ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಿಕೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ನ್ಯಾಯಾಲಯವು ಸೆ.30ಕ್ಕೆ ಮುಂದೂಡಿದೆ. ಶನಿವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಸಕಾರಿ ವಕೀಲರು ಸಮಯಾವಕಾಶ ಕೋರಿದ್ದಾರೆ ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಸೆ.30ಕ್ಕೆ ವಿಚಾರಣೆಯ ನ್ನು ಮುಂದೂಡಿದ್ದಾರೆ.

Read More

ರಚನಾತ್ಮಕ ಹೃದಯ ಮಧ್ಯಸ್ಥಿಕೆಯ ಚಿಕಿಸ್ತಾ ವಿಧಾನದಿಂದ ಗುಣಮುಖರಾದ ರೋಗಿಗಳ ಸಮುಖದಲ್ಲಿ ಹೃದಯ ದಿನಾಚರಣೆಯನ್ನು ಆಚರಿಸಿದ ಇಂಡಿಯಾನಾ ಆಸ್ಪತ್ರೆ.

ಮಂಗಳೂರು: ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ಮಂಗಳೂರು ತನ್ನ 2 ನೇ ವರ್ಷದ ರಚನಾತ್ಮಕ ಹೃದಯ ಮದ್ಯಸ್ಥಿಕೆಗಳೊಂದಿಗೆ ವಿಶ್ವ ಹೃದಯ ದಿನಾಚರಣೆಯನ್ನು TAVR/TAVI, TMVR, TTVR, ಮತ್ತು MitraClip ಕಾರ್ಯ ವಿಧಾನಗಳಂತಹ ಮುಂದುವರಿದ ರಚನಾತ್ಮಕ ಹೃದಯ ಮಧ್ಯಸ್ಥಿಕೆಯ ಚಿಕಿಸ್ತಾ ವಿಧಾನದಿಂದ ಯಶಸ್ವಿಯಾಗಿ ಗುಣ ಮುಖ ಹೊಂದಿದ ರೋಗಿಗಳನ್ನು ಸನ್ಮಾನಿಸುವ ಮೂಲಕ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತ್ತು . ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ , ಇಂದಿನ…

Read More

ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ . ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯ.

ಮಂಜೇಶ್ವರ : ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಮತ್ತು ಕಾಸರಗೋಡು ಕಡೆಗೆ ಬರುತ್ತಿದ್ದ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕಾರ್ಮಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Read More

ಪಡುಬಿದ್ರಿ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಪಿಕಪ್ ಗೆ ಟಿಪ್ಪರ್ ಡಿಕ್ಕಿ; ಭೀಕರ ಅಪಘಾತಕ್ಕೆ ನವ ವಿವಾಹಿತ ಬಲಿ.

ಉಡುಪಿ: ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ನವ ವಿವಾಹಿತನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.ಮೃತನನ್ನು ಬಿಹಾರ ಮೂಲದ ಎರ್ಮಾಳಿನ ಪ್ರೈವುಡ್ ಫ್ಯಾಕ್ಟರಿ ಉದ್ಯೋಗಿ ರಾಜಕುಮಾರ ಶರ್ಮ(23) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿ ಪೇಟೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರ…

Read More

ಅಫೀಮು ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳ ಬಂಧನ.

ಮಂಗಳೂರು: ಎಸಿಪಿ ತಂಡ ಮತ್ತು ಬರ್ಕೆ ಪೊಲೀಸರ ಜಂಟಿ ಕಾರ್ಯಾಚರಣೆ ಯಲ್ಲಿ ಅಫೀಮು ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ರಾಜಸ್ಥಾನ ಮೂಲದ ವಾಸುದೇವ(48) ಮತ್ತು ಈತನಿಗೆ ಮಾದಕ ವಸ್ತುವನ್ನು ಪೂರೈಸಿದ್ದ ರಾಜಸ್ಥಾನ್ ಮೂಲದ ಮಂಗಲ್ ಚೌಧರಿ(44) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು ನಲ್ವತ್ತು ಸಾವಿರ ರೂಪಾಯಿ ಬೆಲೆಬಾಳುವ 151 ಗ್ರಾಂ ಓಪಿಯಂ ಮಾದಕ ವಸ್ತು, 2 ಮೊಬೈಲ್, ಒಂದು ದ್ವಿಚಕ್ರ ವಾಹನ ವಶಪಡಿಸಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು…

Read More

ಆರ್ಥಿಕತೆಯು ಬಲಗೊಂಡಂತೆ ತೆರಿಗೆ ಹೊರೆ ಮತ್ತಷ್ಟು ತಗ್ಗಲಿದೆ: ಪ್ರಧಾನಿ ಮೋದಿ

ನೋಯಿಡಾ: ಭಾರತದ ಆರ್ಥಿಕತೆಯು ಹೆಚ್ಚು ಬಲಗೊಂಡಂತೆ ಜನರ ಮೇಲಿನ ತೆರಿಗೆ ಹೊರೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಜಿಎಸ್‌ಟಿ ಸುಧಾರಣೆ ನಿರಂತರ ಪ್ರಕ್ರಿಯೆ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ಯುಪಿ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ (ಯುಪಿಐಟಿಎಸ್) ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಜಿಎಸ್‌ಟಿಯಲ್ಲಿನ ಇತ್ತೀಚಿನ ರಚನಾತ್ಮಕ ಸುಧಾರಣೆಗಳು ಭಾರತದ ಬೆಳವಣಿಗೆಗೆ ಹೊಸ ರೆಕ್ಕೆಗಳನ್ನು ನೀಡಲಿವೆ. ಜನರಿಗೆ ಹೆಚ್ಚಿನ ಉಳಿತಾಯಕ್ಕೆ ನೆರವಾಗುತ್ತವೆ ಎಂದು ಹೇಳಿದ್ದಾರೆ. 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಸರ್ಕಾರವು ಪರೋಕ್ಷ…

Read More

ಸಾಂಕ್ರಾಮಿಕ ರೋಗದ ಕೇಂದ್ರವಾಗುವತ್ತ ಚರಂಡಿಯ ಈ ಗುಂಡಿ …..?

ಮಂಗಳೂರು: ಚರಂಡಿಗೆಂದು ತೆರದ ಗುಂಡಿ ದಿನಗಳೇ ಕಳೆದಿದೆ. ಆದರೂ ಅದನ್ನು ಮುಚ್ಚದೆ ಹಾಗೇ ಬಿಡಲಾಗಿದ್ದು ಇದೀಗಾ ಅಲ್ಲಿ ನೀರು ಕಟ್ಟಿ ನಿಂತು ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿ ಕೊಡ್ತಾ ಇದೆ . ಈ ಸಾಂಕ್ರಾಮಿಕ ರೋಗದ ಸಂಗ್ರಹಕ ನೀರನ್ನು ಕಟ್ಟಿ ನಿಂತಿರುವ ಸ್ಥಳ ಇರುವುದು ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಗೆ . ಇದೇ ಮಾರ್ಗವಾಗಿ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗುವವರು , ನಗರಕ್ಕೆ ಬರುವವರು ಸಂಚರಿಸ್ತಾ ಇರುತ್ತಾರೆ . ಮಳೆಯಿಂದ ಕಟ್ಟಿನಿಂತ ಈ ನೀರು ಕೊಳಕಾಗಿದ್ದು ಸೊಳ್ಳೆಗಳ…

Read More

ಖಾಸಗಿ ಬಸ್ ಸ್ಟೇರಿಂಗ್ ದೋಷದಿಂದ ಜೀಪ್ ಗೆ ಡಿಕ್ಕಿ. ಜೀಪ್ ಚಾಲಕ ಗಾಯ.

ಬಂಟ್ವಾಳ: ಖಾಸಗಿ ಬಸ್ ಒಂದರ ಸ್ಟೇರಿಂಗ್ ನ ದೋಷ ದಿಂದಾಗಿ ಜೀಪ್ ಗೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಜೀಪ್ ಚಾಲಕನಿಗೆ ಗಾಯವಾಗಿದ್ದು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಜಗನ್ನಾಥ ಎಂಬವರು ಜೀಪ್ ಚಲಾಯಿಸಿಕೊಂಡು ಬಂಟ್ವಾಳದಿಂದ ಮೂಡಬಿದರೆಗೆ ಹೋಗುತ್ತಿರುವ ವೇಳೆ ವೇಣೂರು ನಮನ ಕ್ಲಿನಿಕ್ ಬಳಿ ಬೆಳ್ತಂಗಡಿ ಕಡೆಯಿಂದ ಮೂಡಬಿದರೆಗೆ ಬರುವ ಬಸ್ ನ ಸ್ಟೇರಿಂಗ್ ನಲ್ಲಿ ತಾಂತ್ರಿಕ ದೋಷಗಳು‌ ಉಂಟಾಗಿ ಚಾಲಕನ ನಿಯಂತ್ರಣ ಬಾರದೆ ಬಸ್ ಎದುರುಕಡೆಯಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ…

Read More

ಬಂಟ್ವಾಳ: ನಿಷೇಧಿತ ಗಾಂಜಾ ಮಾರಾಟಗಾರರು ಎನ್ನಲಾಗಿರುವ ಆರೋಪಿಗಳಿಂದ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ,

ಬಂಟ್ವಾಳ: ನಿಷೇಧಿತ ಗಾಂಜಾ ಮಾರಾಟಗಾರರು ಎನ್ನಲಾಗಿರುವ ಆರೋಪಿಗಳು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅಪರಾಧ ಎಸಗಲು ಪ್ರಯತ್ನ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ‌ಅಬಕಾರಿ ನಿರೀಕ್ಷಕರಾದ ಲಕ್ಷ್ಮಣ್ ಹಾಗೂ ಅವರ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರು ಕಡೆಯಿಂದ ಬೊಲೆರೋ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ನಡೆಸುತ್ತಿದ್ದಾರೆ ಮತ್ತು ಅವರು ಬಿಸಿರೋಡು ಕಡೆಗೆ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆದ ಅಬಕಾರಿ ಜಿಲ್ಲಾ ಉಪ ಆಯುಕ್ತರ ನಿರ್ದೇಶನದಂತೆ…

Read More

ರಾಮಕ್ಷತ್ರಿಯ ಸೇವಾ ಸಂಘದಿಂದ ಸೆಪ್ಟೆಂಬರ್ 28ರಂದು “ಅಭಿನಂದನಾ ಸಮಾರಂಭ” ಕಾರ್ಯಕ್ರಮ.

ಮಂಗಳೂರು: ರಾಮಕ್ಷತ್ರಿಯ ಸೇವಾ ಸಂಘ (ರಿ.), ಮಂಗಳೂರು ವತಿಯಿಂದ “ಅಭಿನಂದನಾ ಸಮಾರಂಭ” ಕಾರ್ಯಕ್ರಮವನ್ನು ಸೆಪ್ಟೆಂಬರ್ 28ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ತಿಳಿಸಿದರು. ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 75 ವರ್ಷಗಳ ಪರಂಪರೆಯ ಈ ಸಂಘವು ಸಮಾಜಮುಖಿ ಚಟುವಟಿಕೆಗಳ ಮೂಲಕ ವೈದ್ಯಕೀಯ ಸಹಾಯ, ವಿದ್ಯಾಧನ, ರಕ್ತದಾನ, ಪ್ರತಿಭಾ ಪುರಸ್ಕಾರ ಮತ್ತು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು…

Read More
error: Content is protected !!