ಕಡಬದಲ್ಲಿ ತ್ಯಾಜ್ಯ ಅವ್ಯವಸ್ಥೆ ವಿರುದ್ಧ ಜನರ ಆಕ್ರೋಶ!
ಕಡಬ: ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರ್ ನಲ್ಲಿರುವ ಕಡಬ ಪಟ್ಟಣ ಪಂಚಾಯತ್‌ನ ಘನ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಸ್ಥಳೀಯ ಜನರು ಕೂಡಲೇ ಘಟಕದಲ್ಲಿ ರಾಶಿ ಬಿದ್ದು ಕೊಳೆತು ನಾರುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿ ತ್ಯಾಜ್ಯ ಸಾಗಾಟ ವಾಹನವನ್ನು ತಡೆದು ಪ್ರತಿಭಟಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಕೊಳೆತು ನಾರುತ್ತಿರುವ ತ್ಯಾಜ್ಯ ಘಟಕ ಪ್ರತಿಭಟನೆಯ ವೇಳೆ ಮಾತನಾಡಿದ ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಪಾಲಪ್ಪೆ ಅವರು ಪಟ್ಟಣ ಪಂಚಾಯತ್‌ನ ಅಸಮರ್ಪಕ…
