ಹಾಡಹಗಲೇ ಬೈಕ್ ಕಳ್ಳರ ಅಟ್ಟಹಾಸ: ಪೇಟೆ ಮಧ್ಯೆಯೇ ಪಲ್ಸರ್ ಎಗರಿಸಿದ ಖದೀಮ

​ ಮಂಜೇಶ್ವರ: ಜನನಿಬಿಡ ಕುಂಬಳೆ ಪೇಟೆಯಲ್ಲಿ ಕಳ್ಳರ ಕೈಚಳಕ ಮಿತಿಮೀರಿದ್ದು, ಹೋಟೆಲ್‌ಗೆ ಊಟಕ್ಕೆ ಹೋದ ವ್ಯಕ್ತಿಯ ಬೈಕ್ ನಾಪತ್ತೆಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರು ಕಳೆದ ಶನಿವಾರ ಮಧ್ಯಾಹ್ನ ಬಸ್ ನಿಲ್ದಾಣದ ಹಿಂಭಾಗದ ಹೋಟೆಲ್‌ವೊಂದರ ಎದುರು ತಮ್ಮ ‘ಪಲ್ಸರ್’ ಬೈಕ್ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಕೇವಲ 15 ನಿಮಿಷಗಳ ಅಂತರದಲ್ಲಿ ಹೊರಬಂದಾಗ ಬೈಕ್ ಮಾಯವಾಗಿರುವುದು ಕಂಡುಬಂದಿದೆ.

​ಬೈಕ್ ಕಳ್ಳರ ಈ ದುಸ್ಸಾಹಸ ಕುಂಬಳೆ ಪೊಲೀಸರಿಗೆ ಸವಾಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದಾಗ, ರೈಲ್ವೇ ನಿಲ್ದಾಣದ ಸಮೀಪದ ದೇವಸ್ಥಾನವೊಂದರ ಬಳಿ ಖದೀಮ ಬೈಕ್ ಸವಾರಿ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.

ಆರೋಪಿಯ ಗುರುತು ಪತ್ತೆಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ. ಪೇಟೆಯ ಮಧ್ಯಭಾಗದಲ್ಲೇ ನಡೆಯುತ್ತಿರುವ ಇಂತಹ ಸರಣಿ ಕಳವು ಪ್ರಕರಣಗಳು ಸಾರ್ವಜನಿಕರ ನಿದ್ರೆಗೆಡಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!