ಕನ್ನಡದ ಸಾಮರಸ್ಯದ ನೆಲೆಗಳು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಂದ ಭವ್ಯ ಲೋಕಾರ್ಪಣೆ – ಮಂಗಳೂರಿನಲ್ಲಿ ಪೂರ್ವ ಸಿದ್ಧತಾ ಸಭೆ ಯಶಸ್ವಿ
ದಿನಾಂಕ 13/04/2026 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಕನ್ನಡದ ಸಾಮರಸ್ಯದ ನೆಲೆಗಳು” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗುತ್ತಿರುವ ಮಹತ್ವದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭವ್ಯವಾಗಿ ನಡೆಯಲಿದೆ. ಈ ಪುಸ್ತಕಗಳು ಕರ್ನಾಟಕದ ಸಾಮರಸ್ಯ ಸಂಸ್ಕೃತಿ, ಬಹುಮುಖ ಪರಂಪರೆ ಹಾಗೂ ವೈವಿಧ್ಯತೆಯೊಳಗಿನ ಏಕತೆಯನ್ನು ಪ್ರತಿಬಿಂಬಿಸುವ ಅಮೂಲ್ಯ ಕೃತಿಗಳಾಗಿವೆ. ಈ ಮಹತ್ವದ ಕಾರ್ಯಕ್ರಮದ ಸಿದ್ಧತೆಗಳ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯು ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಯಶಸ್ವಿಯಾಗಿ…
