ಅಂಬಿತಾಡಿ ಗೇರುಕಟ್ಟೆ ರಸ್ತೆ ಬದಿಯ ತೋಡಿನಲ್ಲಿ ತುಂಬಿದ ತ್ಯಾಜ್ಯ: ವಾಹನದಲ್ಲಿ ತ್ಯಾಜ್ಯವನ್ನು ತಂದು ಬಿಸಾಕುತ್ತಿರುವುದಾಗಿ ಸ್ಥಳೀಯರ ದೂರು
ಅಂಬಿತಾಡಿ: ನೂರಾರು ವಾಹನಗಳು ಹಾಗೂ ದಾರಿಹೋಕರು ಸಂಚರಿಸುವ ಅಂಬಿತಾಡಿ–ಗೇರುಕಟ್ಟೆ ರಸ್ತೆಯಲ್ಲಿರುವ ತೋಡನ್ನು ಕಸದ ತೊಟ್ಟಿಯಂತೆ ಬಳಸಲಾಗುತ್ತಿದ್ದು, ಸ್ಥಳೀಯ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಸಂಚರಿಸುವವರು ಕೂಡ ನಿರ್ಬಂಧವಿಲ್ಲದೆ ಕಸವನ್ನು ಬಿಸಾಡುತ್ತಿರುವುದು ಕಂಡುಬಂದಿದೆ. ಇದಲ್ಲದೆ, ವೈದ್ಯಕೀಯ ತ್ಯಾಜ್ಯವನ್ನು ಕೂಡ ಇಲ್ಲಿ ಎಸೆಯಲಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದೀಗ ತೋಡು ಕಸ ತ್ಯಾಜ್ಯದಿಂದ ತುಂಬಿ ತೋಡು ಕಣ್ಮರೆಯಾಗುವ ಸ್ಥಿತಿ ತಲುಪಿದೆ ಇನ್ನೂ ಒಂದು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿರುವುದರಿಂದ, ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದೆ ಕೃತಕ ನೆರೆ ಸೃಷ್ಟಿಯಾಗಿ…
