ಮಂಜೇಶ್ವರ : ವನಿತಾ ತರಬೇತಿ ಕೇಂದ್ರ ಉದ್ಘಾಟನೆ .
ಮಂಜೇಶ್ವರ ಬಡಾಜೆ ಕಲ್ಲ ದೇವಸ್ಥಾನ ಬಳಿ ಮಂಜೇಶ್ವರ ಗ್ರಾಮ ಪಂಚಾಯತ್ ಅನುದಾನದೊಂದಿಗೆ ನಿರ್ಮಿಸಲಾದ ವನಿತಾ ತರಬೇತಿ ಕೇಂದ್ರದ ಉದ್ಘಾಟನೆ ಜರಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಸಿದ್ದಿಕ್ ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ದೀಪ ಪ್ರಜ್ವಲನಗೈದು ಉದ್ಧಾಟಿಸಿ ಶುಭ ಹಾರೈಸಿದರು. ಸ್ಫೂರ್ತಿ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಮ್ಯಾನೇಜರ್ ಮಧುಸೂದನ ಬಳ್ಳಕ್ಕುರಾಯ, ಸಿಡಿಎಸ್ ಸದಸ್ಯೆ ಪ್ರಭಾವತಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕುಟುಂಬಶ್ರೀ ಮಂಜೇಶ್ವರ ಚಯರ್ ಪರ್ಸನ್…