ಮಂಜೇಶ್ವರ ಕರಾವಳಿಯಲ್ಲಿ ಕೃತಕ ಪಾರು ಯೋಜನೆ ಯಶಸ್ವಿ: ಮತ್ಸ್ಯ ಸಂಪತ್ತು ವೃದ್ಧಿಯಿಂದ ಮೀನುಗಾರರ ಮುಖದಲ್ಲಿ ಮಂದಹಾಸ
ಮಂಜೇಶ್ವರ: ಸಮುದ್ರದಲ್ಲಿ ಕ್ಷೀಣಿಸುತ್ತಿರುವ ಮತ್ಸ್ಯ ಸಂಪತ್ತನ್ನು ಮರುಪೂರಣ ಮಾಡುವ ಉದ್ದೇಶದಿಂದ ಮೀನುಗಾರಿಕಾ ಇಲಾಖೆಯು ಮಂಜೇಶ್ವರ ಫಿಷಿಂಗ್ ಹಾರ್ಬರ್ ಸಮೀಪ ಜಾರಿಗೆ ತಂದ ‘ಕೃತಕ ಪಾರು’ ಯೋಜನೆ ಭಾರಿ ಯಶಸ್ಸು ಕಂಡಿದೆ. ಯೋಜನೆಯ ಭಾಗವಾಗಿ ಸಮುದ್ರದಾಳದಲ್ಲಿ ಅಳವಡಿಸಲಾದ ಕಾಂಕ್ರೀಟ್ ಬ್ಲಾಕ್‌ಗಳು ಈಗ ಮೀನುಗಳ ಬೃಹತ್ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಕರಾವಳಿಯ ಮೀನುಗಾರರಿಗೆ ಹೊಸ ಆಶಾಕಿರಣವಾಗಿವೆ. ಕೂಂತಳ್ ಮೀನುಗಳ ಲಭ್ಯತೆಯಲ್ಲಿ ಏರಿಕೆ ಸಮುದ್ರದ ಮಲಿನೀಕರಣ ಹಾಗೂ ಹವಾಮಾನ ವೈಪರೀತ್ಯಗಳಿಂದ ನೈಸರ್ಗಿಕ ಹವಳದ ದಿಬ್ಬಗಳು ಕ್ರಮೇಣ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾನವ ನಿರ್ಮಿತ…
