Headlines

ಡಾ.ವಹಿದಾ ಸುಲ್ತಾನರಿಗೆ ಮಂಗಳೂರು ವಿ.ವಿ. ನುಡಿನಮನ

ಕೊಣಾಜೆ:ಇತ್ತೀಚೆಗೆ ಮೈಸೂರಿನಲ್ಲಿ ನಿಧನರಾದ ಮಂಗಳೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕಿ ಡಾ.ವಹಿದಾ ಸುಲ್ತಾನ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಸಿಜೆ ವಿಭಾಗದ ವತಿಯಿಂದ ಶ್ರದ್ಧಾಂಜಲಿ ಸಭೆ ನುಡಿನಮನ ಕಾರ್ಯಕ್ರಮ ನಡೆಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ನುಡಿನಮನ ಸಲ್ಲಿಸಿ ಮಾತನಾಡಿ ಪ್ರಾಮಾಣಿಕತೆ, ವಿನಯತೆ ಹಾಗೂ ಸರಳ ವ್ಯಕ್ತಿತ್ವದ ಸಹೃದಯಿ ಪ್ರಾಧ್ಯಾಪಕಿಯಾಗಿದ್ದ ಡಾ.ವಹಿದಾ ಸುಲ್ತಾನ ಮಂಗಳೂರು ವಿ.ವಿ.ಯಲ್ಲಿ ಅನೇಕ ಜವಬ್ಧಾರಿಯೊಂದಿಗೆ ಉತ್ತಮ ಆಡಳಿತಗಾರರೂ ಆಗಿದ್ದರು. ವಿದ್ಯಾರ್ಥಿಗಳಿಗೆ, ಬಡಮಕ್ಕಳಿಗೆ ಸಂಕಷ್ಟಗಳು ಎದುರಾದಾಗ ಸಹಾಯ ಮಾಡುವ ತಾಯಿ ಹೃದಯ ಅವರದ್ದಾಗಿತ್ತು. ಅವರ ಕೊಡುಗೆ,…

Read More

ನಾಟಕ ಕಲಾವಿದರು,ಸಂಗೀತಗಾರರ ಮಾಹಿತಿಗಾಗಿ ಕೋರಿಕೆ

ಕನ್ನಡ ಭಾಷೆಯಲ್ಲಿ ನಾಟಕಗಳಲ್ಲಿ ನಟರಾಗಿ ಪಾತ್ರ ಮಾಡಿರುವ, ನಿರ್ದೆಶಕರಾಗಿ ಕೆಲಸ ಮಾಡಿರುವವರು ತಮ್ಮ ಮಾಹಿತಿ ಒದಗಿಸಬೇಕು. ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಸಹ‌ ತಮ್ಮ ಮಾಹಿತಿ ನೀಡಬಹುದು. ತಮ್ಮ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವದು. ಸೂಕ್ತವಾದವುಗಳನ್ನು ಪತ್ರಿಕೆಯಲ್ಲಿ ಲೇಖನವಾಗಿ ಪ್ರಕಟಿಸಲಾಗುವದು. ನಾಟಕ ಕ್ಷೇತ್ರ ಮತ್ತು ಸಂಗೀತ ಕ್ಷೇತ್ರದ ಸಾಧಕರು ತಮ್ಮ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಜನನ ದಿನಾಂಕ, ಜನನ ಗ್ರಾಮ, ಆಯಾ ಕ್ಷೇತ್ರದಲ್ಲಿ ತಮಗೆ ಆಸಕ್ತಿ ಬಂದಿರುವ ವಿವರಗಳನ್ನು ನೀಡಬೇಕು. ಸಾಧನೆ…

Read More

ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ

ವೇಣೂರು: 2008ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ವೇಣೂರು ಪೊಲೀಸ್ ಠಾಣಾ ಅಕ್ರ 71/2008, ಕಲಂ 457 ಮತ್ತು 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಮ್ಮದ್ ಶರೀಪ್ (46) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಸಂಖ್ಯೆ 535/2016ರಂತೆ ನ್ಯಾಯಾಲಯದ ವಾರಂಟ್ ಜಾರಿಯಾಗಿತ್ತು. ಆಗಸ್ಟ್ 13ರಂದು ವೇಣೂರು ಠಾಣೆಯ ಎಎಸ್‌ಐ ಬೆಣ್ಣಿಚನ್, ಪಿಸಿ ಬಸವರಾಜ್ ಹಾಗೂ ಬೆಳ್ತಂಗಡಿ ಉಪವಿಭಾಗ ಕಚೇರಿಯ ಸಿಬ್ಬಂದಿ ಪ್ರವೀಣ್ ಎಂ. ಅವರ ತಂಡ…

Read More

34ನೇ ನೆಕ್ಕಿಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಅಸಮರ್ಪಕ ತಾಜ್ಯ ನಿರ್ವಹಣೆಯ ಬಗ್ಗೆ ಪುತ್ತಿಲ ಪರಿವಾರದಿಂದ ತಾಜ್ಯ ಘಟಕ ಕ್ಕೆ ಭೇಟಿ ಹಾಗೂ ಸಮರ್ಪಕ ನಿರ್ವಹಿಸಲು ಮನವಿ

34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲಿನಂತೆ ಪ್ರತಿದಿನ ಕಸ ಸಂಗ್ರಹಣೆ ಹಾಗೂ ಡೈಪರ್‌ಗಳನ್ನು ಪ್ರತಿದಿನ ಸಂಗ್ರಹಿಸುವಂತೆ ಮತ್ತು ಶಾಂತಿನಗರ ದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಜ್ಯ ನಿರ್ವಹಣೆ ಘಟಕದಲ್ಲಿ ನಿರ್ವಹಣೆ ಸರಿಯಾಗಿ ನಿರ್ವಹಿಸದೆ ಗಬ್ಬು ವಾಸನೆ ಯಿಂದ ಸ್ಥಳೀಯ ನಿವಾಸಿಗಳಿಗೆ ಅರೋಗ್ಯ ಸಮಸ್ಯೆ ಉಂಟಾಗುವ ಸಂಭವ ಇರುವ ಕಾರಣ ಈ ಕೂಡಲೇ ಸಮರ್ಪಕ ನಿರ್ವಹಣೆ ಮಾಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಪಂಚಾಯತ್ ಎದುರು ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ…

Read More

ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳು ವಶಕ್ಕೆ

ದಿನಾಂಕ 12.08.2026 ರಂದು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐ.ಪಿ.ಎಸ್ ರವರ ನೇತೃತ್ವದ ತಂಡವು, ಬಂಟ್ವಾಳ‌ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿ, ಸುಮಾರು 2 ಲಕ್ಷ 25 ಸಾವಿರ ಮೌಲ್ಯದ 22.57 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಹಾಗೂ 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್‌ ಗಳು ಸೇರಿದಂತೆ ಒಟ್ಟು 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳನ್ನು…

Read More

ದಲಿತ ನಾಯಕರನ್ನು ಅವಮಾನಿಸುವ ಮನೋಭಾವ ಖಂಡನೀಯ: ಕುಳಾಲು ಸುಭಾಶ್ಚಂದ್ರ ಶೆಟ್ಟಿ

ಮಂಗಳೂರು: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಬಳಿಕ, ಮೈದಾನ ಅಶುದ್ಧಗೊಂಡಿದೆ ಎಂಬ ಅಸಾಂವಿಧಾನಿಕ ಹಾಗೂ ಅವಮಾನಕಾರಿ ಹೇಳಿಕೆ ನೀಡಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಶುದ್ಧೀಕರಣ ನಡೆಸಿರುವುದನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ದಲಿತರು ಹಾಗೂ ಶೋಷಿತ ಸಮುದಾಯದ ನಾಯಕರನ್ನು ಅವಮಾನಿಸುವಂತಹ ಮನೋಭಾವ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಕ್ಕೆ…

Read More

ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ- ಕರ್ನಾಟಕ ಉತ್ಸವ,ಕೇರಳ- ಕರ್ನಾಟಕ ಭವನ ಶಿಲಾನ್ಯಾಸಕ್ಕೆ ಗಣ್ಯರು ಸಾಂಸ್ಕೃತಿಕ ರಾಯಭಾರಿಗಳು ಸ್ವಾಮೀಜಿಗಳಿಗೆ ಅಹ್ವಾನ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ,ಇತಿಹಾಸ ಪರಂಪರೆಯನ್ನು ಅಂತರ ರಾಜ್ಯದ್ಯಂತ ಕನ್ನಡ ಜನತೆಗೆ ತಲುಪಿಸುವ ಉದ್ದೇಶದಿಂದ ಕೇರಳ,ಕರ್ನಾಟಕ ಹಾಗೂ ಅಖಿಲ ಭಾರತ ಮತ್ತು ಆನಿವಾಸಿ ಭಾರತೀಯ ಕನ್ನಡಿಗರು,ಕಲಾವಿದರು, ಸಾಹಿತಿಗಳನ್ನು ಆಮಂತ್ರಿಸಿ ರಾಜ್ಯ,ರಾಷ್ಟ್ರೀಯ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯಕ್ಕಾಗಿ ಕಾಸರಗೋಡಿನ ಮೀಪುಗುರಿ- ಪಾರೆಕಟ್ಟೆಯ…

Read More

ಪತ್ರಿಕಾ ವರದಿ: ಪರಿಸರ ಅಧ್ಯಯನ ಮತ್ತು ವಿಪತ್ತು ನಿರ್ವಹಣೆ ಪುಸ್ತಕ ಬಿಡುಗಡೆ

ಬೆಂಗಳೂರು: ಪರಿಸರ ಶಿಕ್ಷಣ ಮತ್ತು ವಿಪತ್ತು ನಿರ್ವಹಣೆಯ ಕುರಿತಾದ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರ ಐದನೇ ಕೃತಿ ‘ENVIRONMENT STUDIES & DISASTER MANAGEMENT’ (ಪರಿಸರ ಅಧ್ಯಯನ ಮತ್ತು ವಿಪತ್ತು ನಿರ್ವಹಣೆ) ಪುಸ್ತಕವನ್ನು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಗೌರವಾನ್ವಿತ ಶ್ರೀ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸಲು IAS, ಸದಸ್ಯ ಕಾರ್ಯದರ್ಶಿ ಶ್ರೀ…

Read More

ಸಮಾಜಮುಖಿ ಉದ್ಯಮಿ ಧರ್ಮೇಂದ್ರ ಶೆಟ್ಟಿ ನಿಧನ

ಮಂಗಳೂರು: ಮಂಗಳೂರಿನ ಹೆಸರಾಂತ ಶೆಟ್ಟಿ ಟ್ರೇಡರ್ಸ್ ಸಂಸ್ಥೆಯ ಮಾಲಕ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಧರ್ಮೇಂದ್ರ ಶೆಟ್ಟಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧರ್ಮೇಂದ್ರ ಶೆಟ್ಟಿ ಅವರು ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯುವಕರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಅವರು, ಹಲವಾರು ಯುವಕರ ಪ್ರೀತಿ, ವಿಶ್ವಾಸ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಬಹರೈನ್‌ನಲ್ಲಿಯೂ ಹಲವು ವರ್ಷಗಳ ಕಾಲ ವ್ಯವಹಾರ ನಡೆಸಿದ್ದ ಧರ್ಮೇಂದ್ರ ಶೆಟ್ಟಿ ಅವರು, ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಿದ್ದರು ಎನ್ನಲಾಗಿದೆ….

Read More

ಮಂಜೇಶ್ವರ: ಕೆಲಸಕ್ಕೆಂದು ಮನೆಯಿಂದ ಹೊರಟ ಯುವತಿ ನಾಪತ್ತೆ

ಮಂಜೇಶ್ವರ: ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಈ ಕುರಿತು ಯುವತಿಯ ತಾಯಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ​ಪೈವಳಿಕೆ ಆಜಾದ್‌ನಗರ ನಿವಾಸಿ ಫಾತಿಮತ್ ಮಕ್ನಾಸ್ (19) ನಾಪತ್ತೆಯಾದ ದುರ್ದೈವಿ. ಈಕೆ ಉಪ್ಪಳದ ಖಾಸಗಿ ವ್ಯಾಪಾರ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಳು. ಎಂದಿನಂತೆ ಬುಧವಾರ ಬೆಳಿಗ್ಗೆ ಯುವತಿ ಮನೆಯಿಂದ ಕೆಲಸಕ್ಕೆ ತೆರಳಿದ್ದಳು. ಆದರೆ, ಸಂಜೆ ಎಷ್ಟು ಹೊತ್ತಾದರೂ ಮರಳಿ ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಕುಟುಂಬಸ್ಥರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಾಯಿ…

Read More
error: Content is protected !!