ಮಾರ್ಚ್ ಹಾಗೂ ಧರಣಿ.

ಕೃಷಿ ಕಾರ್ಮಿಕರಿಗಾಗಿ ಸಮಗ್ರ ರಾಷ್ಟ್ರೀಯ ಕಾನೂನು ಜಾರಿಗೆ ತರಬೇಕು,ಭೂರಹಿತರಿಗೆ ಭೂಮಿ ಮಂಜೂರು ಮಾಡಬೇಕು,ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ರೂ. 6,000ಕ್ಕೆ ಹೆಚ್ಚಿಸಿ ಜಾತಿ ಗಣತಿ ಜಾರಿಗೊಳಿಸಿ ಖಾಸಗಿ ವಲಯದಲ್ಲಿ ಎಸ್.ಸಿ, ಎಸ್.ಟಿ, ಓ.ಬಿ.ಸಿ ಮೀಸಲಾತಿ ಜಾರಿಗೆ ತರಬೇಕು,ಉದ್ಯೋಗ ಖಾತರಿ ಯೋಜನೆಯನ್ನು ನಾಶ ಮಾಡುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ಕೊನೆ ಗೊಳಿಸಿ ಕೆಲಸದ ದಿನಗಳು ಮತ್ತು ವೇತನವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೃಷಿ ಕಾರ್ಮಿಕ ರ ಯೂನಿಯನ್ (BKMU) ವತಿಯಿಂದಕೇರಳದ 140 ವಿಧಾನ ಸಭಾ ವ್ಯಾಪ್ತಿಯ ಕೇಂದ್ರ ಸರಕಾರಿ…

Read More

ಮಂಜೇಶ್ವರ ಕೃಷಿಭವನ ಹಾಗೂ ಕಾಸರಗೋಡು ಸಿಪಿಸಿಆರ್‌ಐ (CPCRI) ಸಂಯುಕ್ತಾಶ್ರಯದಲ್ಲಿ ‘ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ್’ ಕಾರ್ಷಿಕ ಸೆಮಿನಾರ್

ಮಂಜೇಶ್ವರ ಕೃಷಿಭವನ ಹಾಗೂ ಕಾಸರಗೋಡು ಸಿಪಿಸಿಆರ್‌ಐ (CPCRI)ಯ ಸಂಯುಕ್ತಾಶ್ರಯದಲ್ಲಿ ‘ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ್’ ಎಂಬ ಹೆಸರಿನಲ್ಲಿ ಕಾರ್ಷಿಕ ಸೆಮಿನಾರ್ ನಡೆಯಿತು. ಈ ಕಾರ್ಯಕ್ರಮವು ಮಂಜೇಶ್ವರ ಬ್ಲಾಕ್ ಕಚೇರಿಯಲ್ಲಿ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೆನಾ ಮೊಂತೇರೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಕೃಷಿ ಸಹಾಯಕ ನಿರ್ದೇಶಕಿ ಶ್ರೀಮತಿ ಸುಜಿತಾ ಪಿ ಎಸ್ ಮತ್ತು ಕೃಷಿ ಅಧಿಕಾರಿಯಾದ ಶ್ರೀ ಶ್ರೀನಾಥ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಸಿಪಿಸಿಆರ್‌ಐನ ವಿಜ್ಞಾನಿಗಳು ಶ್ರೀಮತಿ…

Read More

ಪ್ರಥಮ ಹಂತದ ಚಿತ್ರೀಕರಣ ಪೂರ್ಣಗೊಂಡ “ಲೈಫ್ ಈಸ್ ಜಿಂಗಾಲಾಲ”

ಮಂಗಳೂರು : ಎಚ್‌ ಪಿಆರ್ ಫಿಲ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಲೈಫ್ ಈಸ್ ಜಿಂಗಾಲಾಲ ತುಳು ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಹರಿಪ್ರಸಾದ್ ರೈ ನಿರ್ಮಾಣದಲ್ಲಿ ತ್ರಿಶೂಲ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಜಿಂಗಾಲಾಲ ಸಿನಿಮಾಕ್ಕೆ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ಹರಿಪ್ರಸಾದ್ ರೈ ಮತ್ತು ತ್ರಿಶೂಲ್ ಶೆಟ್ಟಿ ಈ ಹಿಂದೆ ಪುಳಿಮುಂಚಿ ಎನ್ನುವ ಹಾಸ್ಯ ಸಿನಿಮಾ ನಿರ್ಮಿಸಿದ್ದರು. ಈಗ ಹೊಸ ಬಗೆಯ ಸಿನಿಮಾವನ್ನು ತುಳು ಸಿನಿಮಾರಂಗಕ್ಕೆ ನೀಡಲು ಸಿದ್ಧತೆ ನಡೆಸಿದ್ದಾರೆ. ಮಳೆಯ ಕಾರಣದಿಂದ ಜಿಂಗಾಲಾಲ ಸಿನಿಮಾಕ್ಕೆ ಮೊದಲ…

Read More

ಕೇರಳ – ಕರ್ನಾಟಕದಲ್ಲಿ ವರುಣನ ಆರ್ಭಟ

ಕಾಸರಗೋಡಿನಲ್ಲಿ 12, 14ರಂದು ರೆಡ್ ಅಲರ್ಟಿಗೆ ಸಮಾನ ಆರೆಂಜ್ ಅಲರ್ಟ್ ಘೋಷಣೆ, 14ರಂದು ಪ್ರಬಲ ಗಾಳಿಯ ಮುನ್ನೆಚ್ಚರಿಕೆ ಕಾಸರಗೋಡು: ಒಂದು ವಾರದ ದುರ್ಬಲ ಮುಂಗಾರಿನ ಬಳಿಕ ಜೂನ್ 11ರೊಂದಿಗೆ ಮಲಬಾರ್ ಸಹಿತ ಕೇರಳ ಮತ್ತು ಕರಾವಳಿ ಸಹಿತ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಕೇರಳದಲ್ಲಿ ಮುಂದಿನ ಏಳು ದಿನ ಭಾರೀ ಮಳೆಯಾಗುವ ಸಾಧ್ಯತೆಗಳನ್ನು ಸೂಚಿಸಲಾಗಿದೆ.14ರಂದು ಕೇರಳ ತೀರದಲ್ಲಿ ಗಂಟೆಗೆ 50-60ಕೀ ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೂನ್ 12, 14ರಂದು…

Read More
error: Content is protected !!