K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ

ಮಂಜೇಶ್ವರ: ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ತನ್ನದೇ ವಿಶಿಷ್ಟತೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ದೀನ ದಲಿತರ ಸೇವೆಗಾಗಿ, ಅಸಹಾಯಕ ಕುಟುಂಬಗಳ ಕಲ್ಯಾಣಕ್ಕೆ ಸಂಪೂರ್ಣ ತೊಡಗಿಸಿ, ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಸಮಾಜಮುಖಿ ಸೇವಾ ಕಾರ್ಯ ಮಾಡುವ ಯುವ ನಾಯಕ, K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ ಪ್ರಧಾನಿಸಲಾಯಿತು.

Read More

ಮತದಾರರ ಪಟ್ಟಿ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ಧೇಶಗಳನ್ನು ಕನ್ನಡದಲ್ಲೂ ಒದಗಿಸಿ : ಬಾಕುಡ ಸಮಾಜ ಕೇಂದ್ರ ಸಮಿತಿ

ಮಂಜೇಶ್ವರ :ಚುನಾವಣೆಗೆ ಸಂಬಂಧಿಸಿ ಬಿ ಎಲ್ ಒ ಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಶನ್ ಫಾರ್ಮ್ ಮಲಯಾಳದಲ್ಲಿ ಮಾತ್ರವೇ ಮುದ್ರಣಗೊಂಡಿರುವುದು ಖಂಡನೀಯವಾಗಿದ್ದು ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಕನ್ನಡ ಭಾಷೆಯನ್ನು ಓದಲು ಬರೆಯಲು ತಿಳಿದವರಾಗಿದ್ದು ಈ ರೀತಿಯ ತಾರತಮ್ಯ ನೀತಿಯಿಂದ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡತ್ತಾಗಿದೆ. ಮಲಯಾಳಂನಲ್ಲಿ ಮಾತ್ರವೇ ಇರುವ ಫಾರ್ಮ್ ನ್ನು ಕನ್ನಡಿಗರು ಭರ್ತಿಗೊಳಿಸುವ ಸಂದರ್ಭದಲ್ಲಿ ತಪ್ಪಾದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಆದ್ದರಿಂದ ಕಾಸರಗೋಡಿನಲ್ಲಿ ಮಲಯಾಳಂ ಜೊತೆಗೆ ಕನ್ನಡದಲ್ಲೂ ಫಾರ್ಮ್, ಅರ್ಜಿಗಳನ್ನು ವಿತರಣೆ…

Read More

ಮಾಜಿ ಕ್ರಿಕೆಟ್ ಆಟಗಾರರು, ಬಿಸಿಸಿಐ ಕೋಶಾಧಿಕಾರಿ ರಘುರಾಮ್ ಭಟ್ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ

ಮಾಜಿ ಕ್ರಿಕೆಟ್ ಆಟಗಾರರು, ಬಿಸಿಸಿಐ ಕೋಶಾಧಿಕಾರಿ ರಘುರಾಮ್ ಭಟ್ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರನ್ನು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಗೌರವಿಸಿದರು. ಬಿರುವೆರ್ ಕುಡ್ಲ ಸಂಸ್ಥಾಪಕರಾದ ಉದಯ್ ಪೂಜಾರಿ ಬಳ್ಳಾಲ್‌ಭಾಗ್ ಮೊದಲಾದವರಿದ್ದರು.

Read More

ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ದಕ್ಷಿಣ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ 2025-26

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಮತ್ತು ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ಪೆರ್ಮನ್ನೂರು ಸಂಯುಕ್ತ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ 2025-26 ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು. ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಂದನೀಯ ಫಾದರ್ ಆಂಟೋನಿ ಲಸ್ರಾದೋ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಎಂಬುದು…

Read More

ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ.ಆ್ಯಂಡ್ರಿಯಾ ಫಾನ್ರಿಯಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ .

ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ.ಆ್ಯಂಡ್ರಿಯಾ ಫಾನ್ರಿಯಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಅವರು ಹರ್ಷ ವ್ಯಕ್ತಪಡಿಸಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ‌ಪ್ರಧಾನ ಧರ್ಮಗುರು ಫಾ.ಜೋಸೆಫ್, ಬಿಜು ಎಂ. ಜೋಸೆಫ್ ಮಂಗಳೂರು, ಮನೋಜ್ ಜತೆಗಿದ್ದರು. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಕಾರ್ಪೋರೆಟರ್ ಪ್ರವೀಣ್‌ಚಂದ್ರ ಆಳ್ವ, ದಿನೇಶ್ ಅಂಚನ್ ಅವರನ್ನು‌…

Read More

ಡಾ.ಕೆ ವಾಮನ್ ರಾವ್ ಬೇಕಲ್ ರ ಬಗ್ಗೆ ಬರೆದ ಕೃತಿ ಲೋಕಾರ್ಪಣೆ.

ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ಕೆ. ವಾಮನ್ ರಾವ್ ಬೇಕಲ ಎಂಬ ಪುಸ್ತಕ,… ಡಾ. ನಾ. ಮೊಗಸಾಲೆ ಸಾರತ್ಯದ ಕನ್ನಡ ಸಂಘ ಕಾಂತಾವರ “ನಾಡಿಗೆ ನಮಸ್ಕಾರ ಪುಸ್ತಕ ಮಾಲೆಯಲ್ಲಿ ಪ್ರಕಟಗೋಳಿಸಿದೆ. ನವೆಂಬರ್ ಒಂದರಂದು, ಕನ್ನಡ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘ ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನಃರೂರು ಅದ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಗೊಂಡಿತ್ತು. ಕಾಸರಗೋಡು ಕನ್ನಡ ಭವನಕ್ಕೆ ದಿನಾಂಕ 3.11.2025 ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರು, ಹಾಗೂ ಮುಂಬರುವ ಕ….

Read More

ಕರ್ನಾಟಕ ಪ್ರೌಢ ಶಾಲೆ ಮಾಣಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ರಚನಾ ಕಮ್ಮಟ- ಕವಿಗೋಷ್ಠಿ

ಕರ್ನಾಟಕ ರಾಜ್ಯ ಬರಹಗಾರರ ವೇದಿಕೆ (ರಿ) ಹೂವಿನಹಡಗಲಿ ದ.ಕ. ಕನ್ನಡ ಜಿಲ್ಲೆ, ಬಂಟ್ವಾಳತಾಲೂಕು ಘಟಕ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ) ಹುಬ್ಬಳ್ಳಿ – ತಾಲೂಕು ಸಮಿತಿ ಬಂಟ್ವಾಳ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇವುಗಳ ಸಹಭಾಗಿತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನಾ ಕಮ್ಮಟ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.ನಿವೃತ್ತ ಸಂಸ್ಕೃತ ಶಿಕ್ಷಕ ಶಿರಂಕಲ್ಲು ಕೃಷ್ಣ ಭಟ್ ಉದ್ಘಾಟಿಸಿದರು. ‘ಸಾಹಿತ್ಯದ ಅಭಿರುಚಿ ಮನೆಯಿಂದ ಆರಂಭವಾಗಿ ಶಾಲೆಯಲ್ಲಿ ಉನ್ನತಿ ಹೊಂದಿ ಸಮಾಜದಲ್ಲಿ ಪ್ರಸ್ತುತಿಗೊಳ್ಳಬೇಕು. ಭೂಮಿಗೆ…

Read More

ಮಂಜೇಶ್ವರ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ ದೊರಕಿತು. ಸ್ಥಳೀಯ ಹಿರಿಯ ಪತ್ರಕರ್ತ ಅಬ್ದುಲ್ ರಹ್ಮಾನ್ ರವರಿಗೆ ಬೂತ್ ಲೆವಲ್ ಅಧಿಕಾರಿ ಹರಿಣಾಕ್ಷಿ ಫಾರಂ ಹಸ್ತಾಂತರಿಸುವ ಮೂಲಕ ಈ ಪ್ರಕ್ರಿಯೆಗೆ ಕೇರಳದ ತುದಿಯಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತದಾರರ ಪಟ್ಟಿಯ ನಿಖರತೆ ಮತ್ತು ನವೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಪ್ರತಿ ಅರ್ಹ ನಾಗರಿಕರೂ ತಮ್ಮ ಹೆಸರು, ವಿಳಾಸ ಮತ್ತು ಇತರೆ ವಿವರಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು. ಎಸ್‌ಐಆರ್…

Read More

ಕಾಸರಗೋಡು: ಸ್ಕೂಟರ್-ಕಾರಿನ ನಡುವೆ ಅಪಘಾತ; ಬಿಜೆಪಿ ಕಾರ್ಯಕರ್ತ ಮೃತ್ಯು .

ಸ್ಕೂಟರ್ ಹಾಗೂ ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ ನಲ್ಲಿ ನಡೆದಿದೆ. ಆರಿಕ್ಕಾಡಿ ಪಾರೆಸ್ಥಾನ ಸಮೀಪದ ಎನ್.ಹರೀಶ್ ಕುಮಾರ್ (37) ಮೃತ ದುರ್ದೈವಿ. ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಹರೀಶ್ ಬಿಜೆಪಿ ಕಾರ್ಯಕರ್ತರಾಗಿದ್ದರು. ಅಪಘಾತದಿಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಗಾಯಗೊಂಡ ಹರೀಶ್ ಕುಮಾರ್ ರನ್ನು ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.ಸ್ಕೂಟರ್ ಕಾಸರಗೋಡಿನಿಂದ ಕುಂಬಳೆ ಕಡೆಗೆ…

Read More

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಚಾಂಪಿಯನ್ ಶಿಪ್ ಪಡೆದುಕೊಂಡ ಜಿ.ಎಲ್.ಪಿ.ಯಸ್. ವಾಮಂಜೂರು ಶಾಲೆ

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಜಿ.ಎಲ್.ಪಿ.ಯಸ್.ವಾಮಂಜೂರು ಶಾಲೆ ಎಲ್.ಪಿ ಜನರಲ್ ವಿಭಾಗದಲ್ಲಿ ಪ್ರಥಮ ಸ್ಥಾನ ವನ್ನು ಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.ಅರೆಬಿಕ್ ಶಾಲಾ ಕಲೋತ್ಸವದಲ್ಲಿ ರನ್ನರ್ ಅಪ್ ಆಗಿ ಮೂಡಿಬಂದಿದೆ. ಈ ಸಂತೋಷದ ವಿಚಾರವನ್ನು ಪ್ರಕಟ ಪಡಿಸಲು ಶಾಲೆಯಿಂದ ಹೊರಟು ಹೊಸಂಗಡಿ ಪೇಟೆಗೆ ಮೆರವಣಿಗೆಯ ಮೂಲಕ ಸಾಗಿ ವಿಜಯೋತ್ಸವವನ್ನು ಆಚರಿಸಲಾಯಿತು.. ಮೆರವಣಿಗೆಯ ನೇತೃತ್ವವನ್ನು ಪಿ.ಟಿ.ಎ.ಅಧ್ಯಕ್ಷ ರಾದ ಶ್ರೀಯುತ ಕಲಂದರ್ ತಾಜುದ್ದೀನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಶೇಖ್ ಉಸ್ಮಾನ್, ಯಂ.ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ರಮೀಝ,…

Read More
error: Content is protected !!